ಇಂದಿನ ಡಿಜಿಟಲ್ (Digital) ಯುಗದಲ್ಲಿ ಪ್ರತಿಯೊಬ್ಬರ ಪಾಕೆಟ್‌ನಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತೆ. ಡೆಬಿಟ್ ಕಾರ್ಡ್ ಬಹುತೇಕರು ಯೂಸ್ ಮಾಡಿದ್ರೆ, ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ವಿರಳ. ಇನ್ನು ಕ್ರೆಡಿಟ್ ಸ್ಕೋರ್ ಇಲ್ಲದವರಿಗೆ ಕ್ರೆಡಿಟ್ ಕಾರ್ಡ್ (Credit Card) ಪಡೆಯೋದೆ ದೊಡ್ಡ ಸಾಹಸವಾಗಿದೆ. ಸದ್ಯದ ಪರಿಸ್ಥಿರಿಯಲ್ಲಿ ಇದು ದೊಡ್ಡ ಸವಾಲಿ ಕೆಲಸವಾಗಿದ್ದು, ಅದರಲ್ಲೂ ಹೊಸದಾಗಿ ಕೆಲಸಕ್ಕೆ ಸೇರಿದವರು, ವಿದ್ಯಾರ್ಥಿಗಳು ಮತ್ತು ಗೃಹಿಣಿಯರು ಹೆಚ್ಚಾಗಿ ಸಮಸ್ಯೆಯನ್ನು ಎದುರಿಸುತ್ತಾರೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ (Secured Credit Card) ಒಂದು ಉತ್ತಮ ಆಯ್ಕೆಯಾಗಬಲ್ಲದು.

ಕೋಟಕ್ ಬ್ಯಾಂಕ್, super.money ಸಹಯೋಗದೊಂದಿಗೆ 'ಕೋಟಕ್811 3-in-1 ಅಕೌಂಟ್' ಅನ್ನು ಬಿಡುಗಡೆ ಮಾಡಿದೆ. ಕ್ರೆಡಿಟ್ ಸ್ಕೋರ್ ಇಲ್ಲದಿದ್ದರೂ ಸಹ, ಫಿಕ್ಸೆಡ್ ಡೆಪಾಸಿಟ್ (FD) ಭದ್ರತೆಯ ಆಧಾರದ ಮೇಲೆ ಈ ಕ್ರೆಡಿಟ್ ಕಾರ್ಡ್ ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡುತ್ತದೆ. ಹಾಗಿದ್ರೆ ಕೋಟಕ್ ಬ್ಯಾಂಕ್ ಬಿಡುಗಡೆ ಮಾಡಿರುವ ಈ ಕ್ರೆಡಿಟ್ ಕಾರ್ಡ್‌ನ ಫೀಚರ್ಸ್, ಪ್ರಯೋಜನಗಳು ಮತ್ತು ಇದು ಯಾರಿಗೆ ಬೆಸ್ಟ್? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಕೋಟಕ್811 3-in-1 ಅಕೌಂಟ್:
Kotak811 super.money ಕ್ರೆಡಿಟ್ ಕಾರ್ಡ್, ಕೋಟಕ್ ಬ್ಯಾಂಕ್ ಮತ್ತು ಸೂಪರ್.ಮನಿ ಒಟ್ಟಾಗಿ ಜಾರಿಗೆ ತಂದ ಸಿಸ್ಟಮ್ ಆಗಿದೆ. ಇದು ಕೋಟಕ್811 3-ಇನ್-1 ಅಕೌಂಟ್‌ನ ಒಂದು ಭಾಗವಾಗಿದ್ದು, ಸೇವಿಂಗ್ಸ್, ಖರ್ಚು ಮತ್ತು ಗಳಿಕೆಯನ್ನು ಒಂದೇ ಪ್ಲಾಟ್‌ಫಾರ್ಮ್ ಮೂಲಕ ಸಂಪಾದಿಸಬಹುದು.
ಕೋಟಕ್811 3 in 1 ಪ್ರಯೋಜನಗಳು:
- ಹಣ ಉಳಿತಾಯಕ್ಕಾಗಿ ಝೀರೋ-ಬ್ಯಾಲೆನ್ಸ್ ಸೇವಿಂಗ್ಸ್ ಅಕೌಂಟ್.
- ಬಡ್ಡಿಯಿಂದ ಹಣ ಸಂಪಾದಿಸಲು ಫಿಕ್ಸೆಡ್ ಡೆಪಾಸಿಟ್ ಆಯ್ಕೆ.
- FD ಮೂಲಕ ಸುರಕ್ಷಿತಗೊಳಿಸಿದ ಕ್ರೆಡಿಟ್ ಕಾರ್ಡ್ (Kotak811 super.money credit card) - ಸ್ಮಾರ್ಟ್ ಆಗಿ ಖರ್ಚು ಮಾಡಲು ಮತ್ತು ಕ್ರೆಡಿಟ್ ಸ್ಕೋರ್ ಬ್ಯಾಲೆನ್ಸ್ ಮಾಡಲು ಬೆಸ್ಟ್.
- ಕ್ರೆಡಿಟ್ ಕಾರ್ಡ್‌ನ ಕ್ರೆಡಿಟ್ ಮಿತಿ, ಫಿಕ್ಸೆಡ್ ಡೆಪಾಸಿಟ್ ಮೊತ್ತದ 90% ಆಗಿರುತ್ತದೆ. ಕನಿಷ್ಠ ₹1,000 ಇಟ್ಟು FD ತೆರೆಯಬಹುದು. ಉದಾಹರಣೆಗೆ, ನೀವು ₹20,000 FD ತೆರೆದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ₹18,000 ಆಗಿರುತ್ತದೆ ( ಇದರರ್ಥ FD ಮೊತ್ತದ 90%).
ಕ್ರೆಡಿಟ್ ಕಾರ್ಡ್‌ನ ಲಕ್ಷಣಗಳು ಮತ್ತು ಪ್ರಯೋಜನಗಳು:
ಲೈಫ್‌ಟೈಮ್ ಫ್ರೀ: FD ಮೊತ್ತ ₹5,000 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಈ ಕಾರ್ಡ್ ಲೈಫ್‌ಟೈಮ್ ಫ್ರೀ ಆಯ್ಕೆಯನ್ನು ನೀಡುತ್ತದೆ. FD ಮೊತ್ತ ₹5,000 ಕ್ಕಿಂತ ಕಡಿಮೆಯಿದ್ದರೆ ಮತ್ತು ಗ್ರಾಹಕರು ಸಪರೇಟ್ ಕಾರ್ಡ್ ಆಯ್ಕೆಮಾಡಿದರೆ, 249 ರೂ + GST ಜಾಯಿನ್ ಫೀಸ್ ಪೇ ಮಾಡಬೇಕಾಗುತ್ತದೆ.
ಫ್ಲಿಪ್‌ಕಾರ್ಟ್‌ನಿಂದ ಕ್ಯಾಶ್‌ಬ್ಯಾಕ್: ಕಾರ್ಡ್‌ದಾರರು ಫ್ಲಿಪ್‌ಕಾರ್ಟ್‌ನಂತಹ ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಳ್ಲಿ (UPI ಅಲ್ಲದ ಪೇಮೆಂಟ್‌ಗಳಿಗೆ) ಖರ್ಚು ಮಾಡಿದಾಗ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಅದರಲ್ಲೂ ಮಿಂತ್ರಾದಲ್ಲಿ 5% ಕ್ಯಾಶ್‌ಬ್ಯಾಕ್, ಕ್ಲಿಯರ್ ಟ್ರಿಪ್‌ನಲ್ಲಿ 3% ಕ್ಯಾಶ್‌ಬ್ಯಾಕ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 2% ಕ್ಯಾಶ್‌ಬ್ಯಾಕ್ ಸಿಗುತ್ತದೆ.
ಒಬ್ಬ ಕಾರ್ಡ್‌ದಾರರು ಪ್ರತಿ ಪೇಮೆಂಟ್‌ನಲ್ಲೂ ಗರಿಷ್ಠ ₹500 ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ.
UPI ಪೇಮೆಂಟ್ ಮಾಡಿದರೂ ಕ್ಯಾಶ್‌ಬ್ಯಾಕ್: Super.Money App ಮೂಲಕ ಮಾಡಿದ UPI ಪೇಮೆಂಟ್‌ಗಳಿಗೂ 1% ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಈ ಮೂಲಕ ಪ್ರತೀ ಬಾರಿ ಗರಿಷ್ಠ ₹500 ರೂ.ವರೆಗೆ ಕ್ಯಾಶ್‌ಬ್ಯಾಕ್ ಗಳಿಸಬಹುದು.
ಮೇಲೆ ತಿಳಿಸಿದ ಕ್ಯಾಶ್‌ಬ್ಯಾಕ್ ಪಡೆಯಬೇಕೆಂದರೆ ಕನಿಷ್ಠ ₹100 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ಮಾಡಬೇಕು. ಕ್ಯಾಶ್‌ಬ್ಯಾಕ್ ಸೈಕಲ್ ಪ್ರತಿ ತಿಂಗಳ 1ನೇ ತಾರೀಖಿನಿಂದ ತಿಂಗಳ ಅಂತ್ಯದ ದಿನದವರೆಗೆ ಇರುತ್ತದೆ.
ಇನ್ನು ಕಾರ್ಡ್ ಬಳಕೆದಾರರು ಸೂಪರ್.ಮನಿ ಆಪ್‌ನಲ್ಲಿ ಕ್ಯಾಶ್‌ಬ್ಯಾಕ್ ರಿಡೀಮ್ ಮಾಡುವ ಅವಕಾಶವಿದೆ. ಪ್ರತಿ ವಹಿವಾಟಿನ 35 ದಿನಗಳ ನಂತರ ಕ್ಯಾಶ್‌ಬ್ಯಾಕ್ ರಿಡೀಮ್ ಮಾಡಲು ಅನುಮತಿ ನೀಡಲಾಗುತ್ತದೆ. ಕ್ಯಾಶ್‌ಬ್ಯಾಕ್ ರಿಡೀಮ್ ಮಾಡಿದ ನಂತರ, ಕ್ಯಾಶ್‌ಬ್ಯಾಕ್ ಸೂಪರ್.ಮನಿ UPI ID ಗೆ ಲಿಂಕ್ ಆಗಿರುವ ಕಾರ್ಡ್‌ದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ?
ಗ್ರಾಹಕರು ಸೂಪರ್.ಮನಿ ಆಪ್ ಡೌನ್‌ಲೋಡ್ ಮಾಡಬೇಕು. ನಂತರ ಅಲ್ಲಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಉಳಿತಾಯ ಖಾತೆ, ಫಿಕ್ಸೆಡ್ ಡೆಪಾಸಿಟ್ ಮತ್ತು ವರ್ಚುವಲ್ ಕ್ರೆಡಿಟ್ ಕಾರ್ಡ್ ಆಪ್ ಮೂಲಕವೇ ನೀಡಲಾಗುತ್ತದೆ. ಇನ್ನು ಈ ಆಪ್ ಮೂಲಕವೇ ಅರ್ಜಿ ಪ್ರಕ್ರಿಯೆ ಮಾಡಬೇಕು. ಆದ್ದರಿಂದ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು.
ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ಬಯಸಿದರೆ, ಅದನ್ನು ಆನ್‌ಲೈನ್‌ನಲ್ಲಿ ತಕ್ಷಣವೇ ಮಾಡಬಹುದು. ಸೂಪರ್.ಮನಿ ಆಪ್‌ಗೆ ಲಾಗ್ ಇನ್ ಮಾಡಿ, ಕ್ರೆಡಿಟ್ ಕಾರ್ಡ್ ವಿಭಾಗಕ್ಕೆ ಹೋಗಿ, ನಂತರ ಫಿಕ್ಸೆಡ್ ಡೆಪಾಸಿಟ್ ವಿಭಾಗದಲ್ಲಿ 'ಇನ್ಕ್ರೀಸ್ ಕ್ರೆಡಿಟ್ ಲಿಮಿಟ್' ಆಯ್ಕೆ ಆರಿಸಿ. FD ಗೆ ಬಯಸಿದ ಮೊತ್ತವನ್ನು ಸೇರಿಸಿ. ಕಾರ್ಡ್‌ನ ಕ್ರೆಡಿಟ್ ಮಿತಿ ಹೆಚ್ಚಾಗುತ್ತದೆ (FD ಮೊತ್ತದ 90% ರಷ್ಟು).


Click it and Unblock the Notifications