ಇಂದು ಅಕ್ಟೋಬರ್ ತಿಂಗಳ ಮೊದಲ ದಿನವಾಗಿದೆ. ಚಿನ್ನದ ವ್ಯಾಪಾರದ ಈ ತಿಂಗಳ ದರ ಬೆಳವಣಿಗೆಯೂ ಈ ದಿನದ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರು ಈ ದಿನದ ಚಿನ್ನದ ಬೆಲೆಯ ಮೇಲೆ ಗಮನ ಹರಿಸಿದ್ದಾರೆ. ಆಗಸ್ಟ್‌ನಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು ಅಧಿಕವಾಗಿದೆ. ಆದರೆ ಅದಕ್ಕೂ ಅಧಿಕ ಬಾರಿ ಇಳಿಕೆಯನ್ನು ಕಂಡಿದೆ. ಜುಲೈನಲ್ಲಿ ಚಿನ್ನದ ಬೆಲೆ ಬದಲಾವಣೆ ದರವು ಶೇಕಡ 2.58 ಇತ್ತು. ಆಗಸ್ಟ್ ಆಗುವಷ್ಟರದಲ್ಲಿ ದರವು ಶೇಕಡ 2.11 ಆಗಿದೆ. ಸೆಪ್ಟೆಂಬರ್‌ನಲ್ಲಿ ಶೇಕಡ 4.08 ಆಗಿದೆ.
2021 ರ ಮಾರ್ಚ್‌ನಿಂದ ನೋಡಿದಾಗ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು ಭಾರೀ ಇಳಿಕೆ ಕಂಡಿದೆ. ಅದಾಗಲೇ ಚಿನ್ನದ ಬೆಲೆಯು ಭಾರತದಲ್ಲಿ ಈ ವರ್ಷ ಅತೀ ಕಡಿಮೆಗೆ ಇಳಿದಿದೆ. ಇದೇ ರೀತಿಯಾಗಿ ಚಿನ್ನದ ಬೆಲೆಯು ಇಳಿಕೆಯಾದರೆ, ಹೂಡಿಕೆದಾದರಿಗೆ ಇದು ಭೀತಿಯನ್ನು ಸೃಷ್ಟಿ ಮಾಡಲಿದೆ. ಆದರೆ ಕಳೆದ ಸಂಜೆಯಿಂದ ಪರಿಸ್ಥಿತಿಯು ಕೊಂಚ ಬದಲಾವಣೆ ಆಗಿದೆ.
ಚಿನ್ನ ಹಾಗೂ ಸ್ಪಾಟ್ ಗೋಲ್ಡ್ ಬೆಲೆಯು ನಿನ್ನೆ ಸರಿಸುಮಾರು ಔನ್ಸ್‌ಗೆ 1722 ಡಾಲರ್ ಹಾಗೂ ಔನ್ಸ್‌ಗೆ 1735 ಡಾಲರ್ ಆಗಿದೆ. ಆದರೆ ಸಂಜೆಯ ಹೊತ್ತಿಗೆ ಪರಿಸ್ಥಿತಿಯು ಬದಲಾಗಿದೆ. ಚಿನ್ನದ ಬೆಲೆಯು ಅಧಿಕವಾಗಲು ಆರಂಭವಾಯಿತು. ಮತ್ತೆ ಔನ್ಸ್‌ಗೆ 1755 ಡಾಲರ್ ಅನ್ನು ದಾಟಿದೆ. ದೇಶದ ಉದ್ಯೋಗ ಸನ್ನಿವೇಶದ ಬಗ್ಗೆ ಯುಎಸ್ ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪೊವೆಲ್ ನೀಡಿದ ಒಂದು ಸುಳಿವು ಈ ಹಠಾತ್ ಬದಲಾವಣೆಯ ಹಿಂದಿನ ಕಾರಣವಾಗಿದೆ.
ಅಕ್ಟೋಬರ್ ಚಿನ್ನದ ದರದ ಮೇಲಿನ ನಿರೀಕ್ಷೆ
ನಿನ್ನೆ ಸಂಜೆಯಲ್ಲಿ ಇದ್ದ ಸ್ಥಿತಿಯಂತೆ ಚಿನ್ನದ ಬೆಲೆಯು ಅಕ್ಟೋಬರ್ ತಿಂಗಳಿನಲ್ಲಿ ಇದ್ದರೆ ಹೂಡಿಕೆದಾರರಿಗೆ ಕೊಂಚ ರಿಲೀಫ್ ದೊರೆಯಲಿದೆ. ಚಿನ್ನದ ಬೆಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಔನ್ಸ್‌ಗೆ 1755 ಡಾಲರ್‌ನಿಂದ ಔನ್ಸ್‌ಗೆ 1765 ಡಾಲರ್ ಅಥವಾ ಅದಕ್ಕಿಂತ ಅಧಿಕ ಇರಲಿದೆ. ಆದರೆ ಚಿನ್ನದ ಬೆಲೆಯು ಮತ್ತೆ ಇಳಿಕೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಯು ಔನ್ಸ್‌ಗೆ 1725 ಡಾಲರ್‌ರಿಂದ 1700 ಡಾಲರ್‌ವರೆಗೆ ಇರಲಿದೆ. ಇನ್ನು ಈಗ ಭಾರತದಲ್ಲಿ ಹಬ್ಬಗಳ ಸೀಸನ್ ಆಗಿದೆ. ಆದ್ದರಿಂದ ಚಿನ್ನದ ಬೆಲೆಯು ಅಧಿಕವಾಗುವ ನಿರೀಕ್ಷೆಯಿದೆ. ಆದರೆ ಚಿನ್ನದ ಬೆಲೆಯು ಡಾಲರ್ ಮೇಲೆ ಅವಲಂಭಿತವಾಗಿರುವ ಕಾರಣದಿಂದಾಗಿ ಅಮೆರಿಕದಲ್ಲಿ ಯಾವುದೇ ಆರ್ಥಿಕ ಬದಲಾವಣೆಯಾದರೂ ಚಿನ್ನದ ಬೆಲಯ ಮೇಲೆ ಪ್ರಭಾವ ಬೀರಲಿದೆ.
ಅಕ್ಟೋಬರ್ ಚಿನ್ನದ ಬೆಲೆ ಎರಡು ಅಂಶಗಳ ಮೇಲೆ ಆಧಾರಿತ
ಅಕ್ಟೋಬರ್ ಚಿನ್ನದ ಬೆಲೆಯು ಎರಡು ಅಂಶಗಳ ಮೇಲೆ ಆಧಾರಿತವಾಗಿರುವ ಸಾಧ್ಯತೆ ಇದೆ. ಹಣದುಬ್ಬರದ ಸಂದರ್ಭ ಯುಎಸ್ ವೈಯಕ್ತಿಕ ಬಳಕೆ ವೆಚ್ಚ (ಪಿಸಿಇ) ಸೂಚ್ಯಂಕ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸಲಾಗುವ ಆಗಸ್ಟ್ ಕೃಷಿಯೇತರ ವೇತನದಾರರ ಡೇಟಾದ ಮೇಲೆ ಚಿನ್ನದ ಬೆಲೆಯು ಆಧಾರಿತವಾಗಿರಲಿದೆ. ಉದ್ಯೋಗ ಡೇಟಾದಲ್ಲಿ ಯಾವುದೇ ಪಾಸಿಟಿವ್ ಅಂಶ ಹಾಗೂ ಯುಎಸ್ ಹಣದುಬ್ಬರವು ಮಾತ್ರ ಚಿನ್ನದ ಬೆಲೆಯು ಮತ್ತಷ್ಟು ಇಳಿಕೆಯಾಗುವಂತೆ ಮಾಡಲಿದೆ. ಅದನ್ನು ಹೊರತುಪಡಿಸಿದರೆ, ಚಿನ್ನದ ಬೆಲೆಯು ಮತ್ತಷ್ಟು ಅಧಿಕವಾಗುವ ಎಲ್ಲಾ ಸಾಧ್ಯತೆಗಳು ಇದೆ. ಇನ್ನು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸಲಾಗುವ ದತ್ತಾಂಶದ ಬಗ್ಗೆ ಫೆಡರಲ್ ರಿಸರ್ವ್, ದೇಶದ ಕೇಂದ್ರ ಬ್ಯಾಂಕ್ ಅತೃಪ್ತಿ ಹೊಂದಿದ್ದರೆ, ಶೀಘ್ರದಲ್ಲೇ ವಿತ್ತೀಯ ನೀತಿಯನ್ನು ಬಿಗಿಗೊಳಿಸದಿದ್ದರೆ, ಚಿನ್ನದ ದರಗಳು ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ.
ಯುಎಸ್ ಉದ್ಯೋಗವೂ ಕೂಡಾ ಚಿನ್ನದ ಬೆಲೆಯ ಮೇಲೆ ಪ್ರಭಾವಿತ
ಜುಲೈನಲ್ಲಿ ಪ್ರಕಟವಾದ ಉದ್ಯೋಗದ ಡೇಟಾವು ಆಶಾವಾದಿ ಆಗಿದ್ದ ಕಾರಣ ಚಿನ್ನದ ಬೆಲೆಯು ಆಗಸ್ಟ್ ಮೊದಲ ವಾರದಲ್ಲಿ ಪ್ರಮುಖ ಸವಾಲನ್ನು ಎದುರಿಸಿತು. ಉದ್ಯೋಗದ ಡೇಟಾವು ನಿರೀಕ್ಷೆಗಿಂತಲೂ ಮುಂಚಿತವಾಗಿ ವೇಗವಾಗಿ ಚೇತರಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಟ್ರೆಂಡ್ ಸೆಪ್ಟೆಂಬರ್‌ನಲ್ಲೂ ಮುಂದುವರಿದಿದೆ. ಬಡ್ಡಿದರದ ಏರಿಕೆಯನ್ನು ಬೆಂಬಲಿಸಲು ಕೇಂದ್ರೀಯ ಬ್ಯಾಂಕಿಗೆ ಖಂಡಿತವಾಗಿಯೂ ಭರವಸೆಯ ಉದ್ಯೋಗದ ದತ್ತಾಂಶದ ಅಗತ್ಯವಿರುತ್ತದೆ. ಅದನ್ನು ಈಗಲೇ ನಿರೀಕ್ಷಿಸಲಾಗುವುದಿಲ್ಲ. ಆಗಸ್ಟ್ ಕೃಷಿಯೇತರ ವೇತನದಾರರ ದತ್ತಾಂಶವು ಇದನ್ನು ದೃಢಪಡಿಸಬಹುದು. ಯಾವುದೇ ದುರದೃಷ್ಟಕರ ಸ್ಥಿತಿಯಲ್ಲಿ ಈ ದತ್ತಾಂಶವು ಇದ್ದರೆ ಮಾತ್ರ ಚಿನ್ನದ ಬೆಲೆಯು ನಿಧಾನವಾಗಿ ಅಧಿಕವಾಗಲಿದೆ.
ಯುಎಸ್‌ನ ಹಣದುಬ್ಬರ ಸೂಚ್ಯಂಕ
ಸದ್ಯಕ್ಕೆ ಚಿನ್ನದ ಬೆಲೆ ಏರಿಕೆ ಹಾಗೂ ಇಳಿಕೆ ಎರಡನ್ನೂ ನಿರೀಕ್ಷೆ ಮಾಡಲಾಗಿದೆ. ಅಕ್ಟೋಬರ್‌ನ ಚಿನ್ನದ ಬೆಲೆಯು ಯುಎಸ್ ವೈಯಕ್ತಿಕ ಬಳಕೆ ವೆಚ್ಚ (ಪಿಸಿಇ) ಸೂಚ್ಯಂಕ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸಲಾಗುವ ಆಗಸ್ಟ್ ಕೃಷಿಯೇತರ ವೇತನದಾರರ ಡೇಟಾದ ಮೇಲೆ ಆಧಾರಿತವಾಗಿರುತ್ತದೆ. ಹಣದುಬ್ಬರ ಸೂಚ್ಯಂಕದ ಮೇಲೆಯೂ ಆಧಾರಿಸಿದೆ. "ನಾವು ಹಣದುಬ್ಬರ ಹಾಗೂ ಉದ್ಯೋಗ ಎರಡನ್ನೂ ಸರಿಯಾಗಿ ಸಮತೋಲನದಲ್ಲಿ ಇಡಬೇಕಾಗುತ್ತದೆ. ಹಣದುಬ್ಬರವು ಕಡಿಮೆ ಆಗಲಿದೆ ಎಂಬುವುದು ನಮ್ಮ ನಿರೀಕ್ಷೆಯಾಗಿದೆ. ಅದರಿಂದಾಗಿ ನಾವು ಉದ್ಯೋಗ ಹಾಗೂ ಹಣದುಬ್ಬರ ಎರಡರ ಬಗ್ಗೆಯೂ ಚಿಂತೆ ಮಾಡಬೇಕಾಗಿ ಬರುವುದಿಲ್ಲ," ಎಂದು ಪೋವೆಲ್ ಹೇಳಿದೆ. ಹಣದುಬ್ಬರ ಅಧಿಕವಾದರೆ ಕೇಂದ್ರ ಬ್ಯಾಂಕು ಬಡ್ಡಿದರವನ್ನು ಅಧಿಕ ಮಾಡಲಿದೆ. ಆದರೆ ದುರ್ಬಲವಾದ ಉದ್ಯೋಗ ಪರಿಸ್ಥಿತಿಯು ಇದಕ್ಕೆ ತಡೆಗೋಡೆಯಾಗಲಿದೆ. ಆದ್ದರಿಂದ ಈ ಉದ್ಯೋಗದ ಡೇಟಾವು ಚಿನ್ನದ ದರದ ಮೇಲೆ ಪ್ರಭಾವ ಬೀರಲಿದೆ. ಅಮೆರಿಕದಲ್ಲಿ ಚಿನ್ನದ ಬೆಲೆಗೆ ಉದ್ಯೋಗ, ಹಣದುಬ್ಬರ ಪ್ರಭಾವ ಬೀರಿದರೆ, ಭಾರತದಲ್ಲೂ ಚಿನ್ನದ ಬೆಲೆಯ ಮೇಲೆ ಪರಿಣಾಮವಾಗಲಿದೆ. ಸಾಮಾನ್ಯ ಭಾರತೀಯ ಚಿನ್ನದ ಬೆಲೆಯು ಇಳಿಕೆ ಆಗುವುದು ಉತ್ತಮ ಎನಿಸುತ್ತದೆ. ಅದರಿಂದಾಗಿ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿ ಮಾಡಬಹುದು ಎಂದು ಅನಿಸುತ್ತದೆ. ಆದರೆ ಇದು ಹೂಡಿಕೆದಾರರಿಗೆ ತದ್ವಿರುದ್ಧವಾಗಿ ಪರಿಣಾಮ ಬೀರಲಿದೆ. ಭಾರತಕ್ಕೆ ಚಿನ್ನವನ್ನು ವಿದೇಶದಿಂದ ಆಮದು ಮಾಡಲಾಗುತ್ತದೆ. ಆದ್ದರಿಂದ ವಿದೇಶದಲ್ಲಿ ಚಿನ್ನದ ಬೆಲೆಯು ಅಧಿಕವಾದರೆ, ಇಳಿಕೆಯಾದರೆ ಭಾರತದಲ್ಲಿಯೂ ಅದರ ಪರಿಣಾಮ ಉಂಟಾಗುತ್ತದೆ. ವಿದೇಶದಲ್ಲಿ ಚಿನ್ನದ ಬೆಲೆಯು ಅಧಿಕವಾದರೆ ಭಾರತದಲ್ಲಿಯೂ ಚಿನ್ನದ ಬೆಲೆಯು ಈ ಹಬ್ಬದ ಸೀಸನ್‌ನಲ್ಲಿ ಅಧಿಕವಾಗಲಿದೆ.


Click it and Unblock the Notifications