ನಮಗೆ ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಹೀಗಾಗಿ ನಾವು ನನಾ ರೀತಿಯ ಸಾಲಗಳ ಮೊರೆ ಹೋಗುತ್ತೇವೆ. ಶಿಕ್ಷಣ, ಕುಟುಂಬ, ಖರೀದಿ ಸೇರಿಂದತೆ ಹತ್ತು ಹಲವು ವಿಚಾರಗಳಿಗೆ ನಮಗೆ ಹಣದ ಅವಶ್ಯಕತೆ ಇರುತ್ತದೆ ಹೀಗಾಗಿ ನಾವು ಸಾಲದ ಮೊರೆ ಹೋಗುತ್ತೇವೆ. ಇದರಲ್ಲಿ ಬಹಳ ಸುಲಭವಾಗಿ ದೊರೆಯುವ ಸಾಲವೆಂದರೆ ಅದು ವೈಯಕ್ತಿಕ ಸಾಲ ಮಾತ್ರ. ಹೀಗಾಗಿ ಹಲವರು ವೈಯಕ್ತಿಕ ಸಾಲವನ್ನ ಪಡೆಯುತ್ತಾರೆ. ಆದ್ರೆ ನೀವು ಈ ಸಾಲವನ್ನ ಪಡೆಯಲು ನಿಮ್ಮ ಸಂಬಳ ಕೂಡ ಮುಖ್ಯವಾಗುತ್ತೆ. ಹಾಗಾದ್ರೆ ಈ ಸಾಲವನ್ನ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ತಿಳಿಯಿರಿ.
ವೈಯಕ್ತಿಕ ಸಾಲ
ವೈಯಕ್ತಿಕ ಸಾಲವು ಹಣಕಾಸು ಸಂಸ್ಥೆಗಳು ಒದಗಿಸುವ ಒಂದು ರೀತಿಯ ಅಸುರಕ್ಷಿತ ಸಾಲವಾಗಿದೆ, ಅಲ್ಲಿ ಸಾಲಗಾರನು ಮೇಲಾಧಾರದ ಅಗತ್ಯವಿಲ್ಲದೇ ವೈಯಕ್ತಿಕ ಬಳಕೆಗಾಗಿ ನಿಗದಿತ ಮೊತ್ತದ ಹಣವನ್ನು ಪಡೆಯುತ್ತಾನೆ. ಗೃಹ ಅಥವಾ ಕಾರು ಸಾಲಗಳಂತಹ ಸುರಕ್ಷಿತ ಸಾಲಗಳಿಗಿಂತ ಭಿನ್ನವಾಗಿ, ವೈಯಕ್ತಿಕ ಸಾಲಗಳು ಯಾವುದೇ ಆಸ್ತಿಯೊಂದಿಗೆ ಸಂಬಂಧ ಹೊಂದಿಲ್ಲ.

ವೈಯಕ್ತಿಕ ಸಾಲಕ್ಕೆ ಮೇಲಾಧಾರದ ಅಗತ್ಯವಿಲ್ಲ, ಇದು ವ್ಯಾಪಕ ಶ್ರೇಣಿಯ ಸಾಲಗಾರರಿಗೆ ಪ್ರವೇಶಿಸಬಹುದಾಗಿದೆ. ವೈಯಕ್ತಿಕ ಸಾಲಗಳನ್ನು ಸಾಮಾನ್ಯವಾಗಿ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಸಾಲವನ್ನು ಕ್ರೋಢೀಕರಿಸುವುದು, ವೈದ್ಯಕೀಯ ವೆಚ್ಚಗಳಿಗೆ ಧನಸಹಾಯ, ಮನೆ ಸುಧಾರಣೆಗಳನ್ನು ಮಾಡುವುದು ಅಥವಾ ಮದುವೆಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯು ಸಾಲದಾತರ ನೀತಿಗಳು, ಸಾಲಗಾರನ ಕ್ರೆಡಿಟ್ ಅರ್ಹತೆ ಮತ್ತು ಆದಾಯದ ಆಧಾರದ ಮೇಲೆ ಬದಲಾಗುತ್ತದೆ. ಸಾಲಗಾರನು ಒಂದರಿಂದ ಐದು ವರ್ಷಗಳ ಅವಧಿಯವರೆಗೆ ಸ್ಥಿರ ಮಾಸಿಕ ಕಂತುಗಳ ಮೂಲಕ ಸಾಲವನ್ನು ಮರುಪಾವತಿಸಬಹುದು.
ವೈಯಕ್ತಿಕ ಸಾಲಕ್ಕಾಗಿ ಸಂಬಳ ಎಷ್ಟಿರಬೇಕು?
ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ನಿಮ್ಮ ಸಂಬಳ ಬಹಳ ಮುಖ್ಯವಾಗುತ್ತದೆ. ಇದು ಇದಕ್ಕಿರುವ ಮಾನದಂಡಗಳು ಕೂಡ ವಿಭಿನ್ನವಾಗಿವೆ. ಸಹಜವಾಗಿ ವೈಯಕ್ತಿಕ ಸಾಲವನ್ನ ಪಡೆಯಲು ಬಯಸುವವರು 15,000 ರೂ.ಗಳಿಂದ 25,000 ರೂ.ಗಳ ನಡುವಿನ ಸಂಬಳ ಹೊಂದಿರಬೇಕಾಗುತ್ತದೆ. ನಿಮಗೆ ಬರುವ ಆದಾಯದ ಆಧಾರದ ಮೇಲೆ, ನಿಮಗೆ ಎಷ್ಟು ಮೊತ್ತವನ್ನು ಸಾಲವನ್ನ ನೀಡಬಹುದು ಎಂದು ಬ್ಯಾಂಕ್‌ಗಳು ನಿರ್ಧರಿಸುತ್ತವೆ.
ಯಾರೆಲ್ಲಾ ವೈಯಕ್ತಿಕ ಸಾಲ ತೆಗೆದುಕೊಳ್ಳಬಹುದು
ಬ್ಯಾಂಕ್‌ಗಳ ಪ್ರಕಾರ, ನೀವು ಎರಡು ವರ್ಷ ಕೆಲಸ ಮಾಡಿರಬೇಕು. ಅತವಾ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರೆ ನೀವು ಸಾಲಕ್ಕೆ ಅರ್ಹರಾಗಿರುತ್ತೀರಿ. ಹಾಗೆ ನಿಮ್ಮ ವಯಸ್ಸು 21 ರಿಂದ 60 ವರ್ಷಗಳ ನಡುವೆ ಇರಬೇಕು. ಈ ಎಲ್ಲಾ ಮಾನದಂಡಗಳನ್ನ ಅನುಸರಿಸಿ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕಬಹುದು.
ಸಾಲವನ್ನು ಯಾವುದಕ್ಕಾಗಿ ಬಳಕೆ ಮಾಡಬಹುದು?
ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ, ತುರ್ತು ವೆಚ್ಚಗಳಿಗೆ, ಮದುವೆ, ಉನ್ನತ ಶಿಕ್ಷಣ, ಮನೆ ನವೀಕರಣಗಳು ಹೀಗೆ ನೀವು ವೈಯಕ್ತಿಕ ಸಾಲವನ್ನ ಎಲ್ಲಿ ಬೇಕಾದರೂ ಬಳಕೆ ಮಾಡಬಹುದು. ಜೊತೆಗೆ ನಿಮ್ಮ ಮನೆಯ ಖರ್ಚುಗಳನ್ನ ನಿಭಾಯಿಸಲು ಕೂಡ ಬಳಕೆ ಮಾಡಬಹುದು.
ಸಾಲದ ಮರುಪಾವತಿ ಅವಧಿ
ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ಮರುಪಾವತಿ ಅವಧಿ 12 ತಿಂಗಳಿಂದ 60 ತಿಂಗಳವರೆಗೆ ಇರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಸಾಲ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು.
ಅಗತ್ಯ ದಾಖಲೆಗಳು
ವೈಯಕ್ತಿಕ ಸಾಲಕ್ಕಾಗಿ ನೀವು ನೂರು ದಾಖಲೆಗಳನ್ನ ಸಲ್ಲಿಸುವ ಅಗತ್ಯ ಇಲ್ಲ. ಬರೀ ನಿಮ್ಮ ಐಡಿ ಪುರಾವೆ, ವಿಳಾಸದ ಪುರಾವೆ ಮತ್ತು ಆದಾಯ ಪುರಾವೆ ಹೀಗೆ ಕೆಲ ಇತ್ಯಾದಿಗಳ ದಾಖಲೆಗಳನ್ನ ನೀಡಿ ನೀವು ಸಾಲವನ್ನ ಪಡೆಯಬಹುದು. ವೈಯಕ್ತಿಕ ಸಾಲಗಳು ನಿಮಗೆ ಮೇಲಾಧರವಿಲ್ಲದೆ ಸಾಲವನ್ನ ನೀಡುತ್ತವೆ.
ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರಗಳು ಯಾವುವು?
ನೀವು ಬ್ಯಾಂಕ್‌ನಿಂದ ಸಾಲವನ್ನು ಪಡೆದರೆ, ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ 10.85% ರಿಂದ 24% ವರೆಗಿನ ಬಡ್ಡಿದರದಲ್ಲಿ ಸಾಲವನ್ನ ನೀವು ಪಡೆಯಬಹುದು. ಇದರ ಜೊತೆಗೆ, GST ಮತ್ತು ಲೋನ್ ಪ್ರೊಸೆಸಿಂಗ್ ಶುಲ್ಕಗಳು ಕೂಡ ಇರುತ್ತದೆ. ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರಗಳು ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ವಿಭಿನ್ನವಾಗಿರಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications