ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಮತ್ತು ಪತ್ನಿ ಮಿಲಿಂಡಾ ಗೇಟ್ಸ್ ವಿಚ್ಚೇದನ ಪಡೆಯುತ್ತಿದ್ದಾರೆ. ಈ ಮೂಲಕ ತಮ್ಮ 27 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿದ್ದಾರೆ. ಈ ಕುರಿತು ಅಧಿಕೃತವಾಗಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಬಿಲ್ ಗೇಟ್ಸ್ ಮತ್ತು ಮಿಲಿಂಡಾ ಒಟ್ಟು ನಿವ್ವಳ ಆಸ್ತಿ ಮೌಲ್ಯ 146 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಆದರೆ, ಬಿಲ್ ಮಿಲಿಂಡಾ, ಗೇಟ್ಸ್ ಫೌಂಡೇಶನ್‌ಗಾಗಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಚಾರಿಟಿ ಸ್ಪಷ್ಟಪಡಿಸಿದೆ.
Advertisement
Advertisement
ಕಳೆದ ವರ್ಷ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಮತ್ತು ಮೆಕೆಂಜಿ ವಿಚ್ಚೇದನವು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾದ ಬಿಲ್‌ಗೇಟ್ಸ್ ಮತ್ತು ಮಿಲಿಂಡಾ ಗೇಟ್ಸ್ ವಿಚ್ಛೇದನವು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಪ್ರಸ್ತುತ ಗೇಟ್ಸ್‌ನ ಆಸ್ತಿಯ ಮೌಲ್ಯವು ಶೇಕಡಾ 20 ರವರೆಗೆ ಇರಬಹುದು.
ಕಳೆದ ವರ್ಷ ಮೈಕ್ರೋಸಾಫ್ಟ್ ಆಡಳಿತ ಮಂಡಳಿಯಿಂದ ಕೆಳಗಿಳಿದಾಗಿನಿಂದ ಅವರ ಪಾಲಿನ ಒಟ್ಟು ಆಸ್ತಿ ವಿವರಗಳು ಸಂಪೂರ್ಣವಾಗಿ ಬಹಿರಂಗಗೊಂಡಿಲ್ಲ. ಅನೇಕ ಕ್ಷೇತ್ರಗಳಲ್ಲಿ ಕಂಪನಿಯ ಹೂಡಿಕೆಯನ್ನು ಒಳಗೊಂಡಿರುವ ಗೇಟ್ಸ್ ವಿಚ್ಛೇದನದ ಬಳಿಕ ಎಷ್ಟು ಪರಿಹಾರ ನೀಡುತ್ತಾರೆ ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕಳೆದ ಫೆಬ್ರವರಿಯ ವೇಳೆಗೆ ಬಿಲ್ ಗೇಟ್ಸ್ ನಿವ್ವಳ ಆಸ್ತಿ ಮೌಲ್ಯ 137 ಬಿಲಿಯನ್ ಡಾಲರ್ ಆಗಿತ್ತು. ಗೇಟ್ಸ್ ಫೌಂಡೇಶನ್‌ಗಾಗಿ 53 ಬಿಲಿಯನ್ ಡಾಲರ್‌ವರೆಗೆ ಖರ್ಚು ಮಾಡಲಾಗಿದೆ. ಪ್ರಸ್ತುತ ಅಮೆಜಾನ್ ಸಂಸ್ಥಾಪಕರಾದ ಜೆಫ್ ಬೆಜೋಸ್, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತು ಬರ್ನಾರ್ಡ್ ಅರ್ನಾಲ್ಡ್ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಗೇಟ್ಸ್ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.