ಭಾರತೀಯ ನಾಗರಿಕರಾದ ನಮಗೆ ಹಲವು ದಾಖಲೆಗಳು ಮುಖ್ಯವಾಗಿದ್ದು ಅವುಗಳಲ್ಲಿ ಆಧಾರ್ ಕಾರ್ಡ್, ವೀಸಾ ಕಾರ್ಡ್, ಪಾಸ್ ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಇತ್ಯಾದಿ ಅನೇಕ ವೇಳೆ ನಮಗೆ ನೋಂದಣಿಗೆ ಅಗತ್ಯವಿರುತ್ತದೆ.
ಅದರಲ್ಲೂ ಪ್ಯಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಒಂದು ಪ್ರಮುಖ ಗುರುತಿನ ಚೀಟಿ. ಇದು 10 ಅಕ್ಷರಗಳು ಮತ್ತು ಸಂಖ್ಯೆಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ. ಪ್ಯಾನ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಇತರ ವಿವರಗಳನ್ನು ಒಳಗೊಂಡಿರುತ್ತದೆ. ಯಾವುದೇ ಹಣಕಾಸಿನ ವಹಿವಾಟಿಗೆ ಪ್ಯಾನ್ ಕಾರ್ಡ್ ಅನ್ನು ಬಳಸಬಹುದು. ಬ್ಯಾಂಕ್ ಖಾತೆ ತೆರೆಯಲು, ಹೂಡಿಕೆ ಮಾಡಲು, ಆಸ್ತಿ ಖರೀದಿಸಲು ಮತ್ತು ಮಾರಾಟ ಮಾಡಲು, ಮತ್ತು ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

ಹೀಗಿರುವಾಗ ಯಾವುದೇ ಕಾರಣಕ್ಕಾಗಿ ಪ್ಯಾನ್ ಕಾರ್ಡ್ ಕಳೆದುಹೋದರೆ, ಅಥವಾ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಅದರ ಹಣಕಾಸಿನ ವಹಿವಾಟುಗಳಲ್ಲಿ ಸಮಸ್ಯೆಗಳಾಗಬಹುದು. ಒಂದು ವೇಳೆ ನೀವು ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡರೆ ಯಾವುದೇ ಕಾರಣಕ್ಕೂ ಗಾಬರಿ ಅಥವಾ ಪ್ಯಾನಿಕ್ ಆಗಬೇಕಿಲ್ಲ. ಯಾಖೆಂದರೆ ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ, ಅದನ್ನು ಮರಳಿ ಪಡೆಯಲು ಸರಿಯಾದ ಮಾರ್ಗವಿದೆ.
ನಿಮ್ಮ ಈ ಸಮಸ್ಯೆಗೆ ಪ್ರಥಮ ಪರಿಹಾರ ಅಂದ್ರೆ ಇ-ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಆನ್‌ಲೈನ್ ಮಾಧ್ಯಮವನ್ನು ಬಳಸಿಕೊಂಡು ನೀವು ಸುಲಭವಾಗಿ ಇ-ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಇ-ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನವನ್ನು ಹಂತ ಹಂತವಾದ ವಿವರಣೆ ಇಲ್ಲಿದೆ:
ಸಾಮಾನ್ಯವಾಗಿ ಇ-ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಮೂರು ಮುಖ್ಯ ವಿಧಾನಗಳಿವೆ: ಅದರಲ್ಲಿ ಮೊದಲನೆಯದು ಎನ್ಎಸ್ಡಿಎಲ್ (NSDL) ವೆಬ್‌ಸೈಟ್ ಮೂಲಕ. ಎರಡನೆಯದಾಗಿ ಯುಟಿಐಐಟಿಎಸ್ಎಲ್ (UTIITSL) ವೆಬ್‌ಸೈಟ್ ಮೂಲಕ ಡೌನ್ ಲೋಡ್ ಮಾಡಬಹುದು. ಮೂರನೆಯದಾಗಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಮೂಲಕ.
ಎನ್ಎಸ್ಡಿಎಲ್ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡುವ ವಿವರ ಇಲ್ಲಿದೆ.
- ಮೊದಲಿಗೆ, ಎನ್ಎಸ್ಡಿಎಲ್ (NSDL ವೆಬ್‌ಸೈಟ್ https://www.onlineservices.nsdl.com/paam/ ಗೆ ಭೇಟಿ ನೀಡಿ.
- "ಇ-ಪ್ಯಾನ್ ಡೌನ್‌ಲೋಡ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪ್ಯಾನ್ (PAN) ಸಂಖ್ಯೆ, ಆಧಾರ್ (Aadhaar) ಸಂಖ್ಯೆ, ಅಥವಾ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ.
- ನಂತರ ನಿಮ್ಮ ಹುಟ್ಟಿದ ದಿನಾಂಕ, ತಿಂಗಳು, ವರ್ಷವನ್ನು ನಮೂದಿಸಿ.
- ನಂತರ ಕ್ಯಾಪ್ಚಾ ನಮೂದಿಸಿ ಮತ್ತು ಸಲ್ಲಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಬರುತ್ತದೆ, ಅದನ್ನು ನಮೂದಿಸಿ.
- ಪ್ಯಾನ್ (PAN) ಕಾರ್ಡ್ ಡೌನ್‌ಲೋಡ್ ಪಿಡಿಎಫ್ (PDF) ಆಯ್ಕೆಯನ್ನು ನೀಡಲಾಗುತ್ತದೆ.
- ಇ-ಪ್ಯಾನ್ (e-PAN) ಕಾರ್ಡ್ ಪಿಡಿಎಫ್ (PDF) ಪಾಸ್‌ವರ್ಡ್‌ನಿಂದ ರಕ್ಷಿಸಲ್ಪಟ್ಟಿರುತ್ತದೆ. ಅದನ್ನು ತೆರೆಯಲು ನಿಮ್ಮ ಹುಟ್ಟಿದ ದಿನಾಂಕವನ್ನು ಪಾಸ್‌ವರ್ಡ್ ಆಗಿ ಬಳಸಿ.
ಕಳೆದುಹೋದ ಪ್ಯಾನ್ ಕಾರ್ಡ್ ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಟಿಐಎನ್-ಎನ್‌ಎಸ್‌ಡಿಎಲ್ (TIN-NSDL) ವೆಬ್‌ಸೈಟ್ ಗೆ ಭೇಟಿ ನೀಡಿ
"ಪ್ಯಾನ್ ಕಾರ್ಡ್‌ಗಾಗಿ ಆನ್‌ಲೈನ್ ಅರ್ಜಿ" ವಿಭಾಗಕ್ಕೆ ತೆರಳಿ.
ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಇಲ್ಲಿ ಕಳೆದುಹೋದ ಪ್ಯಾನ್ ಸಂಖ್ಯೆ, ಹೆಸರು, ಸಂವಹನ ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ಐಡಿ ಇತ್ಯಾದಿ ವಿವರಗಳನ್ನು ಒದಗಿ
ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಜನ್ಮ ದಿನಾಂಕದ ಪುರಾವೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
ಸ್ವೀಕೃತಿ ಸಂಖ್ಯೆಯನ್ನು ಪಡೆಯಿರಿ.


Click it and Unblock the Notifications