ನವದೆಹಲಿ, ಆಗಸ್ಟ್ 11: ಆರೋಗ್ಯಕ್ಕೆ ಇಲ್ಲವೇ ಮೆಡಿಕಲ್ ವೆಚ್ಚಕ್ಕೆ ಮಾಡಿರುವ ಹಣಕ್ಕೂ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುವ ವಿಚಾರ ಹಲವರಿಗೆ ಗೊತ್ತಿಲ್ಲದೆ ಇರಬಹುದು. ವೈದ್ಯಕೀಯ ಚಿಕಿತ್ಸಾ ವೆಚ್ಚಗಳನ್ನು ಸ್ವಂತಕ್ಕೆ ಮಾಡಿಕೊಂಡಿದ್ದರೂ ಅಥವಾ ಕುಟುಂಬದ ಇತರ ಸದಸ್ಯರ ಚಿಕಿತ್ಸೆಗೆ ವೆಚ್ಚ ಮಾಡಿದ್ದರೂ ತೆರಿಗೆ ಲಾಭ ಪಡೆದುಕೊಳ್ಳಬಹುದು.
ಜಂಜಾಟದ ಈ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಅಗತ್ಯವಾಗಿದೆ. ಆರೋಗ್ಯ ವಿಮೆಯಿಂದ ತೆರಿಗೆಯನ್ನೂ ಉಳಿಸಬಹುದು. ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸೆಕ್ಷನ್ 80D ತೆರಿಗೆ ವಿನಾಯಿತಿ ಸಿಗುತ್ತದೆ. ನೀವೇನಾದ್ರೂ ಒಂದು ಮೆಡಿಕ್ಲೈಮ್ ಪಾಲಿಸಿಯನ್ನು ನಿಮಗೆ, ನಿಮ್ಮ ಪತ್ನಿಗೆ, ಹಾಗೂ ನಿಮ್ಮ ಮಗುವಿಗೆಂದು ಕೊಂಡರೆ, ನಿಮಗೆ 25,000 ರೂ. ರಿಬೇಟ್ ಸಿಗುತ್ತೆ. ನೀವೇನಾದರೂ ಹಿರಿಯ ನಾಗರಿಕರಾಗಿದ್ದರೆ, ನಿಮಗೆ 50,000 ರೂ. ರಿಬೇಟ್ ದೊರೆಯುತ್ತದೆ. ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ, ನಿಮಗೆ ಪ್ರತ್ಯೇಕವಾಗಿ 50,000 ರೂ. ರಿಬೇಟ್ ನೀವೂ ಮತ್ತು ನಿಮ್ಮ ಪೋಷಕರೂ ಸಹ ಹಿರಿಯ ನಾಗರಿಕರಾಗಿದ್ದರೆ, 1 ಲಕ್ಷ ರೂವರೆಗೆ ತೆರಿಗೆ ಕಡಿತದ ಲಾಭ ಸಿಗುತ್ತದೆ.

ನೀವೇನಾದ್ರೂ ಅಂಗವಿಕಲ ವ್ಯಕ್ತಿಯೊಬ್ಬನ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದ್ದರೆ, ಸೆಕ್ಷನ್ 80ಡಿಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಅಂತಹ ಅಂಗವಿಕಲ ವ್ಯಕ್ತಿ ಪೋಷಕರು, ಪತ್ನಿ, ಮಗು, ಸೋದರ, ಅಥವಾ ಸೋದರಿ ಯಾರು ಬೇಕಾದರೂ ಆಗಿರಬಹುದು, ಆದರೆ ಅವರು ತೆರಿಗೆದಾರನನ್ನು ಅವಲಂಬಿಸಿರಬೇಕು. ಹಿಂದೂ ಅವಿಭಕ್ತ ಕುಟುಂಬದ ವಿಷಯದಲ್ಲಿ, ಆ ಅವಲಂಬಿತ ವ್ಯಕ್ತಿಯು ಕುಟುಂಬದ ಯಾವುದೇ ಸದಸ್ಯನಾಗಿರಬಹುದು. ಅವಲಂಬಿತ ವಿಶೇಷಚೇತನ ವ್ಯಕ್ತಿಯ ದೈಹಿಕ ನ್ಯೂನ್ಯತೆ ಶೇ 40ರಷ್ಟು ಅಥವಾ ಅದಕ್ಕೂ ಹೆಚ್ಚಾಗಿದ್ದರೆ, 75,000 ರೂ. ವರೆಗಿನ ವೈದ್ಯಕೀಯ ವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗೆಯೇ, ದೈಹಿಕ ನ್ಯೂನ್ಯತೆ ಶೇ. 80ರಷ್ಟು ಅಥವಾ ಅದಕ್ಕೂ ಹೆಚ್ಚಾಗಿದ್ದರೆ, 1.25 ಲಕ್ಷ ರೂ. ವರೆಗೆ ವೈದ್ಯಕೀಯ ವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಈ ಸೌಲಭ್ಯ ಪಡೆಯಲು ಸಂಬಂಧಿಸಿದ ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ.
ಶ್ರವಣ ದೋಷ, ಬುದ್ಧಿಮಾಂದ್ಯತೆ, ಮಾನಸಿಕ ಕಾಯಿಲೆ, ಆಟಿಸಮ್ ಅಂಧತ್ವ, ಅಲ್ಪದೃಷ್ಟಿ, ಕುಷ್ಠ ರೋಗ, ಮತ್ತೂ ನಡೆಯಲು ಅಸಾಧ್ಯವಾದ ಸ್ಥಿತಿಯಂತ ರೋಗಗಳೂ ಸೇರಿದಂತೆ ಇತರ ಅನೇಕ ರೋಗಗಳಿಗೆ ಸೆಕ್ಷನ್ 80DD ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಚಿಕಿತ್ಸೆ ಮತ್ತು ಆರೈಕೆ ವೆಚ್ಚಗಳಲ್ಲದೇ, ಅವಲಂಬಿತ ವ್ಯಕ್ತಿಗೆ ತರಬೇತಿ ಮತ್ತು ಪುನರ್ವಸತಿಯ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
ಸೆಕ್ಷನ್80DDB ಅಡಿಯಲ್ಲಿ, ಚಿಕಿತ್ಸೆಗೆ ದುಬಾರಿ ವೆಚ್ಚ ತಗಲುವ ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ರಕ್ಷಣೆ ಇದೆ. ತೆರಿಗೆದಾರನು ತನ್ನ ಸ್ವಂತದ ಅಥವಾ ಅವಲಂಬಿತರ ಚಿಕಿತ್ಸೆಗೆ ತಗುಲಿದ ಇಂತಹ ವೆಚ್ಚಕ್ಕೆ ತೆರಿಗೆ ಕಡಿತದ ಲಾಭವನ್ನು ಪಡೆಯಬಹುದು. ವ್ಯಕ್ತಿಯ ವಯಸ್ಸು 60 ವರ್ಷಗಳಿಗಿಂತಲೂ ಕಡಿಮೆ ಇದ್ದರೆ 40 ಸಾವಿರ ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗೆಯೇ, ಹಿರಿಯ ನಾಗರಿಕರಿಗೆ 1 ಲಕ್ಷದವರೆಗಿನ ಚಿಕಿತ್ಸಾವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
ಕ್ಯಾನ್ಸರ್, ಏಡ್ಸ್, ಹಿಮೋಫೀಲಿಯ, ಥಲಸ್ಸೇಮಿಯ, ಬುದ್ಧಿಮಾಂದ್ಯತೆ, ಪರ್ಕಿಸನ್ಸ್, ಮೋಟಾರ್ ನ್ಯೂರಾನ್ ಡಿಸೀಸ್ ಹಾಗೂ ದೀರ್ಘಕಾಲದ ಮೂತ್ರಪಿಂಡಗಳ ವೈಫಲ್ಯಗಳಂತಹ ಕಾಯಿಲೆಗಳಿಗೆ ಇದರ ಅಡಿಯಲ್ಲಿ ರಕ್ಷಣೆ ಸಿಗುತ್ತದೆ. ಈ ತೆರಿಗೆ ಕಡಿತದ ಲಾಭ ಪಡೆಯಲು ನರರೋಗಗಳ ವೈದ್ಯರು, ಕ್ಯಾನ್ಸರ್ ವೈದ್ಯರು, ಮೂತ್ರಪಿಂಡಗಳ ವೈದ್ಯರು, ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳ ವೈದ್ಯರು, ಹಾಗೂ ಅಥವಾ ಅವರಿಗೆ ಸಮಾನರಾದ ತಜ್ಞ ಇಮ್ಯುನಿಲಾಜಿಸ್ಟ್ ಡಾಕ್ಟರ್ಸ್ ತಿಳಿಸಿರುವ ಪ್ರಿಸ್ಕ್ರಿಪ್ಶನ್ ಸಲ್ಲಿಕೆ ಮಾಡಬೇಕಾಗುತ್ತದೆ.
ಬಹಳಷ್ಟು ಜನರಿಗೆ 80DDB ಮತ್ತು 80U ಸೆಕ್ಷನ್ ನಡುವೆ ಗೊಂದಲಗಳಿರುತ್ತವೆ. ವಾಸ್ತವದಲ್ಲಿ, ಸೆಕ್ಷನ್80U ಅಡಿಯಲ್ಲಿ, ದೈಹಿಕ ಅಸಮರ್ಥತೆಯುಳ್ಳ ವ್ಯಕ್ತಿಯೊಬ್ಬನು ಸ್ವತ: ತಾನೇ ಪಡೆದ ಚಿಕಿತ್ಸೆಯ ವೆಚ್ಚಕ್ಕೆ ಪ್ರತಿಯಾಗಿ ತೆರಿಗೆ ಕಡಿತದ ಲಾಭ ಪಡೆಯಬಹುದು. ಆದರೆ, ಸೆಕ್ಷನ್ 80DDB ಅಡಿಯಲ್ಲಿ, ತೆರಿಗೆದಾರನು ತನ್ನ ಅವಲಂಬಿತರ ಚಿಕಿತ್ಸೆಗೆ ಮಾಡಿದ ವೆಚ್ಚಕ್ಕೆ ಪ್ರತಿಯಾಗಿ ತೆರಿಗೆ ಕಡಿತದ ಲಾಭ ಪಡೆಯುತ್ತಾನೆ
ಅನಾರೋಗ್ಯದ ಕಾರಣಕ್ಕೆ ಪ್ರತಿ ವರ್ಷ ದೊಡ್ಡ ಮೊತ್ತವನ್ನು ವ್ಯಯಿಸುತ್ತಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಅಂಗವಿಕಲರಿದ್ದರೆ ತೆರಿಗೆ ಈ ಬಗೆಯ ಖರ್ಚುಗಳಿದ್ದರೆ ಅವುಗಳನ್ನು ಬಳಸಿಕೊಂಡು ತೆರಿಗೆ ಲಾಭ ಪಡೆದುಕೊಳ್ಳಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications