ಭಾರತ ಸರ್ಕಾರದ (Indian Govt) ಬಹಳ ಮಹತ್ವದ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆ (PM Kisan Scheme) ಕೂಡಾ ಒಂದು. ರೈತರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಇದೂ ಒಂದು. 2018ರ ಡಿಸೆಂಬರ್ 1 ರಿಂದ ಕಾರ್ಯರೂಪಕ್ಕೆ ತರಲಾಯಿತು. ದೇಶಾದ್ಯಂತ ಜಮೀನು ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂ. ಹಣವನ್ನು ನೀಡಲಾಗುತ್ತದೆ. ಈ ಆರ್ಥಿಕ ನೆರವನ್ನು 2,000 ರೂ.ನಂತೆ ಮೂರು ಕಂತುಗಳಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ (Farmers Account), ನೇರ ಲಾಭ ವರ್ಗಾವಣೆ (DBT) ಮೂಲಕ ನೀಡಲಾಗುತ್ತದೆ. ಇದೀಗ ಈ ಯೋಜನೆಯ 22 ಕಂತಿನ ಹಣಕ್ಕಾಗಿ ಇಡೀ ದೇಶ ಕಾಯುತ್ತಿದೆ.

ಹೌದು, ಈಗಾಗಲೇ 21 ನೇ ಕಂತಿನ ಪಿಎಂ ಕಿಸಾನ್ ಹಣ ಬಿಡುಗಡೆಯಾಗಿದೆ. ಆದ್ರೆ 22 ಕಂತಿನ ಹಣ ಯಾವಾಗ ಜಮಾ ಆಗುತ್ತೆ ಎಂಬ ಚರ್ಚೆ ಇದೀಗ ಉದ್ಭವಿಸಿದೆ. ಹಾಗಿದ್ರೆ, ಯಾವಾಗ 2 ಸಾವಿರ ಹಣ ಬರುತ್ತೆ ಎಂಬುದರ ಮಾಹಿತಿ ಇಲ್ಲಿದೆ.
ಯಾವಾಗ ಜಮಾ ಆಗುತ್ತೆ 2 ಸಾವಿರ ಹಣ?
ಸಾಮಾನ್ಯವಾಗಿ, ಪಿಎಂ ಕಿಸಾನ್ ಯೋಜನೆಯ ಕಂತುಗಳು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಇದೀಗ 21ನೇ ಕಂತಿನ ಬೆನ್ನಲ್ಲೇ, ಪಿಎಂ ಕಿಸಾನ್‌ನ 22ನೇ ಕಂತು ಮಾರ್ಚ್ ಮತ್ತು ಏಪ್ರಿಲ್ 2026ರ ನಡುವೆ ವಿತರಿಸಬಹುದು ಎಂದು ವರದಿಯಾಗಿದೆ.
ಈ ಕೆಲಸ ಮಾಡದಿದ್ರೆ ಸಿಗಲ್ಲ ಹಣ
ಹೌದು, ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಬೇಕೆಂದರೆ, ರೈತರು ಕಡ್ಡಾಯವಾಗಿ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು. ಜೊತೆಗೆ, ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿ, ಮತ್ತು ಜಮೀನು ದಾಖಲೆಗಳನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಇದರಿಂದ ರೈತರ ದಾಖಲೆ ಬಗ್ಗೆ ಸರ್ಕಾರಕ್ಕೆ ನೀಡಬೇಕಾಗುತ್ತದೆ.
ಆದ್ದರಿಂದ ಪಿಎಂ ಕಿಸಾನ್ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕೆಂದರೆ ಇ-ಕೆವೈಸಿ ಕಡ್ಡಾಯವಾಗಿದೆ. ಇದರಿಂದ ಅಕ್ರಮವನ್ನು ಸಂಪೂರ್ಣವಾಗಿ ತಡೆಯಬಹುದು ಮತ್ತು ಯಾವುದೇ ರೀತಿಯ ವಂಚನೆಗೆ ಅವಕಾಶವಿರುವುದಿಲ್ಲ.
ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ?
ಇ-ಕೆವೈಸಿ ಪೂರ್ಣಗೊಳಿಸಲು ಹಲವು ವಿಧಾನಗಳಿದ್ದು, ಫೇಸ್ ಅಥೆಂಟಿಕೇಶನ್ (Face Authentication) ಆಧಾರಿತ ವಿಧಾನವು ಅತ್ಯಂತ ಅನುಕೂಲಕರವಾಗಿದೆ. ರೈತರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಸುಲಭವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಫೇಸ್ ಅಥೆಂಟಿಕೇಶನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು, ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ 'ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್' ಮತ್ತು 'ಆಧಾರ್ ಫೇಸ್ ಆರ್ ಡಿ ಅಪ್ಲಿಕೇಶನ್' ಡೌನ್‌ಲೋಡ್ ಮಾಡಿಕೊಳ್ಳಿ. ನಂತರ, ಪಿಎಂ ಕಿಸಾನ್ ಅಪ್ಲಿಕೇಶನ್ ತೆರೆದು ತಮ್ಮ ನೋಂದಾಯಿತ ಮೊಬೈಲ್ ನಂಬರ್ ಅನ್ನು ನೋಂದಾಯಿಸಿ ಲಾಗಿನ್ ಮಾಡಬೇಕು.
ಲಾಗಿನ್ ಆದ ಮೇಲೆ "ಫಲಾನುಭವಿ ಸ್ಥಿತಿ" (beneficiary status) ಪೇಜ್ ಓಪನ್ ಮಾಡಬೇಕು. ನಿಮ್ಮ ಇ-ಕೆವೈಸಿ ಪರಿಸ್ಥಿತಿ "ನೋ" ಎಂದು ತೋರಿಸಿದರೆ, "ಇ-ಕೆವೈಸಿ" ಮೇಲೆ ಕ್ಲಿಕ್ ಮಾಡಿ, ಆಧಾರ್ ನಂಬರ್ ಆಡ್ ಮಾಡಿ ಮತ್ತು ನಿಮ್ಮ ಫೇಸ್ ಅಥೆಂಟಿಕೇಶನ್ ಮೂಲಕ ಸ್ಕ್ಯಾನ್ ಮಾಡಬೇಕು. ಒಂದು ವೇಳೆ ಸ್ಕ್ಯಾನ್ ಯಶಸ್ವಿಯಾದರೆ, ಇ-ಕೆವೈಸಿ ಪ್ರಕ್ರಿಯೆ ಆದಂತೆ.
ಪಿಎಂ ಕಿಸಾನ್ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಲು ಮೂರು ಮುಖ್ಯ ವಿಧಾನಗಳು:
- ಪಿಎಂ ಕಿಸಾನ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ OTP-ಆಧಾರಿತ ಇ-ಕೆವೈಸಿ.
- ಸಾಮಾನ್ಯ ಸೇವಾ ಕೇಂದ್ರಗಳು (CSCs) ಮತ್ತು ರಾಜ್ಯ ಸೇವಾ ಕೇಂದ್ರಗಳಲ್ಲಿ (SSKs) ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ.
- ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಫೇಸ್ ಅಥೆಂಟಿಕೇಶನ್ ಆಧಾರಿತ ಇ-ಕೆವೈಸಿ.


Click it and Unblock the Notifications