ಬಹುತೇಕರು ಭವಿಷ್ಯದ ದೃಷ್ಟಿಯಿಂದ, ನಿವೃತ್ತಿ ದೃಷ್ಟಿಯಿಂದ ಹಲವು ಕಡೆಗಳಲ್ಲಿ ಹೂಡಿಕೆ (Investment) ಮಾಡುತ್ತಿದ್ದಾರೆ. ಆದರೆ ಹೂಡಿಕೆದಾರರಿಗೆ ಕೆಲವು ಸೂತ್ರಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಪ್ರಸ್ತುತ ಆರ್ಥಿಕ ಸಮಸ್ಯೆಯ ಸಂದರ್ಭದಲ್ಲಿ, ವೈಯಕ್ತಿಕ ಹಣಕಾಸು ವಿಷಯಗಳಲ್ಲಿ ಒಂದು ಸರಳ ಸೂತ್ರ ಹೆಚ್ಚು ಜನಪ್ರಿಯವಾಗಿದೆ. ಅದುವೇ 15x15x15 SIP ನಿಯಮ. ದೇಶದ ದುಡಿಯುವ ವರ್ಗದ ಜನರಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಅನ್ನುವ ಮನಸ್ಥಿತಿಯ ನಡುವೆ ಈ ಸೂತ್ರವೊಂದು ಭಾರೀ ವೈರಲ್ ಆಗುತ್ತಿದೆ.

ಜನರನ್ನು ಆಕರ್ಷಿಸುತ್ತಿದೆ ಸೂತ್ರ!
ಪ್ರತಿ ತಿಂಗಳು 15,000 ರೂಪಾಯಿಗಳನ್ನು 15 ವರ್ಷಗಳ ಕಾಲ ಹೂಡಿಕೆ ಮಾಡಿ, ವಾರ್ಷಿಕ 15% ಆದಾಯ ಗಳಿಸಿದರೆ, ಸುಮಾರು 1 ಕೋಟಿ ಆದಾಯದ ಮಾಲೀಕರಾಗಬಹುದು ಎಂಬುದು ಈ ಸೂತ್ರದ ಅರ್ಥ. ಕಾಗದದ ಮೇಲೆ ಈ ಲೆಕ್ಕಾಚಾರ ಆಕರ್ಷಕವಾಗಿ ಕಂಡರೂ, ಹೂಡಿಕೆದಾರರು ಈ ಬಗ್ಗೆ ಹಲವು ರೀತಿಯಲ್ಲಿ ಯೋಚನೆ ಮಾಡುತ್ತಾರೆ.
15x15x15 ನಿಯಮ ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಅವುಗಳಲ್ಲಿ ಮೊದಲನೆಯದು, ಹೂಡಿಕೆದಾರರು ಪ್ರತಿ ತಿಂಗಳು ನಿರಂತರವಾಗಿ 15,000 ರೂಪಾಯಿಗಳನ್ನು ಮೀಸಲಿಡಬಹುದಾ ಎಂಬುದು. ಎರಡನೆಯದು, ಈ ಹೂಡಿಕೆಯನ್ನು 15 ವರ್ಷಗಳ ಕಾಲ ನಿರಂತರವಾಗಿ ನಿರ್ವಹಿಸಬಹುದಾ ಎಂಬುದು ಮತ್ತು ಮೂರನೆಯದು, ಹೂಡಿಕೆಗೆ ತಕ್ಕಂತೆ ಈ ಅವಧಿಯುದ್ದಕ್ಕೂ ಸರಾಸರಿ 15% ವಾರ್ಷಿಕ ಆದಾಯವನ್ನು ನೀಡುತ್ತದೆಯೇ ಎಂಬುದು.
ಮೊದಲ ಎರಡು ಪ್ರಶ್ನೆಗಳು ವೈಯಕ್ತಿಕ ಶಿಸ್ತು ಮತ್ತು ಆದಾಯದ ಸ್ಥಿರತೆಯನ್ನು ಅವಲಂಬಿಸಿದ್ದರೆ, ಮೂರನೆಯ ಪ್ರಶ್ನೆ ಮಾತ್ರ ಮಾರುಕಟ್ಟೆಯ ಏರಿಳಿತಗಳ ಮೇಲೆ ಸಂಬಂಧಿಸಿರುತ್ತದೆ. ಲೆಕ್ಕಾಚಾರದ ಪ್ರಕಾರ, 15 ವರ್ಷಗಳಲ್ಲಿ, ತಿಂಗಳಿಗೆ 15,000 ರೂಪಾಯಿಗಳಂತೆ SIPಯಲ್ಲಿ ಹೂಡಿಕೆ ಮಾಡಿದ್ರೆ, ಒಟ್ಟು 27 ಲಕ್ಷ ರೂಪಾಯಿಗಳ ಹೂಡಿಕೆಯಾಗುತ್ತದೆ.
ಮಾರುಕಟ್ಟೆಯು ವಾಸ್ತವವಾಗಿ 15% ಬಡ್ಡಿಯನ್ನು ನೀಡಿದರೆ, ಅಂತಿಮ ಮೌಲ್ಯವು 1 ಕೋಟಿ ರೂಪಾಯಿಗಳ ಸಮೀಪ ತಲುಪಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಆದಾಯ ನಿಜವಾಗ್ಲೂ ಸಿಗುತ್ತಾ ಎಂದು ಲೆಕ್ಕಾಚಾರ ಹಾಕಿದಾಗ ಹಲವು ಪ್ರಶ್ನೆಗಳು, ಗೊಂದಲಗಳು ಉಂಟಾಗುತ್ತೆ.
ಇನ್ನು ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳು, ಹಲವು ಅವಧಿಗಳಲ್ಲಿ ಸಹ, ಐತಿಹಾಸಿಕವಾಗಿ 11-13% ವ್ಯಾಪ್ತಿಯಲ್ಲಿ ಸರಾಸರಿ ಆದಾಯವನ್ನು ನೀಡಿವೆ. ಕೆಲವು ವರ್ಷಗಳಲ್ಲಿ ಮಾರುಕಟ್ಟೆ ಏರಿಳಿತಗಳಿಂದ, ಒಂದೂವರೆ ದಶಕಗಳ ಕಾಲ ನಿರಂತರವಾಗಿ 15% ಆದಾಯವನ್ನು ಉಳಿಸಿಕೊಳ್ಳುವುದು ವಿರಳ.
ಒಂದು ವೇಳೆ ಆದಾಯವು 15% ಬದಲಿಗೆ 12% ಆಸುಪಾಸಿನಲ್ಲಿದ್ದರೆ, ಅಂತಿಮ ನಿಧಿಯು ಸುಮಾರು 75 ಲಕ್ಷ ರೂಪಾಯಿಗಳಿಗೆ ಇಳಿಯುತ್ತದೆ. ಆದರೆ ಉಳಿದ 25 ಲಕ್ಷ ರೂಪಾಯಿ ಸಿಗಲಿಲ್ಲವೆಂದು ಬೇಸರ ಮಾಡಿಕೊಳ್ಳುವ ಬದಲಿಗೆ, ಬಂದ ಆದಾಯದಲ್ಲಿ ಖುಷಿ ಪಡೋದು ಮುಖ್ಯ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

SEBI: ಹೂಡಿಕೆದಾರರ ಸುರಕ್ಷತೆಗೆ ಸೆಬಿ ಹೊಸ ಲಾಕ್ ಸೌಲಭ್ಯ…ಮ್ಯೂಚುವಲ್ ಫಂಡ್ ಹಿಂಪಡೆಯುವಿಕೆ ತಡೆಯಿರಿ!

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications