Advertisement

ಸೆನ್ಸೆಕ್ಸ್ 374 ಪಾಯಿಂಟ್ಸ್ ಏರಿಕೆ, ನಿಫ್ಟಿ 109 ಪಾಯಿಂಟ್ಸ್ ಹೆಚ್ಚಳ

ಭಾರತೀಯ ಷೇರುಪೇಟೆ ಗುರುವಾರ ಇಳಿಕೆ ಆರಂಭ ಪಡೆದರೂ ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 374 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 109 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.79ರಷ್ಟು ಅಥವಾ 374 ಪಾಯಿಂಟ್ಸ್‌ ಹೆಚ್ಚಳಗೊಂಡು 48,080.67 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 109.80 ಪಾಯಿಂಟ್ಸ್‌ ಅಥವಾ ಶೇಕಡಾ 0.77ರಷ್ಟು ಏರಿಕೆಗೊಂಡು 14,406.20 ಪಾಯಿಂಟ್ಸ್‌ ಮುಟ್ಟಿದೆ.

ಇಂದು ಸುಮಾರು 1,737 ಷೇರುಗಳು ಏರಿಕೆಗೊಂಡರೆ, 1,128 ಷೇರುಗಳು ಕುಸಿದಿವೆ ಮತ್ತು 159 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Advertisement
Advertisement

ಎನ್‌ಎಸ್‌ಇನಲ್ಲಿ ಐಸಿಐಸಿಐ ಬ್ಯಾಂಕ್, ವಿಪ್ರೊ, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್ ಮತ್ತು ಎಚ್‌ಡಿಎಫ್‌ಸಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಟೈಟಾನ್ ಕಂಪನಿ, ಶ್ರೀ ಸಿಮೆಂಟ್ಸ್, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌, ಎಚ್‌ಯುಎಲ್ ಮತ್ತು ನೆಸ್ಲೆ ನಷ್ಟ ಅನುಭವಿಸಿದೆ.

ರಿಲಯನ್ಸ್ ಜಿಯೋ: ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಗುವುದು ಹೇಗೆ?

ನಿಫ್ಟಿ ಮೆಟಲ್ ಸೂಚ್ಯಂಕವು ಶೇಕಡಾ 1 ಕ್ಕಿಂತ ಹೆಚ್ಚಿನದನ್ನು ಸೇರಿಸಿದರೆ, ನಿಫ್ಟಿ ಬ್ಯಾಂಕ್ ಸೂಚ್ಯಂಕವು ಶೇಕಡಾ 2 ರಷ್ಟು ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.

English Summary

Sensex was up 374.87 points or 0.79% at 48080.67, and the Nifty was up 109.80 points or 0.77% at 14406.20.
Read more...