ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತ. ಆದ್ರೆ ಇತ್ತೀಚೆಗೆ ಬೆಲೆ ಏರಿಕೆಯಿಂದ ಹೆಚ್ಚಿನವರು ಖರೀದಿ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಈ ವರ್ಷ ಚಿನ್ನದ ಬೆಲೆ ಏರಿಕೆ ಪ್ರತಿಯೊಬ್ಬ ಹೂಡಿಕೆದಾರರನ್ನೂ ಬೆಚ್ಚಿಬೀಳಿಸಿದೆ. 2025ರಲ್ಲಿ ಚಿನ್ನದ ದರವು 60% ರಿಂದ 67% ಪ್ರತಿಶತದಷ್ಟು ಏರಿಕೆ ಕಂಡಿದ್ದು, ನಿರಂತರವಾಗಿ ದಾಖಲೆ ಮೇಲೆ ದಾಖಲೆಯನ್ನು ಸೃಷ್ಟಿಸುತ್ತಿದೆ.

2025ರ ಅಂತ್ಯದವರೆಗೂ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಇದೇ ವೇಗದ ಏರಿಕೆಯು 2026ರಲ್ಲೂ ಮುಂದುವರೆಯುತ್ತಾ ಅಥವಾ ಬೆಲೆಗಳು ಇಳಿಕೆಯಾಗುತ್ತಾ ಎಂಬ ಪ್ರಶ್ನೆಗಳು ಮೂಡಿದೆ. ಇಂದಿಗೂ ಚಿನ್ನ ಕೇವಲ ಆಭರಣವಲ್ಲ, ಕಷ್ಟದ ಸಮಯದಲ್ಲಿ ಆಪತ್ಭಾಂಧವನಾಗಿ ಆರ್ಥಿಕ ಭದ್ರತೆ ಒದಗಿಸುತ್ತದೆ. ಅದೇ ಕಾರಣದಿಂದ ಇದೀಗ ಹೂಡಿಕೆದಾರರು ಮುಂದಿನ ವರ್ಷದಲ್ಲಿ ಚಿನ್ನದ ದರದ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ.
MCXನಲ್ಲಿ ಚಿನ್ನದ ಬೆಲೆ ಇಳಿಕೆ
ಸೋಮವಾರ ಬೆಳಿಗ್ಗೆ MCX ನಲ್ಲಿ ಚಿನ್ನದ ಫ್ಯೂಚರ್‌ಗಳ ದರದಲ್ಲಿ ಸಣ್ಣ ಇಳಿಕೆ ಕಂಡುಬಂದಿತು. ಆ ಸಮಯದಲ್ಲಿ, ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹1,30,409 ರೂ.ನಲ್ಲಿ ವಹಿವಾಟು ನಡೆಸಲಾಯಿತು. ಇತ್ತೀಚಿನ ಏರಿಕೆಯ ನಂತರ ಟ್ರೇಡರ್‌ಗಳು ಲಾಭಾಂಶವನ್ನು ದಾಖಲಿಸಿದ್ದರಿಂದ ಈ ಇಳಿಕೆ ಸಂಭವಿಸಲಿ ಕಾರಣ ಎಂದು ಹೇಳಲಾಗಿದೆ. ಆದರೆ, ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನ ಇನ್ನೂ ಏರಿಕೆಯ ಟ್ರೆಂಡ್‌ನಲ್ಲಿದ್ದು, ದೀರ್ಘಾವಧಿಯಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
2025ರಲ್ಲಿ ಚಿನ್ನದ ದರ ಭಾರೀ ಏರಿಕೆ!
2025ರಲ್ಲಿ ಚಿನ್ನದ ಬೆಲೆ ಶೇ. 67ರಷ್ಟು ಏರಿಕೆ ಕಂಡಿದೆ. ದೆಹಲಿ ಬುಲಿಯನ್ ಅಸೋಸಿಯೇಷನ್‌ನ ವರದಿ ಪ್ರಕಾರ, ಈ ವರ್ಷದ ಜನವರಿ ಆರಂಭದಲ್ಲಿ 10 ಗ್ರಾಂ ಹೆಚ್ಚಿಗೆ ಚಿನ್ನದ ಬೆಲೆ ₹79,390 ರಷ್ಟಿದ್ದರೆ, ಈಗ ಅದು ₹1.30 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಅಂದರೆ, ಕೇವಲ ಒಂದು ವರ್ಷದಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ.
ಕಾರಣಗಳೇನು?
ಮೆಹ್ತಾ ಇಕ್ವಿಟೀಸ್‌ನ ತಜ್ಞರ ಪ್ರಕಾರ, ಈ ಏರಿಕೆಗೆ ಮೂರು ಮುಖ್ಯ ಕಾರಣಗಳು ಇವೆ:
- ಸುರಕ್ಷಿತ ಹೂಡಿಕೆಗೆ ಹೆಚ್ಚಿದ ಬೇಡಿಕೆ
- ಜಗತ್ತಿನಾದ್ಯಂತ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು
- ಡಾಲರ್ ಎದುರು ರೂಪಾಯಿಯ ದುರ್ಬಲತೆ.
ಇದೇ ಮೂರು ಅಂಶಗಳು ಮುಂದಿನ ವರ್ಷದ ಚಿನ್ನದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ.
ಏರಿಕೆಯಾಗುತ್ತಾ ಚಿನ್ನದ ದರ?
ಹಲವಾರು ಬ್ರೋಕರೇಜ್ ಹೌಸ್‌ಗಳು ಮತ್ತು ಮಾರುಕಟ್ಟೆ ತಜ್ಞರು 2026ರಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಿದ್ದಾರೆ. ಜಾಗತಿಕ ಪರಿಸ್ಥಿತಿಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳು ಇದೇ ರೀತಿ ಮುಂದುವರೆದರೆ ಅಥವಾ ರೂಪಾಯಿ ಮತ್ತಷ್ಟು ದುರ್ಬಲಗೊಂಡರೆ, ಚಿನ್ನದ ಬೆಲೆ 5% ರಿಂದ 15% ರವರೆಗೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಈ ಏರಿಕೆಯೊಂದಿಗೆ, ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1.45 ಲಕ್ಷದಿಂದ ₹1.55 ಲಕ್ಷದವರೆಗೆ ತಲುಪುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ಪ್ರಕಾರ, ಜಗತ್ತಿನಾದ್ಯಂತ ಹೆಚ್ಚುತ್ತಿರುವ ಆರ್ಥಿಕ ಸಮಸ್ಯೆಗಳು, ಏರಿಕೆ ಕಾಣುತ್ತಿರುವ ಬಡ್ಡಿದರಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಚಿನ್ನದ ಬೇಡಿಕೆ ಬಲವಾಗಿ ಮುಂದುವರಿಯುತ್ತದೆ. 2025ರಂತೆಯೇ 2026ರಲ್ಲೂ ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತಗಳು ಇರಲಿವೆ. ಇಂತಹ ಸಂದರ್ಭದಲ್ಲೂ, ಚಿನ್ನವು ಸುರಕ್ಷಿತ ಹೂಡಿಕೆಯಾಗಿ ಮತ್ತಷ್ಟು ಪರಿಗಣನೆಯಾಗಲಿದೆ ಎಂದು WGC ಯ ವರದಿ ಹೇಳಿದೆ.


Click it and Unblock the Notifications