ಬೆಂಗಳೂರು, ಜುಲೈ 30: ಸುಳ್ಳು ಮಾಹಿತಿಯನ್ನು ನೀಡುವಂತಹ, ಜನರಲ್ಲಿ ತಪ್ಪು ತಿಳಿವಳಿಕೆ ಬೆಳೆಸುವ ಜಾಹೀರಾತುಗಳ ಮೇಲೆ ಸುಪ್ರೀಂ ಕೋರ್ಟ್ ಕೆಂಗಣ್ಣು ಬೀರಿದೆ. ಪತಂಜಲಿ ವಿಚಾರದಲ್ಲಿ ಸುಪ್ರೀಂ ಕಟ್ಟುನಿಟ್ಟಾದ ವಿಚಾರಗಳನ್ನು ಹೇಳಿದೆ. ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಪ್ರಾಡಕ್ಟ್ ತಯಾರಿಸಿದ್ದೇವೆ. ನಾವು ಯಾವುದೇ ಕೆಮಿಕಲ್ಸ್ ಬಳಸಿಲ್ಲ ಎನ್ನುವುದಾಗಿ ಜಾಹೀರಾತುಗಳು ಮೇಲಿಂದ ಮೇಲೆ ಪ್ರಸಾರವಾಗುತ್ತಲೇ ಇರುತ್ತವೆ. ಆದರೆ ಇದರ ಅಸಲಿ ಕತೆಯೇ ಬೇರೆ ಇದೆ. ನೀವು ಸಹ ಇಂಥ ಜಾಹೀರಾತುಗಳಿಗೆ ಬೆಲೆ ಕೊಟ್ಟು ಆ ವಸ್ತು ಖರೀದಿಗೆ ಮುಂದಾದರೆ ಒಂದು ಕ್ಷಣ ಯೋಚನೆ ಮಾಡಿ. ಒಂದಿಷ್ಟು ಸಂಶೋಧನೆ ಮಾಡಿಕೊಳ್ಳಬೇಕು.
ಇದರಲ್ಲಿ ಎಸ್‌ಎಲ್‌ಎಸ್ ಇಲ್ಲ, ಪ್ಯಾರಾಬೆನ್ ಇಲ್ಲ, ವಿಷಾಂಶ ಇಲ್ಲ, ಕ್ರೂಯೆಲ್ಟಿ-ಫ್ರೀ ಮತ್ತು ನ್ಯಾಚುರಲ್ ಆಗಿದೆ. ಚರ್ಮಕ್ಕೆ ತುಂಬಾ ಒಳ್ಳೆಯದು ಎಂದೆಲ್ಲಾ ಪ್ರಚಾರ ಮಾಡುತ್ತಾರೆ. ಆದರೆ ಅವರು ನೀಡಿರುವ ಎಲ್ಲ ಮಾಹಿತಿಗಳನ್ನು ನಂಬುವ ಮುನ್ನ ಏನೆಲ್ಲಾ ತಿಳಿದುಕೊಳ್ಳಬೇಕು?

ಮಾರ್ಕೆಟ್‌ನಲ್ಲಿ ಪರಿಸರ ಸ್ನೇಹಿ, ವಿಷಾಂಶ ರಹಿತ, ಕ್ರೂಯೆಲ್ಟಿ ಫ್ರೀ ಮತ್ತು ನೈಸರ್ಗಿಕ ಎಂದು ಹೇಳಿಕೊಳ್ಳುವ ಉತ್ಪನ್ನಗಳಿವೆ. ಟೂತ್‌ಪೇಸ್ಟ್‌ನಿಂದ ಸೋಪ್‌ವರೆಗೆ, ಕಾಸ್ಮೆಟಿಕ್ಸ್‌ನಿಂದ ಬಟ್ಟೆಗಳವರೆಗೆ ಎಲ್ಲ ಉತ್ಪನ್ನಗಳನ್ನೂ ಹರ್ಬಲ್ ಮತ್ತು ನ್ಯಾಚುರಲ್ ಲೇಬಲ್ ಹಾಕಿ ಮಾರಾಟ ಮಾಡಲಾಗುತ್ತದೆ. ಆದರೆ, ಈ ಲೇಬಲ್‌ಗಳನ್ನು ಕಣ್ಣುಮುಚ್ಚಿಕೊಂಡು ನಂಬಬೇಡಿ. ಇದೊಂದು ಮಾರ್ಕೆಟಿಂಗ್ ಸ್ಟ್ರಾಟಜಿ. ಕಂಪನಿಗಳು ತಮ್ಮ ಉತ್ಪನ್ನಗಳು ಪರಿಸರ ಸ್ನೇಹಿ ಎಂದು ಹೇಳಿಕೊಳ್ಳಲು ತುಂಬಾ ಸಮಯ ಮತ್ತು ಹಣವನ್ನು ಕಂಪನಿಗಳು ಖರ್ಚು ಮಾಡುತ್ತವೆ. ಆದರೆ, ಪರಿಸರದ ಮೇಲೆ ತಮ್ಮ ಉತ್ಪನ್ನದಿಂದ ಆಗುವ ಅಡ್ಡ ಪರಿಣಾಮವನ್ನು ಕಡಿಮೆ ಮಾಡಲು ಇಂತಹ ಹಣವನ್ನು ಬಳಸಬಹುದಾಗಿತ್ತು. ಇದನ್ನು ನಾವು ಗ್ರೀನ್‌ವಾಶಿಂಗ್ ಎಂದು ಕರೆಯುತ್ತೇವೆ. ಪರಿಸರ ಸ್ನೇಹಿ ಎಂಬ ಹೆಸರು ಹೊತ್ತಿರುವ ಉತ್ಪನ್ನಗಳನ್ನು ಖರೀದಿಸುವವರೇ ಸಾಮಾನ್ಯವಾಗಿ ಇಂತಹ ಮೋಸಕ್ಕೆ ಬಲಿಯಾಗುತ್ತಾರೆ.
ಇಂಡಿಯನ್ ರಿಟೇಲರ್ ವರದಿಯ ಪ್ರಕಾರ, ಭಾರತದಲ್ಲಿ ಸಾವಯವ ಉತ್ಪನ್ನಗಳ ಮಾರ್ಕೆಟ್ 2025 ರ ವೇಳೆಗೆ 10 ಬಿಲಿಯನ್ ಡಾಲರ್‌ಗೆ ತಲುಪಲಿದೆ. ಅಂದರೆ, ಸಿಎಜಿಆರ್ 25% ಆಗಿರುತ್ತದೆ. ಭಾರತದಲ್ಲಿ ಇಂತಹ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತದೆ. ಈ ಬೇಡಿಕೆಯನ್ನು ಪೂರೈಸಲು, ಕೆಲವು ಕಂಪನಿಗಳು ಪರಿಸರ ಸ್ನೇಹಿ ಎಂದು ಪ್ಯಾಕೇಜಿಂಗ್ ಅನ್ನು ತಮ್ಮ ಉತ್ಪನ್ನಗಳಿಗೆ ಹಾಕುತ್ತಾರೆ.
ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ 2019 ರ ಅಡಿಯಲ್ಲಿ, ಗುಣಮಟ್ಟ, ಪ್ರಮಾಣ, ಶುದ್ಧತೆ, ಮಾನದಂಡಗಳು, ಪರಿಣಾಮ ಮತ್ತು ಸಾಮಗ್ರಿ ಅಥವಾ ಸೇವೆಯ ಬೆಲೆ ಸೇರಿದಂತೆ ಎಲ್ಲ ಮಾಹಿತಿಯನ್ನೂ ಪಡೆಯುವ ಹಕ್ಕನ್ನು ಗ್ರಾಹಕರು ಹೊಂದಿದ್ದಾರೆ. ಮಾಹಿತಿಯನ್ನು ಮರೆ ಮಾಡುವುದು, ಅಪೂರ್ಣ ವಿವರಗಳನ್ನು ನೀಡುವುದು ಮತ್ತು ತಪ್ಪಾಗಿ ಲೇಬಲ್ ಮಾಡುವುದು. ಇವೆಲ್ಲವೂ ಅನುಚಿತ ಟ್ರೇಡ್ ಪ್ರಾಕ್ಟೀಸ್‌ಗಳ ಅಡಿಯಲ್ಲಿ ಬರುತ್ತವೆ. ಯಾವುದೇ ಅನುಚಿತ ಟ್ರೇಡ್ ಪ್ರಾಕ್ಟೀಸ್ ನಲ್ಲಿ ತೊಡಗಿದ್ದರೆ ಅಂತ ಕಂಪನಿಗಳ ವಿರುದ್ಧ ದೂರು ದಾಖಲಿಸಲು ಗ್ರಾಹಕರಿಗೆ ಹಕ್ಕು ಇರುತ್ತದೆ.
ಗ್ರೀನ್‌ವಾಶಿಂಗ್ ವಿರುದ್ಧ ಗ್ರಾಹಕ ವ್ಯವಹಾರಗಳ ಸಚಿವಾಲಯ ಕೂಡಾ ಕಟ್ಟುನಿಟ್ಟಾದ ನಿಯಮಗಳನ್ನು ಪರಿಚಯಿಸಿದೆ. ತಮ್ಮ ಪರಿಸರ ಸ್ನೇಹಿ ಕ್ಲೇಮ್‌ಗಳ ಹಿಂದೆ ಯಾವ ಸತ್ಯ ಅಡಗಿದೆ ಎಂಬುದನ್ನು ಪತ್ತೆ ಮಾಡಲು ಅಗತ್ಯ ಮಾರ್ಗಸೂಚಿಗಳನ್ನೂ ಸರ್ಕಾರ ತರಲಿದೆ. ಇವು ಪರಿಸರ ಸ್ನೇಹಿ ಅಥವಾ ಸಾವಯವ ಉತ್ಪನ್ನಗಳನ್ನು ಉತ್ಪಾದನೆ ಮಾಡುವ ಕಂಪನಿಗಳಿಗೆ ಅನ್ವಯಿಸುತ್ತವೆ. ಅಷ್ಟೇ ಅಲ್ಲ, ಜಾಹೀರಾತುಗಳು, ಸೇವೆ ಪೂರೈಕೆದಾರರು, ಉತ್ಪನ್ನ ಮಾರಾಟ ಮಾಡುವವರು, ಜಾಹೀರಾತು ನೀಡುವವರು ಅಥವಾ ಜಾಹೀರಾತು ಏಜೆನ್ಸಿಗಳಿಗೂ ಇವು ಅನ್ವಯಿಸುತ್ತವೆ.
ಮಾರ್ಗಸೂಚಿಗಳ ಪ್ರಕಾರ, ನೈಸರ್ಗಿಕ ಪ್ರಯೋಜನ ನೀಡುತ್ತದೆ ಎಂದು ಒಂದು ಕಂಪನಿ ಹೇಳಿಕೊಂಡರೆ, QR ಕೋಡ್‌ಗಳ ಮೂಲಕ ಎಲ್ಲ ಉತ್ಪನ್ನದ ಸಾಮಗ್ರಿಗಳ ಬಗ್ಗೆ ಮಾಹಿತಿ ನೀಡಲೇಬೇಕು. ತನ್ನ ಉತ್ಪನ್ನಗಳು ಮತ್ತು ಜಾಹೀರಾತುಗಳಲ್ಲಿ ವೆಬ್ ಅಡ್ರೆಸ್ ಕೊಟ್ಟು ಕೂಡಾ ಮಾಹಿತಿಯನ್ನು ಒದಗಿಸಬಹುದು. ಸಂಶೋಧನೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಬಹಿರಂಗಗೊಳಿಸಬೇಕು. ಎಲ್ಲ ಪರಿಸರ ಕ್ಲೇಮ್‌ಗಳನ್ನು ವೆರಿಫೈ ಮಾಡುವುದಕ್ಕೆ ವಿಶ್ವಾಸಾರ್ಹ ಸಾಕ್ಷಿಯನ್ನು ಅವು ಒದಗಿಸಬೇಕಾಗುತ್ತದೆ. ಗ್ರೀನ್, ಎಕೋ ಫ್ರೆಂಡ್ಲಿ, ಎಕೋ ಕಾನ್ಶಿಯಸ್‌ನೆಸ್, ಗುಡ್ ಫಾರ್ ಪ್ಲಾನೆಟ್, ಕ್ರೂಯೆಲ್ಟಿ ಫ್ರೀ.... ಇಂಥ ಶಬ್ದಗಳನ್ನೆಲ್ಲ ಬಳಸುವುದರ ಮೇಲೆ ಕಟ್ಟುನಿಟ್ಟಿನ ನಿಯಮ ಹೇರುವುದಕ್ಕೆ ಸಿದ್ಧತೆ ನಡೆದಿದೆ. ಯಾಕೆಂದರೆ, ಇಂತಹ ಶಬ್ದಗಳು ಜನರನ್ನು ತಪ್ಪುದಾರಿಗೆಳೆಯಬಹುದು. ಗ್ರಾಹಕ ರಕ್ಷಣೆ ಕಾಯ್ದೆ 2019 ಅನ್ನು ಉಲ್ಲಂಘಿಸಿದರೆ, ಒಂದು ಕಂಪನಿ ಗ್ರೀನ್‌ವಾಶಿಂಗ್ ಮಾಡುತ್ತಿದೆ ಎಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ.
ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೆ ತಂದ ಹೊರತು ಈ ಮಾರ್ಗಸೂಚಿಗಳು ಜಾರಿಗೆ ಬರುವುದಿಲ್ಲ ಎಂದು ಗ್ರಾಹಕ ಹಕ್ಕುಗಳ ವಿಷಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಪರಿಣಿತರು ಹೇಳುತ್ತಾರೆ. ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಗ್ರೀನ್‌ವಾಶಿಂಗ್ ತಡೆಯಲು ಮಾರ್ಗಸೂಚಿಗಳಷ್ಟೇ ಸಾಲದು ಎಂದು ಕೂಡಾ ಅವರು ಹೇಳುತ್ತಾರೆ.
ಮಾರ್ಗಸೂಚಿಗಳು ಕಾನೂನು ರೂಪ ಪಡೆಯುವವರೆಗೆ ಗ್ರೀನ್‌ವಾಶಿಂಗ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ನೀವು ಎಚ್ಚರಿಕೆಯಿಂದ ಇರಬೇಕು. ಮುಂದಿನ ಬಾರಿ ನೀವು ಪರಿಸರ ಸ್ನೇಹಿ ಉತ್ಪನ್ನವನ್ನು ಖರೀದಿ ಮಾಡಿದರೆ, ಜಾಹೀರಾತಿನಲ್ಲಿ ಕಾಣಿಸುವ ಆಕರ್ಷಕ ಹೆಡ್‌ಲೈನ್ ಅಷ್ಟನ್ನೇ ನಂಬಬೇಡಿ. ಆ ಪ್ರಾಡಕ್ಟ್ ನಲ್ಲಿ ಯಾವ್ಯಾವ ಉತ್ಪನ್ನಗಳನ್ನು ಬಳಸಿದ್ದಾರೆ ಎಂಬ ಪಟ್ಟಿ ನೋಡಿ. ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ... ಕಂಪನಿಯ ಹಿನ್ನೆಲೆಯನ್ನು ಓದಿ. ಅದರ ಬಗ್ಗೆ ಇನ್ನಷ್ಟು ಸೂಕ್ತ ಮಾಹಿತಿಯನ್ನು ಕಂಡುಕೊಳ್ಳಿ. ಈ ಮೂಲಕ ಮಾತ್ರವೇ ನೀವು ಉತ್ಪನ್ನಗಳನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬಹುದು.
More From GoodReturns

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications