Advertisement

ಷೇರುಪೇಟೆ: ಸೆನ್ಸೆಕ್ಸ್ 265 ಪಾಯಿಂಟ್ಸ್‌ ಕುಸಿತ, ನಿಫ್ಟಿ ಕೂಡ ಇಳಿಕೆ

ಭಾರತೀಯ ಷೇರುಪೇಟೆ ಶುಕ್ರವಾರ ಇಳಿಮುಖದೊಂದಿಗೆ ಪ್ರಾರಂಭಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 217 ಪಾಯಿಂಟ್ ಕುಸಿದಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಕುಸಿದಿದೆ.

ಬೆಳಿಗ್ಗೆ 9.54ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.55ರಷ್ಟು ಅಥವಾ 265.84 ಪಾಯಿಂಟ್ಸ್‌ ಕುಸಿದು 47,814 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.40ರಷ್ಟು ಅಥವಾ 57.85 ಪಾಯಿಂಟ್ಸ್‌ ಇಳಿಕೆಗೊಂಡು 14,351 ಪಾಯಿಂಟ್ಸ್ ತಲುಪಿದೆ.

ಇಂದು ಸುಮಾರು 572 ಷೇರುಗಳು ಏರಿಕೆಗೊಂಡರೆ, 307 ಷೇರುಗಳು ಕುಸಿದರೆ, 70 ಕಂಪನಿಗಳ ಷೇರು ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Advertisement
Advertisement

ಯಾವೆಲ್ಲಾ ಷೇರುಗಳು ಏರಿಕೆಗೊಂಡಿವೆ?

ಟಾಟಾ ಸ್ಟೀಲ್ ಷೇರುಗಳು ಸುಮಾರು 12 ರೂಪಾಯಿ ಹೆಚ್ಚಾಗಿ 933.75 ರೂ. ತಲುಪಿದ್ದು, ಡಾ. ರೆಡ್ಡಿ ಲ್ಯಾಬ್‌ನ ಷೇರುಗಳು ಸುಮಾರು 47 ರೂ.ಗಳಿಂದ 5,246.75 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 5 ರಿಂದ 645.30 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 3 ರೂ ಗಳಿಸಿ 206.40 ರೂ., ಏಷ್ಯನ್ ಪೇಂಟ್ಸ್ ಷೇರುಗಳು 19 ರೂ.ಗಳಿಂದ 2,530.40 ರೂ. ತಲುಪಿದೆ.

ಯಾವೆಲ್ಲಾ ಷೇರುಗಳು ಕುಸಿದಿವೆ?

ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 8 ರೂ.ಗಳ ಕುಸಿತ ಕಂಡು 571.10 ರೂ., ವಿಪ್ರೋ ಷೇರುಗಳು ಸುಮಾರು 6 ರೂ.ಗಳ ಕುಸಿತ ಕಂಡು 480.45 ರೂ., ಹೀರೋ ಮೊಟೊಕಾರ್ಪ್ ಷೇರುಗಳು ಸುಮಾರು 30 ರೂ.ಗಳನ್ನು ಕಳೆದುಕೊಂಡು 2,821.00 ರೂ., ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 52 ರೂ.ಗಳ ಕುಸಿತ ಕಂಡು 4,637.10 ರೂ., ಎಸ್‌ಬಿಐ ಷೇರುಗಳು ಸುಮಾರು 4 ರೂ.ಗಳ ಕುಸಿತ ಕಂಡು 332.90 ರೂ. ತಲುಪಿದೆ.

English Summary

Sensex was up 265.84 points or 0.55% at 47,814, and the Nifty was down 57.85 points or 0.40% at 14,351
Read more...