ಬೆಂಗಳೂರು, ಜನವರಿ 15: ಸೂಪರ್ ರಿಚ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಹೂಡಿಕೆದಾರರು OWO ರೆಸಿಡೆನ್ಸಸ್ ಯೋಜನೆಯಲ್ಲಿ ಭಾರೀ ಆಸಕ್ತಿ ತೋರಿಸುತ್ತಿದ್ದಾರೆ. ಒಡ್ಲೂಒ ಇದು ಲಂಡನ್‌ನಲ್ಲಿರುವ ಸೂಪರ್ ಐಷಾರಾಮಿ ಯೋಜನೆಯಾಗಿದ್ದು, ಖ್ಯಾತ ಪಾರಂಪರಿಕ ಆಸ್ತಿಯ ಮೇಲೆ ಈ ಯೋಜನೆ ನಿರ್ಮಾಣವಾಗುತ್ತಿದೆ.
ಈ ಹೊಸ ಕೊಡುಗೆಯನ್ನು ನೀಡುತ್ತಿರುವರು ಭಾರತ ಮತ್ತು ಪ್ರಪಂಚದಲ್ಲೇ ಶ್ರೀಮಂತ ಆಗಿರುವ ಕುಟುಂಬವಾಗಿದೆ. ಶ್ರೀಮಂತ ಅಂದೊಂಡನೆ ಥಟ್ಟನೆ ಅಂಬಾನಿಗಳು, ಟಾಟಾ ಅಥವಾ ಅದಾನಿಗಳಲ್ಲ ಕುಟುಂಬ ನೆನಪಾದರೂ , ಇದರ ಹಿಂದೆ ಇರುವುದು ರಿಯಲ್ ಎಸ್ಟೇಟ್ ಹೆಚ್ಚಾಗಿ ತೊಡಗಿಸಿಕೊಂಡಿರುವ ಹಿಂದೂಜಾ ಕುಟುಂಬ.

ಓಲ್ಡ್ ವಾರ್ ಆಫೀಸ್ ಅಥವಾ ಒಡ್ಲೂಒ ಎಂದು ಕರೆಯಲ್ಪಡುವ ಈ ಆಸ್ತಿಯನ್ನು ಹಿಂದೂಜಾ ಕುಟುಂಬವು 2015 ರಲ್ಲಿ ಯುಕೆ ಸರ್ಕಾರದಿಂದ ಖರೀದಿಸಿತ್ತು. GBP 1.3 ಬಿಲಿಯನ್ ಅಥವಾ 13000 ಕೋಟಿ ರೂ. ವೆಚ್ಚದಲ್ಲಿ ಪಾರಂಪರಿಕ ಕಟ್ಟಡವನ್ನು ಮಿಶ್ರ-ಬಳಕೆಯ ಆಸ್ತಿಯಾಗಿ ಪರಿವರ್ತಿಸಲು 8 ವರ್ಷಗಳನ್ನು ತೆಗೆದುಕೊಂಡಿತು. ಒಟ್ಟಾರೆ GBP 374 ಮಿಲಿಯನ್ ಆಗಿದ್ದು, ಇದು ಆಸ್ತಿಗಾಗಿ ಹಿಂದೂಜಾ ಪಾವತಿಸಿದ ಮೊತ್ತವನ್ನು ಒಳಗೊಂಡಿದೆ.
ಉದ್ಯಮ ಕುಟುಂಬದ ಮೂರನೇ ತಲೆಮಾರಿನವರಾಗಿರುವ ಸಂಜಯ್ ಹಿಂದುಜಾ ಇತ್ತೀಚೆಗೆ ಸೌದಿ ಅರೇಬಿಯಾ ಮತ್ತು ಯುಎಇ ಹೂಡಿಕೆದಾರರೊಂದಿಗೆ ಒಪ್ಪಂದಗಳನ್ನು ಯಶಸ್ವಿಯಾಗಿ ಮಾಡಲಾಗಿದೆ ಹೇಳಿದ್ದಾರೆ. ಇತ್ತೀಚೆಗೆ ತಾನೆ ಪೂರ್ಣಗೊಂಡ OWO ಯೋಜನೆಯು 1,88,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, 120-ಕೀ ರಾಫೆಲ್ಸ್ ಹೋಟೆಲ್, 85 ಐಷಾರಾಮಿ ಅಪಾರ್ಟ್ಮೆಂಟ್ ನಿವಾಸಗಳು, ೯ ರೆಸ್ಟೋರೆಂಟ್‌ಗಳು ಮತ್ತು 3 ಬಾರ್‌ಗಳೊಂದಿಗೆ ಸೂಟ್ ಹೋಟೆಲ್ ಅನ್ನು ಸಹ ಹೊಂದಿದೆ.
ವರದಿಗಳ ಪ್ರಕಾರ, ಒಡ್ಲೂಒ ನಿವಾಸಗಳಲ್ಲಿನ ಅಪಾರ್ಟ್‌ಮೆಂಟ್‌ಗಳ ಬೆಲೆ GBP 4 ಮಿಲಿಯನ್‌ನಿಂದ GBP 50 ಮಿಲಿಯನ್‌ನಷ್ಟಿದೆ. ಅಪಾರ್ಟ್‌ಮೆಂಟ್‌ಗಳ ಗಾತ್ರಗಳಲ್ಲಿ ವಿಭಿನ್ನತೆ ಇರುವುದರಿಂದ ಈ ಬದಲಾವಣೆ ಕಂಡುಬಂದಿದೆ. ಹಿಂದುಜಾ ಮುಂದಿನ 5-6 ವರ್ಷಗಳಲ್ಲಿ ತಮ್ಮ ಹೂಡಿಕೆಯ ಮೇಲಿನ ಲಾಭವನ್ನು ನಿರೀಕ್ಷಿಸುತ್ತಿದೆ
ಕುತೂಹಲಕಾರಿ ಅಂಶವೆಂದರೆ ಹಿಂದೂಜಾಗಳಲ್ಲಿ ಎರಡನೇ ತಲೆಮಾರಿನ ಸಹೋದರರಾದ ಶ್ರೀಚಂದ್ (ದಿವಂಗತ), ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್ ಅವರಿಗೆ ಬೆಳಗ್ಗಿನ ವಾಕಿಂಗ್ ನ ಮಾತುಕತೆಯಲ್ಲಿ ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ನವೀಕರಿಸುವ ಆಲೋಚನೆ ಬಂದಿತ್ತು.
ಲಂಡನ್ ನೆಲೆಯಾಗಿರುವ ಭಾರತೀಯ ಮೂಲದ ಕುಟುಂಬ ಯುಕೆಯಲ್ಲಿ ಅತ್ಯಂತ ಶ್ರೀಮಂತ್ ಕುಟುಂಬವಾಗಿದ್ದು, ಟ್ರಕ್ ತಯಾರಕ ಸಂಸ್ಥೆ ಅಶೋಕ್ ಲೇಲ್ಯಾಂಡ್, ಗಲ್ಫ್ ಆಯಿಲ್ ಲಿಮಿಟೆಡ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಮುಂತಾದವು ಇವರ ಉದ್ಯಮಗಳಲ್ಲಿ ಸೇರಿಕೊಂಡಿದೆ. ಫೋರ್ಬ್ಸ್ ಪ್ರಕಾರ, 2023 ರಲ್ಲಿ ಹಿಂದೂಜಾ ಕುಟುಂಬದ ನಿವ್ವಳ ಮೌಲ್ಯವು $ 20 ಬಿಲಿಯನ್ ಆಗಿತ್ತು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications