Advertisement

ಕೊರೊನಾ ಲಾಕ್‌ಡೌನ್: ಸೆನ್ಸೆಕ್ಸ್, ನಿಫ್ಟಿ ಇಳಿಕೆಯ ಆರಂಭ

ಸಕಾರಾತ್ಮಕ ಜಾಗತಿಕ ಸೂಚನೆಗಳ ನಡುವೆಯು ಭಾರತೀಯ ಷೇರು ಸೂಚ್ಯಂಕಗಳು ಗುರುವಾರ ಕುಸಿದೊಂದಿಗೆ ಆರಂಭಗೊಂಡಿದ್ದು, ನಿಫ್ಟಿ 14200 ಕ್ಕಿಂತ ಕಡಿಮೆಯಾಗಿದೆ. ಮುಂಬೈ ಷೇರುಪೇಟೆ 466 ಪಾಯಿಂಟ್ಸ್‌ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 136 ಪಾಯಿಂಟ್ಸ್‌ ಕುಸಿದಿದೆ.

ಬೆಳಿಗ್ಗೆ 9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 466.41 ಪಾಯಿಂಟ್ಸ್‌ ಅಥವಾ ಶೇಕಡಾ 0.98ರಷ್ಟು ಇಳಿಕೆಗೊಂಡು 47,239.39 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 136.90 ಪಾಯಿಂಟ್ ಅಥವಾ ಶೇಕಡಾ 0.96 ರಷ್ಟು ತಗ್ಗಿದ್ದು 14,159.50 ಪಾಯಿಂಟ್ಸ್‌ಗೆ ಇಳಿಕೆಗೊಂಡಿದೆ.

Advertisement
Advertisement

ಇಂದು ಆರಂಭಿಕ ವಹಿವಾಟಿನಲ್ಲಿ ಸುಮಾರು 430 ಷೇರುಗಳು ಏರಿಕೆಗೊಂಡರೆ, 427 ಷೇರುಗಳು ಕುಸಿದವು ಮತ್ತು 94 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇನ್ನು ಭಾರತೀಯ ರೂಪಾಯಿ ಕೋವಿಡ್ -19 ಪ್ರಕರಣಗಳ ಹೆಚ್ಚಳ ಮತ್ತು ರಾಜ್ಯ ಲಾಕ್‌ಡೌನ್‌ಗಳ ಮಧ್ಯೆ ಋಣಾತ್ಮಕ ಆರಂಭ ಪಡೆದಿದೆ. ಕೊರೊನಾ ಪಾಸಿಟಿವ್ ಸಂಖ್ಯೆಯ ಹೆಚ್ಚಳವು ಆರ್ಥಿಕ ಚೇತರಿಕೆಗೆ ಅಡ್ಡಿಯಾಗಬಹುದು ಮತ್ತು ಮಾರುಕಟ್ಟೆಯನ್ನು ಹದಗೆಡಿಸಬಹುದು. ಕಳೆದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 75.14 ರೂ. ತಲುಪಿದೆ.

English Summary

Sensex was down 466.41 points or 0.98% at 47239.39, and the Nifty was down 136.90 points or 0.96% at 14159.50.
Read more...