ನಿಮ್ಮ ಕ್ರೆಡಿಟ್ ವರದಿಯನ್ನು ನೀವು ಕೊನೆಯ ಬಾರಿಗೆ ಯಾವಾಗ ಪರಿಶೀಲಿಸಿದ್ದೀರಿ? "ನೆನಪಿಲ್ಲ" ಅಥವಾ "ಇಲ್ಲ" ಎಂದು ನಿಮ್ಮ ಉತ್ತರವಾಗಿರಬಹುದು. ಆದರೆ ಇಂತಹ ಉತ್ತರ ನೀಡುವ ಜನರಲ್ಲಿ ನೀವು ಒಬ್ಬಂಟಿಗರಲ್ಲ. ಯಾಕೆಂದರೆ ನಮ್ಮಲ್ಲಿ ಹೆಚ್ಚಿನವರು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಮಾತ್ರ ಅದರ ಬಗ್ಗೆ ಯೋಚಿಸುತ್ತೇವೆ. ಉಳಿದಂತೆ ಹೆಚ್ಚು ಕಡಿಮೆ ಇದನ್ನು ನಾವು ಮರೆತೇ ಬಿಡುತ್ತೇವೆ.!
ಆದರೆ ಕಟು ಸತ್ಯ ಇಲ್ಲಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಒಳಿತು. ಹೇಗೆ ನಾವು ನಮ್ಮ ರೂಟೀನ್ ಆರೋಗ್ಯ ತಪಾಸಣೆಗಳನ್ನು ಮಾಡದೇ ಇದ್ರೆ ರೋಗ ಪತ್ತೆಯಾಗುವುದಿಲ್ಲವೋ, ಮುಂದೆ ತೀರಾ ಆರೋಗ್ಯ ಕೆಟ್ಟು ಧುತ್ ಎಂದು ಖಾಯಿಲೆ ಕಾಡತೊಡಗುತ್ತದೆ ಅದೇ ರೀತಿ ಹಾಗೆಯೇ ನಿಮ್ಮ ಕ್ರೆಡಿಟ್ ರಿಪೋರ್ಟ್ ವರದಿಯನ್ನು ನಿರ್ಲಕ್ಷಿಸುವುದರಿಂದ ನಿಮ್ಮ ಆರ್ಥಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಕ್ರೆಡಿಟ್ ವರದಿಯನ್ನು ನಿಮ್ಮ ಆರ್ಥಿಕ ಆರೋಗ್ಯ ವರದಿಯಂತೆ ಮತ್ತು ನಿಮ್ಮ ಕ್ರೆಡಿಟ್ ಪ್ರೊಫೈಲ್ ಅನ್ನು ನಿಮ್ಮ ಯಕೃತ್ತು ಅಥವಾ ಮೂತ್ರಪಿಂಡದ ಪ್ರೊಫೈಲ್‌ನಂತೆ ಯೋಚಿಸಿ. ಯಾಕೆಂದರೆ ಆರೋಗ್ಯದ ಹಿಂದೆ ಲಿವರ್ ಮತ್ತು ಕಿಡ್ನಿ ಕಾರ್ಯ ಬಹುಮುಅಕ್ಯವಾಗಿರುತ್ತದೆ. ಆದರೆ ಇದು ಹಿನ್ನೆಲೆಯಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತದೆ. ಇದು ಬದುಕುಳಿಯಲು ಅವಶ್ಯಕವಾಗಿದೆ, ಆದರೆ ಇದನ್ನು ಬಹಳಷ್ಟು ಬಾರಿ ಹೆಚ್ಚುಕಡಿಮೆ ಆಗುವವರೆಗೆ ಅದರ ಆರೋಗ್ಯದ ಕಾಪಾಡಲು ನಾವು ನಿರ್ಲಕ್ಷಿಸವಹಿಸುತ್ತೇವೆ.

ಕ್ರೆಡಿಟ್ ರಿಪೋರ್ಟ್: ಸಾಲಕ್ಕೆ ಅಡ್ಡಿ ಉಂಟುಮಾಡುವ ಸೈಲೆಂಟ್ ಶತ್ರು.!
ನಾವು ನಮ್ಮ ಜೀವನದ ಮಹತ್ವದ ಘಟನೆಗಳಲ್ಲಿ ಹೆಚ್ಚಾಗಿ ಸಾಲವನ್ನು ಅವಲಂಭಿಸಬೇಕಾಗುತ್ತದೆ. ಮನೆ ಖರೀದಿ, ಮದುವೆ, ವಾಹನ ಖರೀದಿ ಹೀಗೆ ..."ನಾನು ಮಾಡಿದ ಸಾಲದ ಮಾಸಿಕ ಕಂತುಗಳುಗಳನ್ನು ನಾನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿದ್ದರೆ , ನನಗೆ ಬೇಕಾದ ಸಾಲ ಸಿಗುತ್ತದೆ" ಎಂದು ನಾವು ಭಾವಿಸುವುದರಿಂದ ನಮ್ಮ ಕ್ರೆಡಿಟ್ ವರದಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೀಗುವುದಿಲ್ಲ. ಆದರೆ ದುರದೃಷ್ಟವಶಾತ್, ಇದು ನಾವು ಯೋಚಿಸಿದಂತೆ ಇರೋದಿಲ್ಲ.. ಸಂಪೂರ್ಣ ದೇಹ ತಪಾಸಣೆ ಮಾಡುವವರೆಗೆ ನಮ್ಮ ದೇಹದೊಳಗಿನ ಆರೋಗ್ಯ ಸಮಸ್ಯೆಗಳು ಪತ್ತೆಯಾಗದಂತೆ, ನಿಮ್ಮ ಕ್ರೆಡಿಟ್ ವರದಿಯಲ್ಲಿನ ಗುಪ್ತ ಸಮಸ್ಯೆಗಳು ಕೆಟ್ಟ ಸಮಯದಲ್ಲಿ ಬೆಳಕಿಗೆ ಬರುತ್ತವೆ - ಅದು ಕೂಡಾ ನಮಗೆ ತೀರಾ ಸಾಲದ ಅಗತ್ಯವಿದ್ದಾಗ.!
ನೀವು ನಿಮ್ಮ ಕನಸಿನ ಮನೆ ಖರೀದಿಸಲು ವರ್ಷಗಳಿಂದ ಹಣ ಉಳಿಸುತ್ತಿದ್ದೀರಿ ಎಂದುಕೊಳ್ಳಿ. ನೀವು ಸಾಲಕ್ಕೆ ಅರ್ಜಿ ಸಲ್ಲಿಸುತ್ತೀರಿ, ಉತ್ತಮ ಬಡ್ಡಿದರ ಸಿಗುತ್ತದೆ ಎಂದು ಖಚಿತವಾಗಿರುತ್ತೀರಿ. ಆದರೆ ಆಘಾತಕ್ಕೆ, ಬ್ಯಾಂಕ್ ನಿಮ್ಮ ಅರ್ಜಿಯನ್ನು ತಿರಸ್ಕರಿಸುತ್ತದೆ. ಏಕೆ? ವರ್ಷಗಳ ಹಿಂದೆ ನೀವು ಮರೆತುಹೋದ ಮುಚ್ಚಿದ ಖಾತೆಯಿಂದ ಬಾಕಿ ಉಳಿದಿರುವ ಸಣ್ಣ ಮೊತ್ತದ ಕಾರಣ. ಅಥವಾ, ಇನ್ನೂ ಸಮಸ್ಯೆಯಾತ್ಮಾಕವಾಗಿರಬಹುದು ಅಂದರೆ ನಿಮಗೆ ಸಾಲವನ್ನು ನೀಡಲಾಗುತ್ತದೆ ಆದರೆ ಆಘಾತಕಾರಿಯಾಗಿ ಹೆಚ್ಚಿನ ಬಡ್ಡಿದರದಲ್ಲಿ, ಏಕೆಂದರೆ ನಿಮ್ಮ ಕ್ರೆಡಿಟ್ ವರದಿಯಲ್ಲಿ ಒಂದು ಸಣ್ಣ ಸಮಸ್ಯೆಯಿಂದ.!
ನಿಮ್ಮ ಕ್ರೆಡಿಟ್ ವರದಿಯು ನಿಮಗೆ ತಿಳಿದಿರದ ರೆಡ್ ಪ್ಲ್ಯಾಗ್ ಗಳನ್ನು ಬಹಿರಂಗಪಡಿಸಬಹುದು. : ಉದಾಹರಣೆಗೆ ಹಳೆಯ ಕ್ರೆಡಿಟ್ ಕಾರ್ಡ್‌ನಲ್ಲಿ ಪಾವತಿಸದ ರೂ 100 ಸಹ ನಿಮ್ಮನ್ನು ವರ್ಷಗಳವರೆಗೆ ಕಾಡಬಹುದು, ಭವಿಷ್ಯದ ಸಾಲಗಳಿಗೆ ಅಡ್ಡಿಯುಂಟುಮಾಡಬಹುದು. ದೋಷಗಳು ಮತ್ತು ತಪ್ಪು ವರದಿಗಳು ಅಂದರೆ ಖಾತೆಗಳನ್ನು ತಪ್ಪಾಗಿ ತೆರೆದಂತೆ ಗುರುತಿ, ನೀವು ಎಂದಿಗೂ ತೆಗೆದುಕೊಳ್ಳದ ಸಾಲಗಳತಪ್ಪಾದ ಬಾಕಿ ಮೊತ್ತಗಳು ಇತ್ಯಾದಿಗಳಿಗೆ ಸಮಸ್ಯೆ ಕಾಡಬಹುದು, ಕ್ರೆಡಿಟ್ ಕಾರ್ಡ್‌ಗಳು ಅಥವಾ ರೋಲಿಂಗ್ ಖಾತೆಗಳ ಅತಿಯಾದ ಬಳಕೆಯು ಆರ್ಥಿಕ ಒತ್ತಡವನ್ನು ಸೂಚಿಸುತ್ತದೆ ಹೀಗೆ ಇವುಗಳಲ್ಲಿ ಬಹಳಷ್ಟು ಒಳಗೊಂಡಿರುತ್ತದೆ.
ನಿಮ್ಮ ಕ್ರೆಡಿಟ್ ವರದಿಯಲ್ಲಿ ಏನೇನು ಗಮನಿಸಬೇಕು?
ನಿಮ್ಮ ಕ್ರೆಡಿಟ್ ವರದಿಯನ್ನು ರಕ್ತ ಪರೀಕ್ಷೆಯಂತೆ ವಿವರವಾಗಿ ಪರಿಶೀಲಿಸಿ. ಇಲ್ಲಿ ಕೇವಲ ಸ್ಕೋರ್(ಕ್ರೆಡಿಟ್ ಸ್ಕೋರ್) ನೋಡಬೇಡಿ, ವಿವರಗಳನ್ನು ಸರಿಯಾಗಿ ಗಮನಿಸಬೇಕು. ಎಲ್ಲಾ ಖಾತೆಗಳು ಸರಿಯಾಗಿ ಲೇಬಲ್ ಆಗಿರಬೇಕು (ಉದಾಹರಣೆಗೆ "ಓವರ್‌ಡ್ಯೂ" ಅಥವಾ "SMA" ಬದಲಿಗೆ "ಸ್ಟ್ಯಾಂಡರ್ಡ್"). ಖಾತೆ ಪ್ರಕಾರಗಳಲ್ಲಿ ವ್ಯತ್ಯಾಸಗಳಿರಬಾರದು (ವೈಯಕ್ತಿಕ ಸಾಲವು ವ್ಯವಹಾರ ಸಾಲವಾಗಿರಬಾರದು). ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಿರಬಾರದು. ಗುರುತಿಸದ ಖಾತೆಗಳಿದ್ದರೆ ಗಮನಿಸಿ. ಮುಚ್ಚಿದ ಖಾತೆಗಳನ್ನು ವರದಿ ಮಾಡಬೇಕು. ಬಾಕಿ ಮೊತ್ತಗಳು ಸರಿಯಾಗಿರಬೇಕು ಮತ್ತು ಪ್ರತಿಯೊಂದು EMI ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಇತಿಹಾಸ ನಿಖರವಾಗಿರಬೇಕು.
ನಿಮ್ಮ ಕ್ರೆಡಿಟ್ ವರದಿಯಲ್ಲಿ ದೋಷಗಳನ್ನು ಹೇಗೆ ಸರಿಪಡಿಸುವುದು
ನಿಮ್ಮ ಕ್ರೆಡಿಟ್ ವರದಿಯಲ್ಲಿ ತಪ್ಪುಗಳಿದ್ದರೆ, ವೈದ್ಯಕೀಯ ಚಿಕಿತ್ಸೆಯಂತೆ ಕ್ರಮ ಕೈಗೊಳ್ಳಿ. ಮೊದಲಿಗೆ, ತಪ್ಪುಗಳನ್ನು ಗುರುತಿಸಿ, ದಾಖಲೆಗಳನ್ನು (ಸಾಲ ಮುಚ್ಚಿದ ಪತ್ರಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು) ಸಂಗ್ರಹಿಸಿ. ನಂತರ, ಕ್ರೆಡಿಟ್ ಬ್ಯೂರೋಗೆ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿ, ಸಾಕ್ಷಿಗಳನ್ನು ನೀಡಿ. ವರದಿ ಮಾಡಿದ ಬ್ಯಾಂಕ್ ಅಥವಾ ಸಂಸ್ಥೆಯನ್ನು ಸಂಪರ್ಕಿಸಿ. 30-45 ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ, ಫಾಲೋ ಅಪ್ ಮಾಡಿ. ಸರಿಪಡಿಸಿದ ವರದಿಯನ್ನು ಪರಿಶೀಲಿಸಿ. ಸಮಸ್ಯೆ ಬಗೆಹರಿಯದಿದ್ದರೆ, ಆರ್‌ಬಿಐ ಓಂಬುಡ್ಸ್‌ಮನ್ ಅಥವಾ ಇತರ ಪ್ರಾಧಿಕಾರಗಳಿಗೆ ತಿಳಿಸಿ.
ನಿಮ್ಮ ಕ್ರೆಡಿಟ್ ವರದಿಯನ್ನು ಆಗ್ಗಾಗೆ ಪರಿಶೀಲಿಸುವುದು ಏಕೆ ಮುಖ್ಯ?
ಆರೋಗ್ಯ ತಪಾಸಣೆಗಾಗಿ ಹೃದಯಾಘಾತವಾಗುವವರೆಗೆ ಕಾಯುವುದಿಲ್ಲ, ಅಲ್ಲವೇ? ಹಾಗೆಯೇ, ಕ್ರೆಡಿಟ್ ವರದಿಗಾಗಿ ಸಾಲ ನಿರಾಕರಣೆಯವರೆಗೆ ಕಾಯಬಾರದು. ನಿಯಮಿತವಾಗಿ ಪರಿಶೀಲಿಸುವುದರಿಂದ ಭವಿಷ್ಯದ ತೊಂದರೆಗಳನ್ನು ತಪ್ಪಿಸಬಹುದು. ಬಾಕಿ ಖಾತೆಗಳು ಅಥವಾ ತಪ್ಪುಗಳನ್ನು ಮೊದಲೇ ಕಂಡುಹಿಡಿಯಬಹುದು. ಉತ್ತಮ ಸಾಲದ ನಿಯಮಗಳು, ಕಡಿಮೆ ಬಡ್ಡಿದರ ಸಿಗುತ್ತದೆ. ತಿರಸ್ಕಾರಗಳನ್ನು ತಪ್ಪಿಸಬಹುದು. ನಿಯಮಿತ ಮೇಲ್ವಿಚಾರಣೆಯಿಂದ ಖರ್ಚುಗಳನ್ನು ಯೋಜಿಸಲು ಸಹಾಯವಾಗುತ್ತದೆ. ನಿಮ್ಮ ಕ್ರೆಡಿಟ್ ವರದಿ ಕೇವಲ ಹಣಕಾಸಿನ ದಾಖಲೆ ಅಲ್ಲ, ನಿಮ್ಮ ಭವಿಷ್ಯದ ಆರೋಗ್ಯ ತಪಾಸಣೆ ಇದ್ದಂತೆ. ನಿರ್ಲಕ್ಷಿಸಿದರೆ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಹಣಕಾಸಿನ ಆರೋಗ್ಯವನ್ನು ನಿಯಂತ್ರಿಸಿ. ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಿ. ಇವೆಲ್ಲವನ್ನು ಅನುಸರಿಸಿದ್ರೆ ಭವಿಷ್ಯದಲ್ಲಿ ನಿಮಗೆ ನೀವೆ ಧನ್ಯವಾದ ಹೇಳುತ್ತೀರಿ.
More From GoodReturns

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಬಂಪರ್ ಲಾಭ?

ಆರ್‌ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?



Click it and Unblock the Notifications