ಬೆಂಗಳೂರು, ಫೆಬ್ರವರಿ 6: ಭಾರತದಲ್ಲಿ ಇಂದು ಹಲವಾರು ಉದ್ಯಮಿಗಳಿದ್ದಾರೆ. ಅವರೆಲ್ಲರೂ ಉನ್ನತ ವ್ಯಾಸಂಗ ಮಾಡಿದವರಲ್ಲ, ಅನೇಕರು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ, ವ್ಯವಹಾರಕ್ಕಿಳಿದು ಉದ್ಯಮಿಗಳಾದವರಿದ್ದಾರೆ. ಇನ್ನು ಕೆಲವರು ತರಬೇತಿ ಪಡೆದು ವ್ಯಾಪಾರ ಆರಂಭಿಸುತ್ತಾರೆ. ಇಂತಹ ಉದ್ದಿಮೆಗಳು ಮತ್ತಷ್ಟು ಬೆಳೆಯಲು, ಕೆಲವೊಮ್ಮೆ ಖ್ಯಾತನಾಮರು ಹೂಡಿಕೆ ಮೂಲಕ ಬೆಂಬಲಿಸುತ್ತಾರೆ.
ಹೀಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದೆ, ವ್ಯವಹಾರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ವ್ಯಕ್ತಿಗಳ ಪೈಕಿ ರಾಕೇಶ್ ಚೋಪ್ದಾರ್ ಕೂಡಾ ಒಬ್ಬರು. ಇವರು ಇಂದು ಆಜಾದ್ ಇಂಜಿನಿಯರಿಂಗ್ ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ.

ಹೈದರ್ ಬಾದ್ ಮೂಲದ ಆಜಾದ್ ಇಂಜಿನಿಯರಿಂಗ್ ಸಂಸ್ಥೆ 2023ರ ಡಿಸೆಂಬರ್ ನಲ್ಲಿ ತನ್ನ ಸಾರ್ವಜನಿಕ ಷೇರು ಬಿಡುಗಡೆ (IPO )ಯನ್ನು ಮಾಡಿತು. ಈ ಸಂಸ್ಥೆ ಕ್ರಿಕೆಟ್ ದಂತ ಕಥೆ, ಭಾರತೀಯ ಕ್ರಿಕೆಟ್ ನ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನೂ ಅನೇಕ ಖ್ಯಾತನಾಮರಿಂದ ಬೆಂಬಲಿತವಾಗಿದೆ. ಆಜಾದ್ ಇಂಜಿನಿಯರಿಂಗ್ ಕಂಪನಿಯೂ ಟರ್ಬೈನ್‌ಗಳು ಮತ್ತು ವಿಮಾನದ ಬಿಡಿಭಾಗಗಳ ಉತ್ಪಾದನೆ ಮಾಡುತ್ತಿದ್ದು, ಇಂದು ಇದರ ಮಾರುಕಟ್ಟೆ ಕ್ಯಾಪ್ ಸುಮಾರು 5499 ಕೋಟಿ ರೂ. ಆಗಿದೆ.
ಚೋಪ್ದಾರ್ ಅವರು 2008 ರಲ್ಲಿ ಕಂಪನಿಯ ಪ್ರಾರಂಭಿಸಿದ್ದು, ಆಜಾದ್ ಸಂಸ್ಥೆ ಇಂದು ಕ್ಲೀನ್ ಎನರ್ಜಿ, ಏರೋಸ್ಪೇಸ್, ಡಿಫೆನ್ಸ್, ಆಯಿಲ್ ಮತ್ತು ಗ್ಯಾಸ್ ಮತ್ತು ಎಸ್‌ಪಿಎಸ್ ಇಂಡಸ್ಟ್ರೀಸ್‌ನಲ್ಲಿ ಜಾಗತಿಕ OEM ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಪೂರೈಕೆದಾರನಾಗಿದೆ.
ಚೋಪ್ದಾರ್ ಅವರು ಹೈದರಾಬಾದ್‌ನ ಟ್ರಿನಿಟಿ ಪಬ್ಲಿಕ್ ಸ್ಕೂಲ್‌ನಿಂದ 10 ನೇ ತರಗತಿಯವರೆಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇಂಜಿನಿಯರಿಂಗ್ ಮತ್ತು ಉತ್ಪಾದನಾ ಚಟುವಟಿಕೆಗಳಲ್ಲಿ ಇವರಿಗೆ ಸುಮಾರು 15 ವರ್ಷಗಳ ಅನುಭವವಿದೆ. ವ್ಯವಹಾರ ಕಡೆಗೆ ಆಸಕ್ತಿಯು ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಅವರ 17 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ವಿವಿಧ ಸ್ಟೇನ್‌ಲೆಸ್-ಸ್ಟೀಲ್ ವಸ್ತುಗಳೊಂದಿಗೆ ಕ್ರಿಟಿಕಲ್ ಕಾಂಪೊನೆಂಟ್ಸ್ ಗಳನ್ನು ಉತ್ಪಾದಿಸುವ ಅನುಭವವನ್ನು ಚೋಪ್ಡರ್ ಪಡೆದರು.
ಪ್ರಪಂಚದಾದ್ಯಂತದ ಹಲವಾರು ಕಂಪನಿಗಳಿಗೆ,ಎಂಜಿನಿಯರ್‌ಗಳಿಗೆ ಉತ್ಪಾದನೆ ಕಷ್ಟವೆಂದು ಕಂಡುಬರುವ ಪ್ರಮುಖ ಬಿಡಿಭಾಗಗಳನ್ನು(critical components) ಉತ್ಪಾದನೆ ಮಾಡುವ ಕೆಲಸಗಳನ್ನು ರಾಕೇಶ್ ಚೋಪ್ದಾರ್ ಆನಂದಿಸುತ್ತಾರೆ. "ದೊಡ್ಡ ಉದ್ದೇಶವನ್ನು ಪೂರೈಸುವ ಮತ್ತು ಪ್ರಪಂಚಕ್ಕೆ ಬೃಹತ್ ಕೊಡುಗೆ ನೀಡಲು, ಏನನ್ನಾದರೂ ರಚಿಸುವ ಉತ್ಪಾದಿಸುವ ಪ್ರಕ್ರಿಯೆಯು ನನ್ನ ಉತ್ಸಾಹವಾಗಿದೆ"ಅನ್ನುತ್ತಾರೆ ಚೋಪ್ದಾರ್.
ಅವರಲ್ಲಿರುವ ಕೆಲವು ಅಂತರ್ನಿರ್ಮಿತ ಕೌಶಲ್ಯಗಳ ಜೊತೆಗೆ ಹಾಗೂ ಅವರ ಅನುಭವದೊಂದಿಗೆ, ಚೋಪ್ದಾರ್ ಅನಿಲ, ಉಗಿ ಮತ್ತು ಏರೋ ಎಂಜಿನ್‌ಗಳಿಗಾಗಿ ಹೆಚ್ಚು ವಿನ್ಯಾಸಗೊಳಿಸಿದ ಸಂಕೀರ್ಣ ತಿರುಗುವ ಮತ್ತು ಸ್ಥಾಯಿ ಭಾಗಗಳನ್ನು ತೆಗೆದುಕೊಂಡರು. ಹೈಲೀ ಇಂಜಿನಿಯರ್ ಅಗತ್ಯವಿರುವಂತಹ ಗ್ಯಾಸ್, ಸ್ಟೀಮ್ ಮತ್ತು ಏರೋ ಎಂಜಿನ್‌ಗಳಿಗೆ , ತಿರುಗುವ, ಸಂಕೀರ್ಣವಾದ ಬಿಡಿಭಾಗ(complex rotating and stationary )ಗಳನ್ನು ಉತ್ಪಾದಿಸುತ್ತಾರೆ.
ಹೈದರಾಬಾದ್ ಮೂಲದ ಆಜಾದ್ ಸಂಸ್ಥೆ, ಕ್ಲೀನ್ ಎನರ್ಜಿ, ಏರೋಸ್ಪೇಸ್, ಡಿಫೆನ್ಸ್, ಆಯಿಲ್ ಮತ್ತು ಗ್ಯಾಸ್ , ಎಸ್‌ಪಿಎಸ್ ಇಂಡಸ್ಟ್ರೀಸ್‌ನಲ್ಲಿ ಜಾಗತಿಕ OEM ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಪೂರೈಕೆದಾರನಾಗಿದೆ.
ಭಾರತದಲ್ಲಿ ಸಂಕೀರ್ಣ ರಕ್ಷಣಾ ಏರೋ-ಎಂಜಿನ್ ಘಟಕಗಳನ್ನು ತಯಾರಿಸಲು ಇತ್ತೀಚೆಗೆ ಆಜಾದ್ ಇಂಜಿನಿಯರಿಂಗ್ ಸಂಸ್ಥೆಯೂ ರೋಲ್ಸ್ ರಾಯ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದು ಪವರ್ ಮತ್ತು ಪ್ರೊಪಲ್ಷನ್ ಪರಿಹಾರಗಳನ್ನು ಒದಗಿಸುತ್ತಿದೆ. ಈ ದೀರ್ಘಾವಧಿಯ ಒಪ್ಪಂದದ ಅಡಿಯಲ್ಲಿ, ಹೈದರಾಬಾದ್ ಮೂಲದ ಸಂಸ್ಥೆಅಜಾದ್, ರಕ್ಷಣಾ ವಿಮಾನ ಎಂಜಿನ್‌ಗಳಿಗೆ ಸಂಕೀರ್ಣ ಘಟಕಗಳನ್ನು ತಯಾರಿಸಿ ಪೂರೈಸುತ್ತದೆ. ಇನ್ನು ರೋಲ್ಸ್ ರಾಯ್ಸ್‌ನ ತಾಂತ್ರಿಕವಾಗಿ ಸುಧಾರಿತ ಏರೋ ಎಂಜಿನ್‌ಗಳಿಗಾಗಿ ಸಂಕೀರ್ಣ ಬಿಡಿಭಾಗಗಳ ಜಾಗತಿಕ ಪೂರೈಕೆ ಮಾಡಲಿದೆ.


Click it and Unblock the Notifications