Advertisement

Closing Bell: ಸೆನ್ಸೆಕ್ಸ್ 202 ಪಾಯಿಂಟ್ಸ್ ಕುಸಿತ, ನಿಫ್ಟಿ ಕೂಡ ಇಳಿಕೆ

ಭಾರತೀಯ ಷೇರುಪೇಟೆ ಶುಕ್ರವಾರ ನಷ್ಟದೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 202 ಪಾಯಿಂಟ್ಸ್ ಕುಸಿತಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 65 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.42ರಷ್ಟು ಅಥವಾ 202 ಪಾಯಿಂಟ್ಸ್‌ ಕುಸಿದು 47,878.45 ಪಾಯಿಂಟ್ಸ್‌ ಇಳಿಕೆಗೊಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.45ರಷ್ಟು ಅಥವಾ 65 ಪಾಯಿಂಟ್ಸ್‌ ಇಳಿಕೆಗೊಂಡು 14,341.35 ಪಾಯಿಂಟ್ಸ್‌ ಮುಟ್ಟಿದೆ.

Advertisement
Advertisement

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.16 ರಷ್ಟು ಲಾಭದೊಂದಿಗೆ ಕೊನೆಗೊಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.51 ರಷ್ಟು ಹೆಚ್ಚಾಗಿದೆ. ಬಿಎಸ್‌ಇ ಟೆಲಿಕಾಂ ಮತ್ತು ರಿಯಾಲ್ಟಿ ತಲಾ ಶೇಕಡಾ 1ರಷ್ಟು ಕುಸಿದಿದ್ದರೆ, ಎಫ್‌ಎಂಸಿಜಿ, ಐಟಿ ಮತ್ತು ಟೆಕ್ ತಲಾ ಶೇಕಡಾ 1ರಷ್ಟು ಕುಸಿಯಿತು.

ಟಾಟಾದ ವಾಹನಗಳಿಗೆ ಬಂಪರ್ ರಿಯಾಯಿತಿ: ಪ್ರತಿ ತಿಂಗಳು ಕಡಿಮೆ ಇಎಂಐ

ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ ಅರ್ಧದಷ್ಟು ವಹಿವಾಟು ನಡೆಸಿದ್ದು, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಅಗ್ರ ನಷ್ಟ ಅನುಭವಿಸಿದ ಷೇರುಗಳಾಗಿವೆ.

English Summary

Sensex closed 202 points, or 0.42 percent, lower at 47,878.45 while the Nifty closed 65 points, or 0.45 percent, down at 14,341.35.
Read more...