ಬಹಳಷ್ಟು ಮಂದಿಗೆ, ಅದರಲ್ಲೂ ಮಹಿಳೆಯರಿಗೆ ಮನೆಯಲ್ಲಿ ಹಣ ಕೂಡಿಡುವುದು ಹವ್ಯಾಸನೋ ಅಥವಾ ಅಭ್ಯಾಸನೋ ಆಗಿರುತ್ತದೆ. ಸಾಸಿವೆ ಡಬ್ಬಿಯಲ್ಲಿ, ಕಪಾಟಿನಲ್ಲಿ, ಸೀರೆಗಳ ಮಡಿಕೆಯ ಒಳಗೆ ಗರಿಗರಿ ನೋಟುಗಳನ್ನು ಭದ್ರವಾಗಿ ಇರಿಸಿಕೊಂಡಿರುತ್ತಾರೆ. ಹೀಗೆ ಇಟ್ಟ ಹಣ ತುರ್ತು ಸಂದರ್ಭಗಳಲ್ಲಿ ಸ್ವಲ್ಪ ಉಪಯುಕ್ತವಾಗಬಹುದು. ಆದರೆ, ಅದಕ್ಕಿಂತಲೂ ಹಣ ಎಲ್ಲಿ ಇಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಕೆಲವರು ಮನೆಯಲ್ಲಿಯೇ ಹಣವನ್ನು ಎಲ್ಲಿ ಬೇಕಾದರೂ ಇಡುತ್ತಾರೆ. ಆದರೆ, ಇದು ಮುಂದೆ ತೊಂದರೆಗೆ ಕಾರಣವಾಗಬಹುದು ಎಂದು ತಜ್ಞರ ಅಭಿಪ್ರಾಯ.!
ಹಣಕಾಸು ನಿರ್ವಹಣೆ ಆ್ಯಪ್ ಪಿಯರೆ ನಡೆಸಿದ ಸಮೀಕ್ಷೆಯ ಪ್ರಕಾರ, ಸರಾಸರಿ ಒಬ್ಬರ ಮನೆಯಲ್ಲಿ ಸುಮಾರು 45,000 ರೂಪಾಯಿಗಳಷ್ಟು ನಗದು ಮತ್ತು ನಾಣ್ಯಗಳು, ನೋಟುಗಳು ಹಾಗೂ ಚಿನ್ನ- ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳು ಇರುತ್ತವೆ. ಈ ಸಮೀಕ್ಷೆಯನ್ನು ಜನವರಿ ಕೊನೆ ಮತ್ತು ಫೆಬ್ರವರಿ ಮೊದಲ ವಾರದಲ್ಲಿ 1,500 ಅಮೇರಿಕಾದಲ್ಲಿ ವಯಸ್ಕರ ಮೇಲೆ ನಡೆಸಲಾಗಿತ್ತು. ಭಾರತಕ್ಕೆ ಹೋಲಿಸಿದರೆ ಸರಾಸರಿ ನಗದು - ಚಿನ್ನ - ಬೆಳ್ಳಿ ಪ್ರಮಾಣ ಕೊಂಚ ಹೆಚ್ಚೇ ಇರಬಹುದು.

ಈ ಸಮೀಕ್ಷೆಯಲ್ಲಿಮನೆಯಲ್ಲಿ ಹಣವನ್ನು ಎಲ್ಲಿ ಇಡುತ್ತೀರಿ ಎಂದು ಕೇಳಿದಾಗ, ಸುಮಾರು 10% ಜನರು ಸೇಫ್ ಲಾಕರ್ ನಲ್ಲಿ ಇಡುತ್ತಾರೆ. ಇದು ಹಣವನ್ನು ಇಡುವ ಅತ್ಯಂತ ಜನಪ್ರಿಯ ಸ್ಥಳವಾಗಿದೆ. ಸುಮಾರು 6% ಜನರು ರಹಸ್ಯ ಜಾಗಗಳಲ್ಲಿ ಹಣವನ್ನು ಮರೆಮಾಡುತ್ತಾರೆ. ಉದಾಹರಣೆಗೆ, "ಕಾಣದಂತೆ ನಕಲಿ ಭಾಗವಿರುವ ಡ್ರಾಯರ್". ಇನ್ನು ಉಳಿದಂ ತೆ 6% ಜನರು ಹಾಸಿಗೆ, ದಿಂಬು ಅಥವಾ ಮಲಗುವ ವಸ್ತುಗಳ ಒಳಗೆ ಹಣವನ್ನು ಇಡುತ್ತಾರೆ. ಅಚ್ಚರಿ ಎಂದರೆ 5% ಜನರು ಫ್ರೀಜರ್ ಅಥವಾ ರೆಫ್ರಿಜರೇಟರ್‌ನಲ್ಲಿ ಹಣ ಇಡುವುದು ಉಂಟಂತೆ. ಸಣ್ಣ ಪ್ರಮಾಣದ ಜನರು ಹೂದಾನಿ ಅಥವಾ ಪಾತ್ರೆಯಲ್ಲಿ, ಡಬ್ಬಿ (4%), ಅಥವಾ ನೆಲದ ಹಲಗೆಗಳು ಅಥವಾ ಕಾರ್ಪೆಟ್ ಅಡಿಯಲ್ಲಿ (3%) ಹಣವನ್ನು ಇಡುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಮನೆಯಲ್ಲಿ ಹಣ ಇಟ್ಟರೆ ಸಮಸ್ಯೆಯಲ್ಲ ಆದರೆ ಆದರೆ ಅದನ್ನೇ ಅತಿಯಾಗಿ ಮಾಡಬಾರದು. ಕೆಲವೊಮ್ಮೆ ಮನೆಯಲ್ಲಿ ನಗದನ್ನು ಸಂಗ್ರಹಿಸುವುದರಿಂದ ವಿಮೆ ಮಾಡಿದ ಹಣಕಾಸು ಸಂಸ್ಥೆಯಲ್ಲಿ ಖಾತೆಯಿಂದ ಪಡೆಯುವ ರಕ್ಷಣೆ ಸಿಗುವುದಿಲ್ಲ. ಹೆಚ್ಚಿನ ಬಡ್ಡಿ ಅಥವಾ ಷೇರು ಮಾರುಕಟ್ಟೆ ಆದಾಯದಿಂದ ಬರುವ ಸಂಭಾವ್ಯ ಲಾಭಗಳನ್ನು ಕಳೆದುಕೊಳ್ಳುವ ಅಪಾಯವೂ ಇದೆ.
ಕಳ್ಳತನದ ಅಪಾಯ: ನೀವು ಮನೆಯಲ್ಲಿ ದೊಡ್ಡ ಮೊತ್ತದ ನಗದನ್ನು ಇರಿಸಿದರೆ, ಕಳ್ಳತನದ ಅಪಾಯವು ಹೆಚ್ಚಾಗುತ್ತದೆ. ಕಳ್ಳರು ನಿಮ್ಮ ಮನೆಯನ್ನು ಗುರಿಯಾಗಿಸಬಹುದು ಮತ್ತು ನಿಮ್ಮ ಹಣವನ್ನು ಕದಿಯಬಹುದು.
ಸುರಕ್ಷತೆಯ ಕೊರತೆ: ಮನೆಯಲ್ಲಿ ನಗದನ್ನು ಇರಿಸುವುದು ಸುರಕ್ಷಿತವಲ್ಲ. ಬೆಂಕಿ, ಪ್ರವಾಹ ಅಥವಾ ಇತರ ವಿಪತ್ತುಗಳು ಸಂಭವಿಸಿದರೆ, ನಿಮ್ಮ ಹಣವು ನಾಶವಾಗಬಹುದು.
ಬೆಳೆಯುವ ಅವಕಾಶದ ಕೊರತೆ: ನೀವು ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇರಿಸಿದರೆ, ನೀವು ಬಡ್ಡಿಯನ್ನು ಗಳಿಸಬಹುದು. ಇದು ನಿಮ್ಮ ಹಣವನ್ನು ಬೆಳೆಯಲು ಸಹಾಯ ಮಾಡುತ್ತದೆ.
ತುರ್ತು ಪರಿಸ್ಥಿತಿಗಳಲ್ಲಿ ತೊಂದರೆ: ತುರ್ತು ಪರಿಸ್ಥಿತಿಗಳಲ್ಲಿ ನಿಮಗೆ ಹಣದ ಅಗತ್ಯವಿದ್ದರೆ, ನಿಮ್ಮ ಮನೆಯಲ್ಲಿ ನಗದು ಇಟ್ಟುಕೊಂಡರೆ ಅದನ್ನು ತಕ್ಷಣಕ್ಕೆ ಪಡೆಯಲು ಸಾಧ್ಯವಾಗದಿರಬಹುದು. ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೆ, ನೀವು ಅದನ್ನು ಎಟಿಎಂ ಅಥವಾ ಬ್ಯಾಂಕ್ನಿಂದ ಸುಲಭವಾಗಿ ಪಡೆಯಬಹುದು.
ಕಪ್ಪುಹಣದ ಸಮಸ್ಯೆ: ಮನೆಯಲ್ಲಿ ಅಕ್ರಮವಾಗಿ ನಗದು ಇಟ್ಟುಕೊಳ್ಳುವುದು ಕಾನೂನುಬಾಹಿರ. ಇದು ಕಪ್ಪುಹಣದ ಸಮಸ್ಯೆಗೆ ಕಾರಣವಾಗಬಹುದು.
ಹಣವನ್ನು ಸುರಕ್ಷಿತವಾಗಿ ಇರಿಸಲು ಕೆಲವು ಸಲಹೆಗಳು:
ನಿಮ್ಮ ಹಣವನ್ನು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇರಿಸುವುದು ಉತ್ತಮ, ಬೇಕಾದ ಹಣ ಹಿಂಪಡೆಯಬಹುದು.
ಮನೆಯಲ್ಲಿ ಹಣ ಇರಿಸುವ ಬದಲು ವಿವಿಧ ಹೂಡಿಕೆಗಳಲ್ಲಿ ಹೂಡಿಕೆ ಮಾಡಿದರೆ ಹಣ ಬೆಳೆಯುತ್ತದೆ
ನಿಮ್ಮ ಮನೆಯಲ್ಲಿ ಚಿಕ್ಕ ಮೊತ್ತದ ನಗದನ್ನು ಮಾತ್ರ ಇರಿಸಿ. ್ ಬೆಂಕಿ ಅವಘಡ, ಕಳ್ಳತನಗಳಿಂದ ರಕ್ಷಿಸುವ ಹಾಗೂ ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನೀವು ಸುಲಭವಾಗಿ ಪಡೆದುಕೊಳ್ಳಬಹುದಾದ "ವೈಯಕ್ತಿಕ ಹಣಕಾಸು ಸಾಧನ ಲಾಕರ್ ಗಳಲ್ಲಿ ಹಣ ಇರಿಸುವುದು ಉತ್ತಮ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications