ಬದುಕನ್ನ ರೂಪಿಸಿಕೊಳ್ಳಲು ಬಹಳಷ್ಟು ಯೋಜನೆಗಳನ್ನ ಕೈಗೊಳ್ಳಬೇಕಾಗುತ್ತದೆ. ಆದ್ರೆ ಅದೇ ಯೋಜನೆಗಳಿಗೆ ಹಣ ಬೇಕಾದಾಗ ಎಲ್ಲರು ಪರ್ಸನಲ್ ಲೋನ್ ಮೊರೆ ಹೋಗುತ್ತಾರೆ. ವೈಯಕ್ತಿಕ ಸಾಲವಿದ್ದರೆ ಅನಿರೀಕ್ಷಿತ ವೆಚ್ಚಗಳು, ದೊಡ್ಡ ಖರೀದಿಗಳು ಹಾಗೆ ಮನೆ ಕಾರ್ಯಗಳು ಹಾಗೆ ಇತರೆ ಕೆಲಸಗಳಿಗೆ ಹಣದ ಅಗತ್ಯ ಇದ್ದೇ ಇರುತ್ತದೆ.
ಇನ್ನು ಇಂತಹ ಎಲ್ಲಾ ವಯಕ್ತಿಕ ಸಮಸ್ಯೆಗಳಿಗೆ ವೈಯಕ್ತಿಕ ಸಾಲದ ಅಗತ್ಯ ಹೆಚ್ಚಿರುತ್ತದೆ. ಈಗಂತೂ ಡಿಜಟಲೀಕರಣ ಆದ ನಂತರ ಇಂತಹ ಸಾಲಗಳಿಗೆ ಅರ್ಜಿ ಸಲ್ಲಿಸುವುದು ಬಹಳ ಸುಲಭವಾಗಿ ಬಿಟ್ಟಿದೆ. ಸಾಲದ ಅಪ್ಲಿಕೇಶನ್‌ಗಳು ಮತ್ತು ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್‌ಗಳ ಬಂದಿರುವುದರಿಂದ ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸುವುದು ಈ ದಿನಗಳಲ್ಲಿ ತುಂಬಾ ಸುಲಭವಾಗಿದೆ. ಈ ಡಿಜಿಟಲ್ ಪ್ರಕ್ರಿಯೆಯ ಮೂಲಕ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ನಿಮಗೆ ಬೇಕಾದಾಗ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಹಣವನ್ನು ಪಡೆಯಬಹುದು.

ಸಾಲಕೊಡುವವರು ಅಥವಾ ಬ್ಯಾಂಕ್‌ಗಳು ಹಣಕಾಸು ಕಂಪನಿಗಳು, ವೈಯಕ್ತಿಕ ಸಾಲದ ಅರ್ಜಿ ಸಲ್ಲಿಸುವ ಮೊದಲು ಹಲವಾರು ಅಂಶಗಳನ್ನು ನಾವು ಗಮನಹರಿಸಬೇಕಾಗುತ್ತದೆ. ಇದರಲ್ಲಿ ಸಾಲ ನೀಡುವವರ ನಿಯಮಗಳು ಮತ್ತು ಷರತ್ತುಗಳನ್ನು ಅವಲಂಬಿಸಿ ವೈಯಕ್ತಿಕ ಸಾಲದ ಅರ್ಹತೆಯ ಕೆಲವು ಮಾನದಂಡಗಳು ಬದಲಾಗಬಹುದು.
ಪರ್ಸನಲ್ ಲೋನ್ ಅರ್ಹತೆಯನ್ನು ನೋಡುವ ಮೊದಲು, ವೈಯಕ್ತಿಕ ಸಾಲಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಮತ್ತು ಇತರೆ ವಿವರಗಳನ್ನು ನೋಡೋಣ.
ವೈಯಕ್ತಿಕ ಸಾಲ ಎಂದರೇನು?
ವೈಯಕ್ತಿಕ ಸಾಲವು ಒಂದು ರೀತೀಯ ಸಾಲವಾಗಿದ್ದು, ಹಣಕಾಸಿನ ಸಂಸ್ಥೆಗಳು ವಿವಿಧ ಉದ್ದೇಶಗಳಿಗಾಗಿ ಹಣವನ್ನ ಪೂರೈಸಲು ಜನರಿಗೆ ನೀಡುತ್ತವೆ. ಈ ವೆಚ್ಚಗಳು ನಿರ್ದಿಷ್ಟವಾಗಿಲ್ಲ. ಜೊತೆಗೆ ವೈದ್ಯಕೀಯ ಚಿಕಿತ್ಸೆಗಾಗಿ, ಹಾಗೆ ತುರ್ತು ಅಗತ್ಯಗಳಿಗೆ ಹಣ ಸೇರಿದಂತೆ ಅಂತರಾಷ್ಟ್ರೀಯ ರಜೆಗಳಂತಹ ಒಂದಷ್ಟು ಕೆಲಸಗಳಿಗೆ ಖರ್ಚು ಮಾಡಬಹುದು. ಈ ರೀತಿಯ ಸಾಲಗಳು ಸಾಮಾನ್ಯವಾಗಿ ಅಸುರಕ್ಷಿತ ರೂಪದಲ್ಲಿರುತ್ತವೆ ಮತ್ತು ಯಾವುದೇ ಮೇಲಾಧಾರ ಅಥವಾ ಭದ್ರತೆಯ ಅಗತ್ಯ ಇದಕ್ಕೆ ಬೇಕಾಗುವುದಿಲ್ಲ.
ವೈಯಕ್ತಿಕ ಸಾಲ ಪಡೆಯುವುದು ಹೇಗೆ?
ಈ ಡಿಜಿಟಲ್ ಬ್ಯಾಂಕಿಂಗ್ ಸಮಯದಲ್ಲಿ, ವೈಯಕ್ತಿಕ ಸಾಲಗಳನ್ನು ನಾವು ಬೇಗ ಪಡೆಯಬಹುದು. ಕೆಲವು ಬ್ಯಾಂಕ್‌ಗಳು ಜನರಿಗೆ ತಕ್ಷಣವೇ ಪೂರ್ವ-ಅನುಮೋದಿತ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಮತ್ತೊಂದೆಡೆ, ನಿಮಗೆ ಅಗತ್ಯವಿರುವ ಹಣದ ಪ್ರಮಾಣ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಇತರ ಅಂಶಗಳ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಸಾಲದ ಪ್ರಕ್ರಿಯೆಗೆ ಕೆಲವು ಹಣಕಾಸು ಸಂಸ್ಥೆಗಳು 2 ರಿಂದ 4 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.
ನಿಮ್ಮ ಬಳಿ ಇದಕ್ಕೆ ಬೇಕಾಗುವ ಡಾಕ್ಯುಮೆಂಟ್‌ಗಳನ್ನು ಇದ್ದರೆ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ವೈಯಕ್ತಿಕ ಸಾಲವನ್ನು ಪಡೆಯುವುದು ತುಂಬಾ ಕಷ್ಟವೇನಲ್ಲ. ಅನೇಕ ಸಾಲದಾತರು ಬ್ಯಾಂಕ್‌ನ ವೆಬ್‌ಸೈಟ್ ಮೂಲಕ ಮತ್ತು ಅಧಿಕೃತ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ನಿಮಗೆ ನೀಡುತ್ತಾರೆ.
ನೀವು ಮನಿ ಕಂಟ್ರೋಲ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂಪೂರ್ಣವಾಗಿ ಪೇಪರ್‌ಲೆಸ್ ಪ್ರಕ್ರಿಯೆಯಲ್ಲಿ ವೈಯಕ್ತಿಕ ಸಾಲಕ್ಕೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. Moneycontrol ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ಬಹು ವೈಯಕ್ತಿಕ ಸಾಲದ ಕೊಡುಗೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ. 12% ಕ್ಕಿಂತ ಕಡಿಮೆ ಸಾಲಗಳ ಬಡ್ಡಿದರಗಳು ವರ್ಷಕ್ಕೆ ಪ್ರಾರಂಭವಾಗುತ್ತವೆ. ನೀವು 100% ಕಾಗದರಹಿತ ಪ್ರಕ್ರಿಯೆ ಮೂಲಕ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು.
ವೈಯಕ್ತಿಕ ಸಾಲದ ಅರ್ಹತೆಯ ಮಾನದಂಡಗಳು
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಬೇಕಾಗುವ ಪ್ರಮುಖ ಅರ್ಹತೆಗಳನ್ನ ನೋಡುವುದಾದ್ರೆ:
ಆದಾಯ ಮತ್ತು ಮರುಪಾವತಿ ಸಾಮರ್ಥ್ಯ: ಅರ್ಜಿದಾರರ ಆದಾಯದ ಮಟ್ಟವನ್ನ ಸಾಲದಾತರು ಮೊದಲು ಪರಿಶೀಲಿಸುತ್ತಾರೆ . ಪ್ರತಿ ತಿಂಗಳ ಸಾಲ ಪಾವತಿಗಳನ್ನು ನಿರ್ವಹಿಸುವ ಅರ್ಜಿದಾರರ ಸಾಮರ್ಥ್ಯವನ್ನು ಅಳೆಯಲು ಸಾಲದಾತರು ಸಾಮಾನ್ಯವಾಗಿ ಸ್ಥಿರ ಆದಾಯವನ್ನು ಹುಡುಕುತ್ತಾರೆ. ಸಂಬಳ ಪಡೆಯುವ ಅರ್ಜಿದಾರರಿಗೆ, ತಿಂಗಳಿಗೆ ಕನಿಷ್ಠ ರೂ 15,000 ರಿಂದ ರೂ 25,000 ವರೆಗೆ ಆದಾಯದ ಅಗತ್ಯವಿರುತ್ತದೆ. ಅಲ್ಲದೆ ಸಾಲದಾತರ ಮತ್ತು ನೀವು ಅರ್ಜಿ ಸಲ್ಲಿಸುತ್ತಿರುವ ಸಾಲದ ಮೊತ್ತವನ್ನು ಆಧರಿಸಿ ಆದಾಯದ ಮಾನದಂಡಗಳು ಬದಲಾಗಬಹುದು.
ಕ್ರೆಡಿಟ್ ಸ್ಕೋರ್: ಕ್ರೆಡಿಟ್ ಸ್ಕೋರ್ ವೈಯಕ್ತಿಕ ಸಾಲದ ಅರ್ಹತೆಯ ಪ್ರಮುಖ ಅಂಶವಾಗಿದೆ. ಸಾಮಾನ್ಯವಾಗಿ 700 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಸಾಲದಾತರು ಹುಡುಕುತ್ತಾರೆ. 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ ಅದನ್ನ ಹೆಚ್ಚಿನ ಸಾಲದಾತರು ಪರಿಗಣಿಸುತ್ತಾರೆ.
ವಯಸ್ಸಿನ ಅವಶ್ಯಕತೆಗಳು: ಸಂಬಳ ಪಡೆಯುವವರಿಗೆ ಹಾಗು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ವಯಸ್ಸಿನ ಮಾನದಂಡಗಳು ಬೇರೆಬೇರೆಯಿರುತ್ತದೆ. ಸಂಬಳ ಪಡೆಯುವ ವ್ಯಕ್ತಿಗಳು ಸಾಮಾನ್ಯವಾಗಿ 18 ಮತ್ತು 60 ರ ವಯಸ್ಸಿನ ನಡುವೆ ಇರುವವರು ಸಾಲ ಪಡೆಯಲು ಅರ್ಹರಾಗಿರುತ್ತಾರೆ, ಆದರೆ 21 ರಿಂದ 65 ವರ್ಷ ವಯಸ್ಸಿನ ಸ್ವಯಂ ಉದ್ಯೋಗಿ ಅರ್ಜಿದಾರರು ಕೂಡ ವೈಯಕ್ತಿಕ ಸಾಲಗಳಿಗೆ ಅರ್ಜಿ ಹಾಕಬಹುದು.
ಉದ್ಯೋಗ ಮತ್ತು ಉದ್ಯೋಗ ಸ್ಥಿರತೆ: ಸಂಬಳ ಪಡೆಯುವ ಅರ್ಜಿದಾರರಿಗೆ ಉದ್ಯೋಗದ ಸ್ಥಿರತೆ ಬಹಳ ಮುಖ್ಯವಾಗುತ್ತದೆ. ಬಹಳಷ್ಟು ಸಾಲದಾತರು ಕನಿಷ್ಠ ಒಂದು ವರ್ಷದ ಸ್ಥಿರ ಉದ್ಯೋಗ ಮತ್ತುಉದ್ಯೋಗದ ಅನುಭವವನ್ನು ಹುಡುಕುತ್ತಾರೆ. ಸ್ವಯಂ ಉದ್ಯೋಗಿ ಅರ್ಜಿದಾರರಿಗೆ, ವ್ಯವಹಾರದಲ್ಲಿ ಕನಿಷ್ಠ ಮೂರು ವರ್ಷಗಳು ಅಗತ್ಯವಾಗಿರುತ್ತದೆ.
ಉದ್ಯೋಗದಾತರ ಪ್ರೊಫೈಲ್: ಅರ್ಜಿದಾರರಿಗೆ ಉದ್ಯೋಗ ನೀಡುತ್ತಿರುವವರು ಅಥವಾ ಅವರ ವ್ಯವಹಾರದ ಹಿನ್ನೆಲೆ ಸಾಲದ ಅರ್ಹತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹಾಗೆ ಸಾಲದಾತರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅರ್ಜಿದಾರರಿಗೆ ಹೆಚ್ಚಿನ ಆದ್ಯತೆ ನೀಡಬಹುದು.
ಅಗತ್ಯವಿರುವ ದಾಖಲೆಗಳು
ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು, ಈ ಡಾಕ್ಯುಮೆಂಟ್‌ಗಳನ್ನು ಬಬುಮುಖ್ಯ:
ಗುರುತಿನ ಪುರಾವೆ: ನಿಮ್ಮ ಗುರುತನ್ನು ಪರಿಶೀಲಿಸಲು ಸಾಮಾನ್ಯವಾಗಿ ನಿಮ್ಮ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಗತ್ಯವಿದೆ.
ವಿಳಾಸ ಪುರಾವೆ: ಇತ್ತೀಚಿನ ಯುಟಿಲಿಟಿ ಬಿಲ್‌ಗಳು (ವಿದ್ಯುತ್ ಅಥವಾ ನೀರಿನ ಬಿಲ್) ಅಥವಾ ಆಧಾರ್ ಕಾರ್ಡ್‌ನಂತಹ ದಾಖಲೆಗಳು ವಿಳಾಸದ ಪುರಾವೆಗಳಾಗಿರುತ್ತವೆ.
ಆದಾಯ ಪುರಾವೆ: ಸಂಬಳದ ಸ್ಲಿಪ್‌ಗಳು ಅಥವಾ ಆದಾಯ ತೆರಿಗೆ ರಿಟರ್ನ್ಸ್ (ಸ್ವಯಂ ಉದ್ಯೋಗಿಗಳಿಗೆ) ಸಾಲವನ್ನು ಮರುಪಾವತಿ ಮಾಡಲು ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ತೋರಿಸಲು ಸಹಾಯ ಮಾಡುತ್ತದೆ.
ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು: ಕಳೆದ ಮೂರರಿಂದ ಆರು ತಿಂಗಳಿನ ನಿಮ್ಮ ಹಣಕಾಸಿನ ಸ್ಥಿರತೆ ಮತ್ತು ಖರ್ಚಿನ ಕುರಿತು ತಿಳಿಯಲು ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಅನೇಕ ಸಾಲದಾತರು ಕೇಳುತ್ತಾರೆ.
ವೈಯಕ್ತಿಕ ಸಾಲದ ಅರ್ಹತೆಯನ್ನು ಹೇಗೆ ಸುಧಾರಿಸುವುದು
ಹೆಚ್ಚಿನ ಕ್ರೆಡಿಟ್ ಸ್ಕೋರ್: 700 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಮತ್ತು 750ಕ್ಕಿಂತ ಹೆಚ್ಚು ಇದ್ದರೆ ಸಾಲದಾತರು ನಿಮಗೆ ಸಾಲವನ್ನ ನೀಡಲು ಒಲವು ತೋರುತ್ತಾರೆ. ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಲೋನ್ ಇಎಂಐಗಳನ್ನ ಸರಿಯಾದ ಸಮಯದಲ್ಲಿ ಪಾವತಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಸುಧಾರಿಸಬಹುದು.
ಸಹ-ಅರ್ಜಿದಾರರನ್ನು ಪರಿಗಣಿಸಿ: ಸಾಲದಾತರು ಜಂಟಿ ಅರ್ಜಿಗಳನ್ನು ಕೇಳಿದರೆ, ಸಂಗಾತಿ ಅಥವಾ ಪೋಷಕರಂತಹ ಸಹ-ಅರ್ಜಿದಾರರನ್ನು ಸೇರಿಸುವುದರಿಂದ ಅರ್ಹತೆಯನ್ನು ಸುಧಾರಿಸಬಹುದು. ಸಾಲದಾತರು ಸಹ-ಅರ್ಜಿದಾರರ ಸಂಯೋಜಿತ ಕ್ರೆಡಿಟ್ ಸ್ಕೋರ್‌ಗಳು ಮತ್ತು ಆದಾಯದ ಮಟ್ಟವನ್ನು ಪರಿಗಣಿಸುತ್ತಾರೆ.
ಸ್ಥಿರವಾದ ಉದ್ಯೋಗವನ್ನು ಕಾಪಾಡಿಕೊಳ್ಳಿ: ಸಾಲದ ಅರ್ಜಿಗಳನ್ನು ನಿರ್ಣಯಿಸುವಾಗ ಸಾಲದಾತರಿಗೆ ಉದ್ಯೋಗದ ಸ್ಥಿರತೆ ಇರಬೇಕಾಗುತ್ತದೆ. ಆಗಾಗ ಉದ್ಯೋಗ ಬದಲಾವಣೆ ಮಾಡುವುದರಿಂದ ಅಸ್ಥಿರತೆಯನ್ನು ಇದು ಸೂಚಿಸಬಹುದು, ಇದು ಸಾಲಕ್ಕಾಘಿ ಅರ್ಜಿ ಸಲ್ಲಿಸಲು ಈ ಕಾರಣ ನಿಮಗೆ ತೊಡಕಾಗಬಹುದು. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಆಲೋಚಿಸುತ್ತಿದ್ದರೆ, ಸ್ಥಿರವಾದ ಕೆಲಸದ ಹಿನ್ನಲೆಯನ್ನ ತೋರಿಸಲು ಇದು ಪ್ರಯೋಜನಕಾರಿಯಾಗಿದೆ.
ಬಹು ಸಾಲದ ಅರ್ಜಿಗಳನ್ನು ಮಿತಿಗೊಳಿಸಿ: ಬಹು ಸಾಲದ ಅರ್ಜಿಗಳನ್ನ ಸಲ್ಲಿಸುವ ಮೊದಲು ಒಮ್ಮೆ ಯೋಚಿಸಿ. ನಿಮ್ಮ ಪ್ರತಿ ಸಾಲದ ಅರ್ಜಿಯು ನಿಮ್ಮ ಕ್ರೆಡಿಟ್ ವರದಿಯಲ್ಲಿ ಕಠಿಣ ವಿಚಾರಣೆಯನ್ನು ತೋರಿಸುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ.
ಅಸ್ತಿತ್ವದಲ್ಲಿರುವ ಸಾಲವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ: ಹೆಚ್ಚುವರಿ ಸಾಲಗಳನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ಪರಿಶೀಲನೆ ಮಾಡುವಾಗ ಸಾಲದಾತರು ನಿಮ್ಮ ಅಸ್ತಿತ್ವದಲ್ಲಿರುವ ಸಾಲದಿಂದ ಆದಾಯದ ಅನುಪಾತವನ್ನು ನೋಡುತ್ತಾರೆ. ಸರಿಯಾದ ಸಮಯದಲ್ಲಿ ಮರುಪಾವತಿಗಳನ್ನು ಮಾಡುವ ಮೂಲಕ ಮತ್ತು ಅನಗತ್ಯ ಸಾಲವನ್ನು ತಪ್ಪಿಸುವ ಮೂಲಕ ನಿಮ್ಮ ಸಾಲವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ನಿಮ್ಮ ಆರ್ಥಿಕ ಪ್ರೊಫೈಲ್ ಅನ್ನು ಸಾಲದಾತರ ಮುಂದೆ ಪ್ರಸ್ತುತಪಡಿಸಲು ಸಹಾಯ ಮಾಡುತ್ತದೆ.
ಹಾಗೆ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು , ನಿಮ್ಮ ಹಣಕಾಸಿನ ಅಗತ್ಯಗಳಿಗೆ ಇದು ನಿಜವಾಗಿಯೂ ಸರಿಯಾದ ಆಯ್ಕೆಯಾ ಎಂದು ಖಚಿತಪಡಿಸಿಕೊಳ್ಳಿ. ಪರ್ಸನಲ್ ಲೋನ್ ಕ್ಯಾಲ್ಕುಲೇಟರ್ ಅನ್ನು ಬಳಸಿ ನಿಮಗೆ ಮಾಸಿಕ ಪಾವತಿಗಳು ಮತ್ತು ಒಟ್ಟು ವೆಚ್ಚಗಳ ಸ್ಪಷ್ಟ ಕಲ್ಪನೆಯನ್ನು ತಿಳಿದುಕೊಳ್ಳಬಹುದು, ಇದು ನಿಮಗೆ ಮರುಪಾವತಿಯನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ.


Click it and Unblock the Notifications