ಬೆಂಗಳೂರು, ಆಗಸ್ಟ್ 19: ಸಾವರಿನ್ ಗೋಲ್ಡ್ ಬಾಂಡ್ (SGB) ಗಳು ಹೂಡಿಕೆ ಬಗ್ಗೆ ಸಾಮಾನ್ಯ ತಿಳಿವಳಿಕೆ ನಮಗಿದೆ. ಈ ಸಾವರಿನ್ ಗೋಲ್ಡ್ ಬಾಂಡ್ ಗಳು ಟ್ರೆಡಿಂಗ್ ವಿನಿಮಯ ಕೇಂದ್ರಗಳಲ್ಲಿ ಉಲ್ಲೇಖಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಟ್ರೇಡ್ ಆಗುತ್ತಿವೆ. ಹಾಗಾದರೆ ಇದಕ್ಕೆ ಕಾರಣ ಏನು? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಆಗಸ್ಟ್ 14, 2024 ಕೊನೆಗೊಂಡಂತೆ ಸರಾಸರಿ ಲೆಕ್ಕ ತೆಗೆದುಕೊಂಡರೆ 15 ಲಿಕ್ವಿಡ್ SGB ಸಿರೀಸ್ ತನ್ನ ಉಲ್ಲೇಖಿತ ದರಕ್ಕಿಂತ ಶೇಕಡಾ 8ರಷ್ಟು ಹೆಚ್ಚಿನ ದರದಲ್ಲಿ ವಹಿವಾಟು ನಡೆಸುತ್ತಿದೆ. 999 ಪ್ಯೂರಿಟಿ ಗೋಲ್ಡ್ ಬಗ್ಗೆ ibjarates.com ನಲ್ಲಿ ಪ್ರಕಟವಾದ ವರದಿ ಈ ಮಾಹಿತಿಯನ್ನು ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2015 ರಿಂದ 67 SGB ಟ್ರ್ಯಾಂಚ್ ಆರಂಭಿಸಿ ಸುಮಾರು 14.7 ಕೋಟಿ ಎಸ್ ಜಿಬಿ ಘಟಕಗಳನ್ನು ಇಶ್ಶೂ ಮಾಡಿದೆ.

ಗೋಲ್ಡ್ ಬಾಂಡ್ ನ ಈ ಎಲ್ಲಾ ಸರಣಿಗಳನ್ನು ಸೆಕೆಂಡರಿ ಮಾರ್ಕೆಟ್ ನಲ್ಲಿ ಪಟ್ಟಿಮಾಡಲಾಗಿದೆ. BSE ಮತ್ತು NSE ನ ಕ್ಯಾಶ್ ಸೆಗ್ಮೆಂಟ್ ನಲ್ಲಿಹೂ ವಹಿವಾಟು ಲಭ್ಯವಿದೆ. ಹೂಡಿಕೆದಾರರು ಅವುಗಳನ್ನು ಡಿಮ್ಯಾಟ್ ಖಾತೆಗಳ ಮೂಲಕ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಹೊಸ ಗೋಲ್ಡ್ ಬಾಂಡ್ ಗಳು ಇಶ್ಶು ಆಗದೆ ಇದ್ದಾಗ ಅವುಗಳ ಬೇಡಿಕೆ ಹೆಚ್ಚಾಗಬಹುದು. ಇದೇ ಕಾರಣಕ್ಕೆ ರೆಫರೆನ್ಸ್ ದರಕ್ಕಿಂತ ಹೆಚ್ಚಿನ ದರದಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಗಳು ವಹಿವಾಟು ನಡೆಸುತ್ತಿವೆ.
ಹೊಸ ಸಮಸ್ಯೆಗಳ ಅನುಪಸ್ಥಿತಿಯಲ್ಲಿ, ಈ ಬಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಬಹುದು ಮತ್ತು ಇದು ಉಲ್ಲೇಖ ಬೆಲೆಗೆ ವಿರುದ್ಧವಾಗಿ ಈ ಬಾಂಡ್‌ಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆಗೆ ಕಾರಣವಾಗುತ್ತದೆ.
ಇನ್ನೊಂದು ಉದಾಹರಣೆಯನ್ನಿ ನೋಡೋಣ. ಆಗಸ್ಟ್ 14ರ ಲೆಕ್ಕದಲ್ಲಿ IBJA 999 ಶುದ್ಧತೆಯ ಚಿನ್ನದ ದರ 7,079 ರೂ. ಇದ್ದರೆ ಲೆಟೆಸ್ಟ್ ಗೋಲ್ಡ್ ಬಾಂಡ್ ಅಂದರೆ SGB 2023-24 ಸಿರಿಸ್ ಫೋರ್ ಬಾಂಡ್ ಗಳು 7,930 ರೂ. ನಲ್ಲಿ ವಹಿವಾಟು ನಡೆಸಿತ್ತು. ಸುಮಾರು 12 ಪ್ರತಿಶತ ಹೆಚ್ಚಿನ ದರದಲ್ಲಿ ವಹಿವಾಟು ನಡೆಯುತ್ತಿತ್ತು. ಹೆಚ್ಚಿನ ಕೂಪನ್ ದರ ಮತ್ತು ತೆರಿಗೆ ವಿನಾಯಿತಿ ಕಾರಣಗಳಿಂದಾಗಿ ಆರಂಭದಿಂದಲೂ SGB ಗೋಲ್ಡ್ ಬಾಂಡ್ ಗಳು ಉಲ್ಲೇಖಿತ ದರಕ್ಕಿಂತ ಹೆಚ್ಚಿನ ದರದಲ್ಲೇ ವಹಿವಾಟು ನಡೆಸಿಕೊಂಡು ಬಂದಿವೆ.
SGB ಎಂದರೆ ಏನು?
RBI ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಸರ್ಕಾರಿ ಬೆಂಬಲಿತ ಚಿನ್ನದ ಬಾಂಡ್ ಗಳನ್ನೇ ಎಸ್ ಜಿಬಿ ಎಂದು ಕರೆಯಬಹುದು. ನಿಮ್ಮ ಬಳಿ ಫಿಸಿಕಲ್ ಗೋಲ್ಡ್ ಬದಲಾಗಿ ಗೋಲ್ಡ್ ಬಾಂಡ್ ಗಳಿರುತ್ತವೆ. ಚಿನ್ನದ ದರ ಏರಿಕೆಯೊಂದಿಗೆ ಇಲ್ಲಿಯೂ ದರ ಏರಿಕೆ-ಇಳಿಕೆಯಾಗುತ್ತದೆ. ಭವತಿಕ ಚಿನ್ನದ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಬಹುದಾದ ಸರಳ ಮತ್ತು ಸುರಕ್ಷಿತ ತಂತ್ರ ಇದಾಗಿದೆ.
ಗೋಲ್ಡ್ ಎಕ್ಸ್ ಚೈಂಜ್ ಟ್ರೇಡೆಟ್ ಫಂಡ್ (ಇಟಿಎಫ್‌ಗಳು) ಮತ್ತು ಫಿಸಿಕಲ್ ಗೋಲ್ಡ್ ಗಿಂತ ಇವು ಭಿನ್ನ. ಎಸ್ ಜಿಬಿಗಳು ವಾರ್ಷಿಕವಾಗಿ ಶೆ. 2.5 ರಿಂದ ಶೇ. 2.75 ಕೂಪನ್ ರೇಟ್ ನೀಡುವುದು ಲಾಭದಾಯಕ. ಕೂಪನ್ ರೇಟ್ ಅಂದರೆ ಒಂದು ರೀತಿಯಲ್ಲಿ ಫಿಕ್ಸೆಡ್ ಬಡ್ಡಿ ದರ.
ಹೊಸ ಎಸ್ ಜಿಬಿಯ ಹೊಸ ಭರವಸೆ!
ಕೇಂದ್ರ ಬಜೆಟ್ 2024 ರಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 15 ಪ್ರತಿಶತದಿಂದ 6 ಪ್ರತಿಶತಕ್ಕೆ ಕಡಿತಗೊಳಿಸಿದ ನಂತರ SGB ಗಳು ಮತ್ತಷ್ಟು ಚರ್ಚೆಗೆ ಬಂದವು. ಬಜೆಟ್ ನ ಘೋಷಣೆ ಚಿನ್ನ ಮತ್ತು SGB ಗಳ ದರ ಕುಸಿತಕ್ಕೆ ಕಾರಣವಾಯಿತು. ಹಾಗಾಗಿ ಮುಂದಿನ ತಿಂಗಳುಗಳಲ್ಲಿ ಮೆಚ್ಯೂರ್ ಆಗುವ SGB ಬಾಂಡ್ ಗಳಿಂದ ಬರಬಹುದಾದ ಲಾಭಾಂಶ ಕಡಿಮೆಯಾಗಬಹುದು ಎನ್ನುವುದು ಹೂಡಿಕೆದಾರರ ಆತಂಕ.
ಗೋಲ್ಡ್ ಬಾಂಡ್ ಗಳಿಂದ ಹೆಚ್ಚಿನ ರಿಟರ್ನ್ಸ್ ಸಿಗುತ್ತಿದೆ ಎನ್ನುವ ಕಾರಣಕ್ಕೆ ಚಿನ್ನದ ಆಮದು ಸುಂಕ ಕಡಿತಗೊಳಿಸಲಾಗಿದೆ ಎಂಬ ವದಂತಿಗಳಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್ ಮುಖ್ಯಸ್ಥ ದೀಪಕ್ ಜಸಾನಿ ಹೇಳುತ್ತಾರೆ. SGB ಬಾಂಡ್ ಗಳನ್ನು ಹೊಸದಾಗಿ ಇಶ್ಶೂ ಮಾಡುವುದು ಅನಿಶ್ಚಿತತೆಯಿಂದ ಕೂಡಿದ್ದು ಈಗ ಇರುವ ಬಾಂಡ್ ಗಳನ್ನೇ ಖರೀದಿಸಡಿಕೊಂಡು ಚಿನ್ನದ ದರ ಏರಿಕೆಯೊಂದಿಗೆ ಹೆಚ್ಚಿನ ರಿಟರ್ನ್ಸ್ ಪಡೆದುಕೊಳ್ಳುವ ವರ್ತನೆಯನ್ನು ಹೂಡಿಕೆದಾರರು ತೋರಿಸುತ್ತಿದ್ದಾರೆ. ಇದು ಬೇಡಿಕೆ ಹೆಚ್ಚಲು ಇನ್ನೊಂದು ಕಾರಣವಾಗಿದೆ ಎಂದು ಜಸಾನಿ ಹೇಳುತ್ತಾರೆ.
ಗೋಲ್ಡ್ ಬಾಂಡ್ ಗಳು ಒಂದರ್ಥದಲ್ಲಿ ಸರ್ಕಾರಕ್ಕೆ ಹೊರೆಯಾಗುತ್ತಿದ್ದು ಅವುಗಳನ್ನು ಕಡಿಮೆ ಮಾಡಬಹುದು ಅಥವಾ ನಿಲ್ಲಿಸಬಹುದು ಎಂದು ಮಾಧ್ಯಮ ವರದಿಗಳು ಹೇಳಿದ್ದವು.
ಮ್ಯೆಚುರಿಟಿ ಮೇಲೆ ತೆರಿಗೆ ಲಾಭದ ಪ್ರಾಮುಖ್ಯತೆ:
ಚಿನ್ನದ ಮೇಲಿನ ಹೂಡಿಕೆ ಅಂದರೆ ಫಿಸಿಕಲ್ ಗೋಲ್ಡ್ ಇಲ್ಲವೇ ಗೋಲ್ಡ್ ಇಟಿಎಫ್ ಬಾಂಡ್ ಗಳಿಗಿಂತ ಎಸ್ ಜಿಬಿ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿದೆ. ಹೂಡಿಕೆದಾರರು ತಮ್ಮ SGB ಹೂಡಿಕೆಗಳನ್ನು ರಿಡೀಮ್ ಮಾಡಿಕೊಂಡಾಗ (ಎಂಟು ವರ್ಷಗಳ ನಂತರ) ಅಂದರೆ ಮ್ಯಾಚುರಟಿ ನಂತರ ಅವರು ಕ್ಯಾಪಿಟಲ್ ಗೇನ್ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಇದಲ್ಲದೆ ಬಾಂಡ್ ಹೂಡಿಕೆ ನಂತರ 5ನೇ, 6ನೇ ಅಥವಾ 7ನೇ ವರ್ಷದ ಕೊನೆಯಲ್ಲಿ RBI ಪ್ರಿಮ್ಯಾಚೂರ್ ವಿತ್ ಡ್ರಾ ವಿಂಡೋ ಬಳಸಿಕೊಂಡು ರಿಡೀಮ್ ಮಾಡಿಕೊಂಡರೂ ಕ್ಯಾಪಿಟಲ್ ಗೇನ್ ತೆರಿಗೆಯಿಂದ ವಿನಾಯಿತಿ ಪಡೆಯುತ್ತಾರೆ.
ಆದರೆ ನೀವು ಈ ವಿಂಡೋದ ಹೊರಗೆ ಅಥವಾ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ನಿಮ್ಮ SGB ಗಳನ್ನು ಮಾರಾಟ ಮಾಡಿದರೆ, ಬಂಡವಾಳ ಲಾಭಗಳಿಗೆ ತೆರಿಗೆ ವಿಧಿಸಲಾಗುತ್ತದೆ. SGB ಯುನಿಟ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಖರೀದಿಸಿದರೆ ಮತ್ತು 12 ತಿಂಗಳೊಳಗೆ ಮಾರಾಟ ಮಾಡಿದರೆ, ಅದನ್ನು ಅಲ್ಪಾವಧಿಯ ಬಂಡವಾಳ ಲಾಭ (STCG) ಎಂದು ವರ್ಗೀಕರಿಸಲಾಗುತ್ತದೆ ಮತ್ತು ಅನ್ವಯವಾಗುವ ಸ್ಲ್ಯಾಬ್ ದರಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ. SGB ಗಳನ್ನು 12 ತಿಂಗಳುಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ, ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯು 12.5 ಪ್ರತಿಶತಕ್ಕೆ ಅನ್ವಯಿಸುತ್ತದೆ. ಜೊತೆಗೆ ಅನ್ವಯಿಸುವ ಹೆಚ್ಚುವರಿ ಶುಲ್ಕ ಮತ್ತು ಸೆಸ್ ಸಹ ನೀಡಬೇಕು.
More From GoodReturns

Gold Price Bengaluru: ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯೋ, ಏರಿಕೆಯೋ? ಬೆಲೆ ತಿಳಿಯಿರಿ

Bengaluru Gold Price: ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಚಿನ್ನದ ದರ! ಒಂದೇ ದಿನ 1,030 ರೂ. ಇಳಿಕೆ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Silver Rate Today: ಬೆಳ್ಳಿ ಪ್ರಿಯರಿಗೆ ಜಾಕ್ ಪಾಟ್! ಶನಿವಾರ ಬೆಲೆ ಭರ್ಜರಿ ಕುಸಿತ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

LPG Shortage: ರಾಜ್ಯದಲ್ಲಿ ಇನ್ನೂ 10 ದಿನ ಸಿಗಲ್ಲ ಎಲ್ಪಿಜಿ; ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದೇನು?

IndiGo Price Hike: ವಿಮಾನ ಪ್ರಯಾಣಿಕರಿಗೆ ಶಾಕ್! ಇಂಡಿಗೋ ಪ್ರಯಾಣ ದರ ಮತ್ತಷ್ಟು ಹೆಚ್ಚಳ

PAN Card Rules: ಪ್ಯಾನ್ ಕಾರ್ಡ್ ಇಲ್ಲದವರೇ ಇಲ್ಲಿ ಗಮನಿಸಿ; ನಿಯಮ ಸಂಪೂರ್ಣ ಚೇಂಜ್

LPG E-KYC: ಎಲ್ಪಿಜಿ ಸಿಗಬೇಕೆಂದರೆ ಈ ಕೆಲಸ ಮಾಡಲೇಬೇಕು! ಕೇಂದ್ರದ ಖಡಕ್ ಸೂಚನೆ



Click it and Unblock the Notifications