Business Idea: ಜಸ್ಟ್‌ 5000 ರೂ.ನಲ್ಲಿ ಈ ವ್ಯವಹಾರ ಆರಂಭಿಸಬಹುದು! ಸರ್ಕಾರದಿಂದಲೂ ಲಾಭ, ಆದಾಯದಲ್ಲೂ ಸೂಪರ್‌

ಸ್ವಂತ ವ್ಯವಹಾರ (Own Business) ಆರಂಭಿಸಬೇಕು, ಹೆಚ್ಚಿನ ಆದಾಯ ಸಂಪಾದಿಸಬೇಕು ಎಂಬ ಕನಸು ಯಾರಿಗೆ ಇರಲ್ಲ ಹೇಳಿ. ಅದರಲ್ಲೂ ಈ ದುಬಾರಿ ದುನಿಯಾದಲ್ಲಿ ಹಣವಿದ್ದವರೇ ಜಾಣ ಎಂಬಂತಾಗಿದೆ. ಈಗಿನ ಯುವಕರಿಗೂ ಅಷ್ಟೇ ಯಾರದ್ದೂ ಕೈಕೆಳಗೆ ಹೋಗಿ ದುಡಿಯುವ ಬದಲಿಗೆ, ತನ್ನದೇ ಒಂದು ಉದ್ಯಮ ಆರಂಭಿಸಬೇಕು ಎಂಬ ಕನಸು ಇರುತ್ತೆ. ಆದರೆ ಈ ಸಂದರದಲ್ಲಿ ಹೆಚ್ಚಿನವರಿಗೆ ಸವಾಲಾಗೋದೆ ಹೂಡಿಕೆ (Investment) ಮತ್ತು ಆರಂಭಿಕ ವೆಚ್ಚಗಳು. ಅದರಲ್ಲೂ ಕೆಲವರಿಗೆ ನಷ್ಟದ ಭಯವೂ ಇರುತ್ತೆ.

ಜಸ್ಟ್‌ 5000 ರೂ.ನಲ್ಲಿ ಈ ವ್ಯವಹಾರ ಆರಂಭಿಸಬಹುದು! ಅಧಿಕ ಲಾಭ ಪಡೆಯಿರಿ

ವ್ಯವಹಾರವೊಂದು ಆರಂಭಿಸುವುದೆಂದರೆ ದೊಡ್ಡ ರಿಸ್ಕ್‌ ತೆಗೆದುಕೊಂಡ ಹಾಗೆ. ಅದೇ ಕಾರಣದಿಂದ ಅನೇಕರು ರಿಸ್ಕ್ ತೆಗೆದುಕೊಳ್ಳಲು ರೆಡಿ ಇರುವುದಿಲ್ಲ. ಅಲ್ಲದೇ ತಮ್ಮ ವ್ಯಾಪಾರದ ಕನಸನ್ನು ಕೈಬಿಡುತ್ತಾರೆ. ಆದರೆ, ನೀವು ಕಡಿಮೆ ವೆಚ್ಚದಲ್ಲಿ ಸರ್ಕಾರಿ ಸಹಕಾರ, ಸಹಯೋಗದೊಂದಿಗೆ ಬ್ಯುಸಿನೆಸ್‌ ಆರಂಭಿಸಬಹುದು. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ (PMBJK) ಅತ್ಯುತ್ತಮ ಅವಕಾಶವಾಗಿದೆ.

ಜನೌಷಧಿ ಕೇಂದ್ರ ಎಂದರೇನು?
ಕೇವಲ ₹5,000 ಅರ್ಜಿ ಶುಲ್ಕದೊಂದಿಗೆ ಈ ಜನೌಷಧಿ ಕೇಂದ್ರವನ್ನು ಆರಂಭಿಸಬಹುದು ಎಂಬುದೇ ಇದರ ಆಕರ್ಷಕ ಬಿಂದು. ದೇಶಾದ್ಯಂತ ಈಗ ಸಾವಿರಾರು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಔಷಧಗಳು ಸಾರ್ವಜನಿಕರಿಗೆ ಶೇ. 50 ರಿಂದ 90 ರಷ್ಟು ಅಗ್ಗವಾಗಿ ಸಿಗುತ್ತದೆ. ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ತಲುಪಿಸುವುದು ಈ ಕೇಂದ್ರಗಳ ಮುಖ್ಯ ಗುರಿಯಾಗಿದೆ.

ಜನೌಷಧಿ ಕೇಂದ್ರ ತೆರೆಯುವುದು ಹೇಗೆ?
ದೇಶದಲ್ಲಿ ಔಷಧಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಹೊಸ ಜನೌಷಧಿ ಕೇಂದ್ರಗಳನ್ನು ತೆರೆಯಲು ಈಗ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಈ ಕೇಂದ್ರವನ್ನು ಸ್ಥಾಪಿಸುವ ಮೂಲಕ ಉತ್ತಮ ಆದಾಯ ಗಳಿಸಬಹುದು.

  • ಜನೌಷಧಿ ಕೇಂದ್ರವನ್ನು ತೆರೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
  • ನೋಂದಣಿ ಶುಲ್ಕ ಕೇವಲ ₹5,000 ಆಗಿರುತ್ತದೆ.

ಸರ್ಕಾರದಿಂದ ಏನೆಲ್ಲಾ ಸಿಗುತ್ತದೆ?
ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸರ್ಕಾರದಿಂದ ಔಷಧಿಗಳ ಸ್ಟಾಕ್, ಅಂಗಡಿ ಸೆಟ್‌ಅಪ್ ವೆಚ್ಚ ಮತ್ತು ನಿರಂತರವಾಗಿ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಷರತ್ತುಗಳು ಅನ್ವಯ:
ಜನೌಷಧಿ ಕೇಂದ್ರ ತೆರೆಯಲು ಕೆಲವು ನಿಬಂಧನೆಗಳನ್ನು ಪಾಲಿಸಲೇಬೇಕು.
ಅರ್ಜಿದಾರರು ಕಡ್ಡಾಯವಾಗಿ ಡಿ-ಫಾರ್ಮಾ (D-Pharma) ಅಥವಾ ಬಿ-ಫಾರ್ಮಾ (B-Pharma) ಪದವಿ/ಪ್ರಮಾಣಪತ್ರವನ್ನು ಹೊಂದಿರಬೇಕು.

ಅಂಗಡಿ ನಡೆಸಲು, ಕನಿಷ್ಠ 120 ಚದರ ಅಡಿ ವಿಸ್ತೀರ್ಣದ ಸ್ಥಳಾವಕಾಶ ಲಭ್ಯವಿರಬೇಕು. ಒಂದು ವೇಳೆ ಪರವಾನಗಿ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ, ನೀವು ಅಧಿಕೃತ ಫಾರ್ಮಾಸಿಸ್ಟ್ ಅನ್ನು ನೇಮಿಸಿಕೊಳ್ಳಬಹುದು ಅಥವಾ ಪಾಲುದಾರರನ್ನಾಗಿ ಮಾಡಿಕೊಳ್ಳಬಹುದು.
ಈ ಎಲ್ಲಾ ಅಗತ್ಯತೆಗಳನ್ನು ಪೂರೈಸಿದ ನಂತರ, ಯಾವುದೇ ವ್ಯಕ್ತಿ ಈ ಜನೌಷಧಿ ಕೇಂದ್ರವನ್ನು ಪ್ರಾರಂಭಿಸಬಹುದು.

ಲಾಭ ಗಳಿಸುವುದು ಹೇಗೆ?
ಈ ವ್ಯವಹಾರದಲ್ಲಿ ಆದಾಯ ಗಳಿಸೋದಕ್ಕೆ ಹಲವಾರು ದಾರಿಗಳಿವೆ. ಔಷಧಗಳ ಮಾರಾಟದ ಮೇಲೆ ಶೇ. 20 ರಷ್ಟು ಕಮಿಷನ್ ನೇರವಾಗಿ ಸಿಗುತ್ತದೆ. ಇದರ ಜೊತೆಗೆ, ಸರ್ಕಾರವು ಪ್ರತಿ ತಿಂಗಳು ₹5 ಲಕ್ಷದವರೆಗಿನ ಮಾರಾಟದ ಮೇಲೆ ಶೇ. 15 ರಷ್ಟು ಪ್ರೋತ್ಸಾಹಧನವನ್ನು ನೀಡುತ್ತದೆ. ಇದು ಮಾಸಿಕ ಆದಾಯಕ್ಕೆ ದೊಡ್ಡ ಲಾಭವನ್ನು ನೀಡಿದಂತಾಗುತ್ತದೆ.

ಮಹಿಳಾ ಉದ್ಯಮಿಗಳು, ದಿವ್ಯಾಂಗರು ಜನೌಷಧಿ ಕೇಂದ್ರ ತೆರೆಯುವವರಿಗೆ ವಿಶೇಷ ಸೌಲಭ್ಯಗಳಿವೆ. ಅಂತಹ ವಿಶೇಷ ವರ್ಗಗಳಿಗೆ ₹2 ಲಕ್ಷ ಮರುಪಾವತಿ ರೂಪದಲ್ಲಿ ಹೆಚ್ಚುವರಿ ಸಹಾಯಧನವೂ ಲಭ್ಯವಿದೆ. ಅಲ್ಲದೆ, ಅಂಗಡಿ ಸೆಟ್‌ಅಪ್‌ ಗಾಗಿಯೂ ಸರ್ಕಾರ ಹಣಕಾಸಿನ ನೆರವನ್ನು ನೀಡುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ಜನೌಷಧಿ ಕೇಂದ್ರ ಸರಿಯಾದ ಸ್ಥಳದಲ್ಲಿದ್ದರೆ ಮತ್ತು ಗ್ರಾಹಕರ ಉತ್ತಮ ಒಡನಾಟವಿದ್ದರೆ, ಮಾಸಿಕವಾಗಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ.

  • ಜನೌಷಧಿ ಕೇಂದ್ರ ತೆರೆಯುವ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್‌ನಲ್ಲೇ ನಡೆಯುತ್ತದೆ. ಇದಕ್ಕಾಗಿ, "janaushadhi.gov.in" ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್‌ನಲ್ಲಿ "Apply for Kendra" ಎಂಬ ಆಯ್ಕೆಯನ್ನು ಆರಿಸಬೇಕು.
  • ನಂತರ ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ನೋಂದಾಯಿಸಿಕೊಳ್ಳಬೇಕು.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ.
  • ನಂತರ, ಪೋರ್ಟಲ್‌ಗೆ ಲಾಗಿನ್ ಆಗಿ ಅಂತಿಮ ಅರ್ಜಿಯನ್ನು ಸಲ್ಲಿಸಬೇಕು.
  • ಸೂಕ್ತ ಪರಿಶೀಲನೆ ಮತ್ತು ಅನುಮೋದನೆಯ ನಂತರ, ಕೇಂದ್ರ ತೆರೆಯಲು ಅಧಿಕೃತವಾಗಿ ಅನುಮತಿ ದೊರೆಯುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+