ಕ್ರೆಡಿಟ್ ಕಾರ್ಡ್ ತ್ವರಿತವಾಗಿ ಆರ್ಥಿಕ ಸಹಾಯ ಒದಗಿಸುತ್ತದೆ. ಹೀಗಾಗಿ ಇಂದಿನ ದಿನಗಳಲ್ಲಿ ಹಣಕಾಸಿನ ವ್ಯವಹಾರಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳು ಬಹುಮುಖ್ಯವಾದ ಪಾತ್ರಗಳನ್ನು ಒದಗಿಸುತ್ತಿವೆ. ಜೇಬಲ್ಲಿ ಹಣವಿಲ್ಲದಿದ್ರೂ ಪರವಾಗಿಲ್ಲ, ಕ್ರೆಡಿಟ್ ಕಾರ್ಡ್ ಇದ್ದರೆ ಸಾಕು ಏನನ್ನು ಬೇಕಾದರೂ ಕೊಳ್ಳಬಹುದು. ಏನನ್ನಾದರೂ ಪಡೆಯಬಹುದು. ಎಮರ್ಜೆನ್ಸಿ ವೆಚ್ಚಗಳನ್ನೂ ಕೂಡ ಭರಿಸಿಕೊಳ್ಳಬಹುದು. ಈ ಕಾರಣದಿಂದ ಬಹುತೇಕ ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಅನ್ನೋದು ಇದ್ದೇ ಇರುತ್ತದೆ. ಆದರೆ ಇನ್ನೆಷ್ಟೋ ಜನ ಕ್ರೆಡಿಟ್ ಕಾರ್ಡ್ ಇದ್ದರೂ ಅದನ್ನು ಬಳಸುತ್ತಿಲ್ಲ. ಆದರೆ ಇದರಿಂದ ತಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎನ್ನುವುದು ತಿಳಿದೇ ಇರುವುದಿಲ್ಲ.

ಇನ್ನು ಇತ್ತೀಚಿನ ದಿನಗಳಲ್ಲಿ ಜನರು ಒಂದೇ ಕ್ರೆಡಿಟ್ ಕಾರ್ಡ್ ಹೊಂದಿರುವುದಿಲ್ಲ. ಜನರು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುತ್ತಾರೆ. ಹೀಗಾಗಿಯೇ ಕ್ರೆಡಿಟ್ ಕಾರ್ಡ್ ಬಳಸದೇ ಇರಬಹುದು. ಹಾಗೆಯೇ ಇದರಿಂದ ಹೇಗೆ ಹಾನಿಯಾಗಬಹುದು ಎಂಬುದನ್ನು ಕೂಡ ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಏನೆಲ್ಲಾ ಪರಿಣಾಮ ಬೀರಬಹುದು ಎಂದು ಕೂಡ ತಿಳಿಯುವುದಿರಲ್ಲ. ಹಾಗಾದರೆ ನಿಜಕ್ಕೂ ಏನೆಲ್ಲಾ ಸಮಸ್ಯೆಯಾಗಬಹುದು ಎಂದು ಇಲ್ಲಿ ತಿಳಿಯಿರಿ.
1. ಕ್ರೆಡಿಟ್ ಬಳಕೆಯ ಅನುಪಾತ ಏರಿಕೆ:
ಕ್ರೆಡಿಟ್ ಸ್ಕೋರ್ ಲೆಕ್ಕಾಚಾರದಲ್ಲಿ ಕ್ರೆಡಿಟ್ ಯುಟಿಲೈಸೇಷನ್ ರೇಷಿಯೋ ಬಹಳ ಮುಖ್ಯವಾಗಿರುತ್ತದೆ. ಅಂದರೆ ನೀವು ಇದರಲ್ಲಿ ಲಭ್ಯವಿರುವ ಒಟ್ಟು ಕ್ರೆಡಿಟ್ ಲಿಮಿಟ್‌ನ ಎಷ್ಟು ಪ್ರಮಾಣದಲ್ಲಿ ಬಳಸುವಿರಿ ಎಂದು ಲೆಕ್ಕ ಹಾಕಲಾಗುತ್ತದೆ. ನೀವೊಂದು ವೇಳೆ ಕ್ರೆಡಿಟ್ ಕಾರ್ಡ್ನ ನಿಷ್ಕ್ರಿಯವಾಗಿಟ್ಟರೆ, ನಿಮ್ಮ ಲಭ್ಯವಿರುವ ಒಟ್ಟು ಕ್ರೆಡಿಟ್ ಮಿತಿ ಕಡಿಮೆಯಾಗುತ್ತದೆ. ಆದರೆ ನಿಮ್ಮ ಬಳಸುತ್ತಿರುವ ಕ್ರೆಡಿಟ್ ಮೌಲ್ಯ ಅಷ್ಟೇ ಇದ್ದರೆ, ಅದರ ಪರ್ಸೆಂಟೇಜ್ ಹೆಚ್ಚಾಗಿ ತೋರಿಸಿಕೊಳ್ಳುತ್ತದೆ. ಇದರಿಂದ ಸ್ಕೋರ್ ಕುಸಿಯಬಹುದು.
2. ಹಳೆಯ ಕ್ರೆಡಿಟ್ ಇತಿಹಾಸ ಕಡಿಮೆಯಾಗಬಹುದು:
ಅಷ್ಟೇ ಅಲ್ಲ. ನಿಮ್ಮ ಕ್ರೆಡಿಟ್ ಕಾರ್ಡ್‌ನ ಹಳೆಯ ಕ್ರೆಡಿಟ್ ಕಾರ್ಡ್ನ ಸ್ಕೋರ್ ಉತ್ತಮವಾಗಿರುತ್ತದೆ. ಆದರೆ ನೀವು ಕ್ರೆಡಿಟ್ ಕಾರ್ಡ್ ಬಳಸದೇ ಇದ್ದಾಗ, ಕಾರ್ಡ್ ಇಶ್ಯೂಯರ್ ಖಾತೆ ಮುಚ್ಚುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ, ನಿಮ್ಮ ಕ್ರೆಡಿಟ್ ಇತಿಹಾಸ ಕಡಿಮೆಯಾಗುತ್ತದೆ. ಇದು ಕೂಡ ನಿಮ್ಮ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
3. ಪಾವತಿ ಇತಿಹಾಸ ನಿರ್ಮಾಣವಿಲ್ಲ:
ಇನ್ನು ಕ್ರೆಡಿಟ್ ಸ್ಕೋರ್ ನಿರ್ಮಿಸಲು ಎಷ್ಟೆಲ್ಲಾ ಸಾಹಸ ಪಡಬೇಕು ಎಂಬುದು ಗೊತ್ತೇ ಇದೆ. ಪೇಮೆಂಟ್ ಹಿಸ್ಟರಿ ಇದಕ್ಕಾಗಿ ಅತಿಮುಖ್ಯವಾಗಿರುತ್ತದೆ. ಹೀಗಾಗಿ ನೀವು ಒಂದು ಕಾರ್ಡ್‌ನ ಬಳಸದೇ ಇದ್ದರೆ, ಆ ಖಾತೆಯಲ್ಲಿ ಯಾವುದೇ ಪಾವತಿಯಾಗಿರುವುದಿಲ್ಲ ಎಂದು ತೋರಿಸುತ್ತದೆ. ಇದರಿಂದ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಪಾಸಿಟಿವ್ ಪೇಮೆಂಟ್ ಹಿಸ್ಟರಿ ಇರುವುದಿಲ್ಲ. ಸಾಲ ಅಥವಾ ಹೊಸ ಕ್ರೆಡಿಟ್ ಅಪ್ಲಿಕೇಶನ್‌ನಲ್ಲಿ ಈ ಮಾಹಿತಿ ಇಲ್ಲದಿರುವುದು ನಕಾರಾತ್ಮಕವಾಗಿ ಕೆಲಸ ಮಾಡಬಹುದು.
4. ವಾರ್ಷಿಕ ಶುಲ್ಕ ಮತ್ತು ನಿಷ್ಕ್ರಿಯತಾ ಶುಲ್ಕ:
ಒಂದು ವೇಳೆ ಕ್ರೆಡಿಟ್ ಕಾರ್ಡ್‌ಗಳು ನಿಷ್ಕ್ರಿಯವಾಗಿದ್ದರೆ. ಅವುಗಳು ಸಹಿಸುವಿಕೆಯನ್ನು ತೋರಿಸಿದರೂ ಕೂಡ, ಕೆಲವೊಂದು ಕಾರ್ಡ್‌ಗಳು ವಾರ್ಷಿಕ ಶುಲ್ಕ ಅಥವಾ ನಿಷ್ಕ್ರಿಯತಾ ಶುಲ್ಕಗಳನ್ನು ವಿಧಿಸುತ್ತವೆ. ಈ ಶುಲ್ಕ ಪಾವತಿ ಆಗದೇ ಬಾಕಿಯಾದರೂ ಕೂಡ, ಅದು ಡಿಫಾಲ್ಟ್ ಸ್ಕೋರ್ ಎಂದು ತೋರಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನಿಷ್ಕ್ರಿಯ ಕಾರ್ಡ್‌ಗಳನ್ನು ನಿರ್ವಹಿಸುವುದೇಗೆ..?
ಸಣ್ಣದಾಗಿಯಾದರೂ ಖರೀದಿ ಮಾಡಿ:
ಒಂದು ವೇಳೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್‌ನ ದೊಡ್ಡ ಖರೀದಿಗಳಿಗೆ ಬಳಕೆ ಮಾಡದಿದ್ದರೆ, ಕಡೇಪಕ್ಷ ಸಣ್ಣದಾಗಿಯಾದರೂ ಖರೀದಿ ಮಾಡಿ. ಅಂದರೆ ಪ್ರತಿ ಎರಡ್ಮೂರು ತಿಂಗಳಿಗಾದರೂ ಕನಿಷ್ಟ ಒಂದು ವೆಚ್ಚವನ್ನು ಬಳಸಿ. ಪೆಟ್ರೋಲ್, ಮೊಬೈಲ್ ರೀಚಾರ್ಜ್, ಫುಡ್ ಆರ್ಡರ್ ನಿಂದಲೂ ನಿಮ್ಮ ಕ್ರೆಡಿಟ್ ಕಾರ್ಡ್ ಕೊಂಚ ಸಕ್ರಿಯವಾಗಿರುತ್ತದೆ.
ಸ್ವಯಂಚಾಲಿತ ಪಾವತಿ ಸೆಟ್ ಮಾಡಿಕೊಳ್ಳಿ:
ನಿಮ್ಮ ಕ್ರೆಡಿಟ್ ಕಾರ್ಡ್ ಪೇಮೆಂಟ್ ಸ್ವಯಂಚಾಲಿತವಾಗಿದ್ದರೆ..ಅಂದರೆ ಆಟೋ ಡೆಬಿಟ್ ಸೆಟ್ ಆಗಿದ್ದರೆ ಉತ್ತಮ. ಇದಕ್ಕಾಗಿ ನೀವು ಯಾವುದಾದರೂ ಸಬ್ಸ್ಕ್ರಿಪ್ಷನ್‌ಗಳಿಗೆ ಲಿಂಕ್ ಮಾಡಬಹುದು. ಅಂದರೆ OTT ಪ್ಲಾಟ್‌ಫಾರ್ಮ್, ಮ್ಯೂಸಿಕ್ ಆ್ಯಪ್, ಇಂಟರ್ನೆಟ್ ಬಿಲ್ ಇತ್ಯಾದಿಗಳಲ್ಲಿ ಆಟೋ ಪೇಮೆಂಟ್ ಇದ್ದರೆ ಕಾರ್ಡ್ ಸಕ್ರಿಯವಾಗಿರುತ್ತದೆ.
ಹೀಗಾಗಿ ಕ್ರೆಡಿಟ್ ಕಾರ್ಡ್ನ ಬಳಸದೇ ಇರುವುದಕ್ಕಿಂತ, ಸಣ್ಣ ಮಟ್ಟದಲ್ಲಾದರೂ ಬಳಸಿದರೆ ಉತ್ತಮ. ಈ ಮೂಲಕ ಕ್ರೆಡಿಟ್ ಕಾರ್ಡ್ ಸ್ವಲ್ಪವಾದರೂ ಸಕ್ರಿಯವಾಗಿರುತ್ತದೆ. ಹಾಗೆಯೇ ಇದರಿಂದ ದೀರ್ಘಾವಧಿಯಲ್ಲಿ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.


Click it and Unblock the Notifications