ನಮ್ಮಲ್ಲಿರುವ ಹಣವನ್ನು ದ್ವಿಗುಣಗೊಳಿಬೇಕು, ಮೂರು ಪಟ್ಟು ಹೆಚ್ಚಿಸುವುದು ಅಥವಾ ನಾಲ್ಕು ಪಟ್ಟು ಬೆಳೆಸಬೇಕು ಎಂದು ನಾವೆಲ್ಲರೂ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವುತ್ತೇವೆ. ಆದರೆ ಹಣ ಡಬಲ್ ಮಾಡಲು ಯಾವುದೇ ಅದ್ಭುತ ಶಕ್ತಿಯ ಅಗತ್ಯವಿಲ್ಲ. ಜೊತೆಗೆ ಹೂಡಿಕೆ ಮಾಡುವುದು ಕೇವಲ ಶ್ರೀಮಂತರಿಗೆ ಆಟ ಎಂಬ ಆಲೋಚನೆಯನ್ನು ತೆಗೆದುಹಾಕಬೇಕು. ಯಾಕೆಂದರೆ ಅನೇಕ ಜನರು ಹೂಡಿಕೆಯು ದೊಡ್ಡ ಮೊತ್ತದ ಹಣವನ್ನು ಹೊಂದಿರುವವರಿಗೆ ಮಾತ್ರ ಎಂದು ಭಾವಿಸುತ್ತಾರೆ, ಆದರೆ ಇದು ನಿಜವಲ್ಲ. ಇದ್ರ ಬದಲಿಗೆ, ನೀವು ಕೆಲವು ಮುಖ್ಯವಾದ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು, ಹೂಡಿಕೆಗಳಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು ಮತ್ತು ಫಲಿತಾಂಶಗಳಿಗಾಗಿ ತಾಳ್ಮೆಯಿಂದ ಕಾಯಬೇಕು.
ದಿನಕ್ಕೆ 300 ರೂ. ಗಳಿಸುವ ಕಾರ್ಮಿಕ ಕೂಡ ಸಣ್ಣ ಹೂಡಿಕೆಗಳ ಮೂಲಕ ದೊಡ್ಡ ಸಂಪತ್ತಿನನಿಧಿಯನ್ನು ರಚಿಸಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ಬೇಕಾಗಿರುವುದು ಸರಿಯಾದ ನಿರ್ದೇಶನ ಮತ್ತು ಮಾಹಿತಿ. ಹಣಕಾಸು ತಜ್ಞರು ರೂಪಿಸಿದ ಕೆಲವು ಸರಳ ನಿಯಮಗಳು, ಎಷ್ಟು ಹಣವು ದ್ವಿಗುಣಗೊಳ್ಳುತ್ತದೆ ಅಥವಾ ಹೆಚ್ಚಾಗುತ್ತದೆ. ಈ ರೀತಿಯ ಸೂತ್ರದಿಂದ ಎಷ್ಟು ಸಮಯದಲ್ಲಿ ಮತ್ತು ಯಾವ ಲಾಭದೊಂದಿಗೆ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಹಣ ದ್ವಿಗುಣಗೊಳ್ಳುವುದು ಯಾವಾಗ?
ಈ ನಿಯಮದ ಪ್ರಕಾರ ಒಂದು ನಿರ್ದಿಷ್ಟ ಯೋಜನೆಯಲ್ಲಿ ನಿಮಗೆ ಪ್ರತಿ ವರ್ಷ ಒಂದು ಸ್ಥಿರವಾದ ಆದಾಯ ಸಿಗುತ್ತಿದ್ದರೆ, ನಿಮ್ಮ ಹಣವು ಎಷ್ಟು ವರ್ಷಗಳಲ್ಲಿ ದ್ವಿಗುಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಇದರ ಸೂತ್ರ ಹೀಗಿದೆ: 72 ÷ ವಾರ್ಷಿಕ ಆದಾಯದ ದರ
ಉದಾಹರಣೆಗೆ, ಒಂದು ಯೋಜನೆ ವಾರ್ಷಿಕವಾಗಿ 8% ಆದಾಯವನ್ನು ನೀಡುತ್ತಿದ್ದರೆ, ಆಗ 72 ÷ 8 = 9 ವರ್ಷಗಳು. ಇದರರ್ಥ, ನಿಮ್ಮ ಹಣವು 9 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.ಸರಳವಾಗಿ ಹೇಳುವುದಾದರೆ, ನಿಮ್ಮ ಹೂಡಿಕೆಯು ದ್ವಿಗುಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜು ಮಾಡಲು ಈ ನಿಯಮವು ಸಹಾಯ ಮಾಡುತ್ತದೆ.
ಮೂರು ಪಟ್ಟು ಹೆಚ್ಚಿಸಲು ಇರುವ ಲೆಕ್ಕಾಚಾರ
ನಿಮ್ಮ ಗುರಿ ನಿಮ್ಮ ಹಣವನ್ನು ಮೂರು ಪಟ್ಟು ಹೆಚ್ಚಿಸುವುದಾದರೆ, ನೀವು 114 ÷ ವಾರ್ಷಿಕ ಆದಾಯದ ದರ ಎಂಬ ಸೂತ್ರವನ್ನು ಬಳಸಬಹುದು.ಉದಾಹರಣೆಗೆ, ಒಂದು ಹೂಡಿಕೆಯು ವಾರ್ಷಿಕವಾಗಿ 10% ಆದಾಯವನ್ನು ನೀಡುತ್ತಿದ್ದರೆ, ಆಗ 114 ÷ 10 = 11.4 ವರ್ಷಗಳು.ಇದರರ್ಥ, ನಿಮ್ಮ ಹಣವು ಸರಿಸುಮಾರು 11 ವರ್ಷ ಮತ್ತು 4 ತಿಂಗಳುಗಳಲ್ಲಿ ಮೂರು ಪಟ್ಟು ಹೆಚ್ಚಾಗುತ್ತದೆ.
ನಾಲ್ಕು ಪಟ್ಟು ಹೆಚ್ಚಿಸಲು ಇರುವ ಸೂತ್ರವಿದು
ನಿಮ್ಮ ಹಣವನ್ನು ನಾಲ್ಕು ಪಟ್ಟು ಹೆಚ್ಚಿಸುವುದು ನಿಮ್ಮ ಗುರಿಯಾಗಿದ್ದರೆ, ನೀವು 144 ÷ ವಾರ್ಷಿಕ ಆದಾಯದ ದರ ಎಂಬ ಸೂತ್ರವನ್ನು ಬಳಸಬಹುದು. ಉದಾಹರಣೆಗೆ, ಒಂದು ಹೂಡಿಕೆಯಿಂದ ವಾರ್ಷಿಕವಾಗಿ 12% ಆದಾಯ ಬರುತ್ತಿದ್ದರೆ, ಆಗ 144 ÷ 12 = 12 ವರ್ಷಗಳು. ಇದರರ್ಥ, ನಿಮ್ಮ ಹಣವು ಸರಿಸುಮಾರು 12 ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ.
ಕಡಿಮೆ ಆದಾಯವಿದ್ದರೂ ಸಂಪತ್ತಿನ ಬೃಹತ್ ನಿಧಿ ಹೇಗೆ ರಚಿಸುವುದು?
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಯಲ್ಲಿ ಪ್ರತಿ ತಿಂಗಳು ಕೇವಲ 500 ರೂಪಾಯಿಗಳನ್ನು ಹೂಡಿಕೆ ಮಾಡುವುದರಿಂದಲೂ ದೀರ್ಘಾವಧಿಯಲ್ಲಿ ಗಮನಾರ್ಹವಾದ ಮೊತ್ತವನ್ನು ಗಳಿಸಬಹುದು. ಸರಾಸರಿ 12% ವಾರ್ಷಿಕ ಲಾಭವನ್ನು ಪರಿಗಣಿಸಿದರೆ, ಮುಂದಿನ 20-25 ವರ್ಷಗಳಲ್ಲಿ ಈ ಸಣ್ಣ ಹೂಡಿಕೆಯು ಲಕ್ಷಾಂತರ ರೂಪಾಯಿಗಳ ನಿಧಿಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಚಕ್ರಬಡ್ಡಿಯ ಶಕ್ತಿ. ಹೂಡಿಕೆಯ ಮೇಲಿನ ಲಾಭವನ್ನು ಮರುಹೂಡಿಕೆ ಮಾಡುವುದರಿಂದ, ಅದು ಮುಂದಿನ ಅವಧಿಯಲ್ಲಿ ಮತ್ತಷ್ಟು ಲಾಭವನ್ನು ಗಳಿಸಲು ಸಹಾಯ ಮಾಡುತ್ತದೆ. ಹೀಗಾಗಿ, ದೀರ್ಘಾವಧಿಯಲ್ಲಿ ಸಣ್ಣ ಮೊತ್ತದ ನಿಯಮಿತ ಹೂಡಿಕೆಯು ಸಹ ದೊಡ್ಡ ಆರ್ಥಿಕ ಭದ್ರತೆಯನ್ನು ಒದಗಿಸಬಲ್ಲದು.
ಈ ಕಾರಣಕ್ಕಾಗಿಯೇ, ಹಣಕಾಸಿನ ನಿಯಮಗಳನ್ನು ಅಳವಡಿಸಿಕೊಂಡರೆ, ಕಡಿಮೆ ಆದಾಯ ಹೊಂದಿರುವ ದಿನಗೂಲಿಯವರು, ಕಾರ್ಮಿಕ ವರ್ಗದ ಜನರು ಸಹ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ. ನೀವು ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ ಮತ್ತು ತಾಳ್ಮೆಯನ್ನು ಕಾಯ್ದುಕೊಂಡರೆ ಹಣವನ್ನು ಹೆಚ್ಚಿಸುವುದು ಕಷ್ಟದ ಕೆಲಸವಲ್ಲ. ಈ ನಿಯಮಗಳು ಸಣ್ಣ ಆದಾಯ ಇರುವವರಿಗೂ ದಿಕ್ಕನ್ನು ತೋರಿಸುವುದಲ್ಲದೆ, ಸರಿಯಾದ ತಂತ್ರವನ್ನು ರೂಪಿಸುವಲ್ಲಿಯೂ ನಿಮಗೆ ಸಹಾಯ ಮಾಡುತ್ತವೆ. ಹೂಡಿಕೆ ಮೊತ್ತ ಚಿಕ್ಕದಾಗಿದ್ದರೂ ಸಹ, ಪ್ರಾರಂಭಿಸಿ ಮುಖ್ಯ, ಏಕೆಂದರೆ ಹೂಡಿಕೆಯ ಶ್ರೇಷ್ಠ ಮಂತ್ರವೆಂದರೆ "ಬೇಗ ಪ್ರಾರಂಭಿಸುವುದು ಮತ್ತು ಯಾವುದೇ ತಡೆಯಿಲ್ಲದೇ ಮುಂದುವರಿಸಿವುದು".
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications