ಈಗಿನ ಯುವ ಸಮುದಾಯ ಬಹುತೇಕ ಹೂಡಿಕೆ ಪ್ಲಾನ್‌ಗಳನ್ನು ಹೆಚ್ಚಾಗಿ ನೋಡುತ್ತಿರುತ್ತಾರೆ. ಚಿನ್ನ, ಮ್ಯೂಚುವಲ್ ಫಂಡ್, ಎಫ್‌ಡಿ, ಬ್ಯಾಂಕ್, ಪೋಸ್ಟ್ ಆಫೀಸ್ ಹೀಗೆ ಅನೇಕ ಸ್ಕೀಮ್‌ಗಳಲ್ಲಿ ತಾವು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡಿಟ್ಟುಕೊಳ್ಳುತ್ತಾರೆ. ಇನ್ನು ಸರ್ಕಾರಗಳು ಕೂಡಾ ಹೂಡಿಕೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗಾಗಿ ಸರ್ಕಾರ, ಬ್ಯಾಂಕ್‌ಗಳಲ್ಲಿ ಅನೇಕ ಸ್ಕೀಮ್‌ಗಳಿವೆ.

ಹಾಗಿದ್ರೆ ಮಹಿಳೆಯರು ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಗ್ಯಾರಂಟಿ ಲಾಭ ಪಡೆಯಬಹುದು ಗೊತ್ತಾ? ಇಲ್ಲಿದೆ ನೋಡಿ ಮಹಿಳೆಯರಿಗಾಗಿ ಇರುವ ಟಾಪ್ ಹೂಡಿಕೆ ಸ್ಕೀಮ್‌ಗಳು.
1. ಸುಕನ್ಯಾ ಸಮೃದ್ಧಿ ಯೋಜನೆ (SSY):
ಹೆಣ್ಣುಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಆರಂಭಿಸಿದ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡಾ ಒಂದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭಿಸಬಹುದು. ಇನ್ನು ಈ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಶೇ 8.2ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಹೂಡಿಕೆದಾರರು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನೂ ಪಡೆಯುತ್ತಾರೆ. ಹೆಣ್ಣುಮಕ್ಕಳ ಶಿಕ್ಷಣ, ಮದುವೆ, ಆರ್ಥಿಕ ಸುರಕ್ಷತೆಗಾಗಿ ಈ ಯೋಜನೆ ಬೆಸ್ಟ್.
2. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ:
ಮಹಿಳೆಯರಿಗಾಗಿ ಆರಂಭಿಸಲಾದ ಯೋಜನೆಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಸ್ಕೀಮ್ ಕೂಡಾ ಒಂದು. ಇಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಇನ್ನು ಈ ಯೋಜನೆಯನ್ನು ಅಂಚೆ ಕಚೇರಿ ಮೂಲಕ ತೆರೆಯಬಹುದು. ನೀವು ಹೂಡಿಕೆ ಮಾಡಿದ ಹಣಕ್ಕೆ ಈ ಯೋಜನೆಯಲ್ಲಿ ಶೇ 7.5%ರಷ್ಟು ಆದಾಯ ಸಿಗುತ್ತದೆ. ಅಲ್ಲದೇ ಕನಿಷ್ಠ ₹1,000 ರಿಂದ, ಗರಿಷ್ಠ ₹2 ಲಕ್ಷದವರೆಗೆ ಈ ಯೋಜನೆ ಮೂಲಕ ಹೂಡಿಕೆ ಮಾಡಬಹುದು. ಅಲ್ಲದೇ ನೀವು ಹೂಡಿಕೆ ಆರಂಭಿಸಿ ಒಂದು ವರ್ಷ ಪೂರ್ಣವಾದ ನಂತರ ಶೇ.40% ಹಣ ಹಿಂಪಡೆಯಬಹುದು. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಹೂಡಿಕೆ ಮಾಡಬಹುದು. ಅವಧಿ 2 ವರ್ಷಗಳು.
3. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC):
ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡಿದ್ರ ಖಂಡಿತ ಬಡ್ಡಿದರ ಸಿಗುತ್ತದೆ. ಐದರಿಂದ ಹತ್ತು ವರ್ಷದ ಅವಧಿಯಲ್ಲಿ ಹೂಡಿಕೆ ಮೊತ್ತ ಇಟ್ಟರೆ, ಉತ್ತಮ ಮೆಚ್ಯುರಿಟಿ ಹಣ ಪಡೆಯಬಹುದು. ಇನ್ನು ಈ ಯೋಜನೆ ದೀರ್ಘಾವಧಿಗೆ ಬೆಸ್ಟ್ ಮತ್ತು ಸ್ಥಿರ ಆದಾಯವನ್ನು ನೀಡೋದು ಪಕ್ಕಾ. ಈ ಯೋಜನೆ ಮೂಲಕ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದಾಗಿದ್ದು, ಹೆಚ್ಚು ಲಾಭದಾಯಕ ಹೂಡಿಕೆ ಯೋಜನೆಯಾಗಿದೆ.
4. ಸುಭದ್ರಾ ಯೋಜನೆ:
ಈ ಯೋಜನೆ ಸದ್ಯ ಕರ್ನಾಟಕದಲ್ಲಿ ಲಭ್ಯವಿಲ್ಲ. ಒಡಿಶಾ ಸರ್ಕಾರ, ಅಲ್ಲಿನ ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಹೂಡಿಕೆ ಯೋಜನೆ. 21 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಮೂಲಕ ಐದು ವರ್ಷಗಳಲ್ಲಿ 50 ಸಾವಿರದವರೆಗೆ ಆರ್ಥಿಕ ಸೌಲಭ್ಯ ಒದಗಿಸಲಾಗುತ್ತದೆ.
5. ಹಿರಿಯ ಮಹಿಳೆಯರಿಗೆ ಬ್ಯಾಂಕ್ ಎಫ್‌ಡಿ:
ಇನ್ನು ನಿವೃತ್ತಿ ಸಮಯದಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭಗಳಿಸುವ ಉದ್ದೇಶಕ್ಕಾಗಿ ಉತ್ತಮ ಹೂಡಿಕೆ ಯೋಜನೆ ಇದೆ. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಇಲ್ಲಿ ಹೂಡಿಕೆ ಮಾಡಬಹುದು. ಅವರಿಗಾಗಿ ಸ್ಥಿರ ಠೇವಣಿ (FD) ಸುರಕ್ಷಿತ ಆಯ್ಕೆಯಾಗಿದೆ. ಸಾಮಾನ್ಯ ದರಗಳಿಗಿಂತ ಶೇ 0.50ರಷ್ಟು ಹೆಚ್ಚಿನ ಬಡ್ಡಿದರ ಇಲ್ಲಿ ಸಿಗಲಿದೆ. ಇದರ ಜೊತೆಗೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಸುರಕ್ಷಿತ ಮತ್ತು ಉತ್ತಮ ಬಡ್ಡಿದರವನ್ನು ನೀಡುತ್ತದೆ.


Click it and Unblock the Notifications