
ಗೂಳಿ ಎಂದರೆ ಷೇರು ಮಾರುಕಟ್ಟೆಯಲ್ಲಿ ಸದಾ ಗೂಳಿ ರೀತಿ ಮುನ್ನುಗ್ಗುವವನು ಹಾಗೆ ಕರಡಿ ಎಂದರೆ ಸದಾ ಕರಡಿಯಂತೆ ನೆಲಕಚ್ಚಿ ನಿಲ್ಲುವವನು ಎಂದರ್ಥ. ಏರಿಕೆ ಕಾಣುವ ಮಾರುಕಟ್ಟೆ ಸೂಚಿಸಲು ಗೂಳಿ ಹಾಗೂ ಕುಸಿತ ಕಾಣುವ ಮಾರುಕಟ್ಟೆ ಸೂಚಿಸಲು ಕರಡಿಯನ್ನು ಬಳಸಲಾಗುತ್ತದೆ.
ಮಾರುಕಟ್ಟೆ ಸ್ಥಿತಿಗತಿ ಬದಲಾವಣೆ ಹಾಗೂ ಈ ಪ್ರಾಣಿಗಳ ವರ್ತನೆಯನ್ನು ಹೋಲಿಕೆ ಇರುವುದರಿಂದ ಅಂದಿನಿಂದ ಇಂದಿನವರೆಗೂ ಈ ಎರಡು ಪ್ರಾಣಿಗಳನ್ನು ಷೇರು ಮಾರುಕಟ್ಟೆಯಲ್ಲಿ ಸಾಕಿಕೊಂಡು ಬರಲಾಗಿದೆ ಎನ್ನಬಹುದು.
1700 ರಿಂದ bull, bear ಪದ ಬಳಕೆಯಲ್ಲಿದೆ ಎನ್ನಲಾಗಿದ್ದರೂ 1775 ರಿಂದ ಬಳಕೆಯಲ್ಲಿರುವುದಕ್ಕೆ ಸಾಕ್ಷಿಗಳಿದೆ. ಗೂಳಿ ಹಾಗೂ ಕರಡಿಗಳನ್ನು ಷೇರು ಮಾರುಕಟ್ಟೆಗೆ ನುಗ್ಗಿಸಿದ್ದಕ್ಕೂ ಕೆಲ ದೃಷ್ಟಾಂತಗಳಿದೆ.
ಯುರೋಪಿನಲ್ಲಿ ಅದರಲ್ಲೂ ಜರ್ಮನಿಯಲ್ಲಿ Don't sell the bear-skin before you have killed the bear, ಹಾಲೆಂಡ್ ನಲ್ಲಿ Don't sell the bearskin before the bear is dead ಮತ್ತು ಇಟಲಿಯಲ್ಲಿ Don't sell the bearskin before you have caught the bear ಎಂಬ ಮಾತು ಜನಜನಿತವಾಗಿದೆ. ಇದೇ ಮುಂದೆ ಇಂಗ್ಲೆಂಡ್ ಮಾರುಕಟ್ಟೆಗೂ ವಿಸ್ತರಿಸಿದೆ. ಸಾಮಾನ್ಯವಾಗಿ Don't sell something you don't have ಎಂಬ ನುಡಿಗಟ್ಟನ್ನು ಆಂಗ್ಲರು ಬಳಸುವುದನ್ನು ಕಾಣಬಹುದು. ಮಾರುಕಟ್ಟೆಯಲ್ಲಿ ಏನು ಇಲ್ಲದಂಥ ಸ್ಥಿತಿಯುಳ್ಳವನು ಹಾಗೂ ಮಾರುಕಟ್ಟೆ ಇಳಿಮುಖವಾಗಿ ನೆಲಕಚ್ಚಿದಾಗ ಕರಡಿ ಬಳಕೆಯಾಗುತ್ತದೆ.
ಯುರೋಪ್ ನಲ್ಲಿ ಚರ್ಮ ಮಾರಾಟದ ಮಧ್ಯವರ್ತಿಗಳು ಕರಡಿ ಚರ್ಮ ಕೈಗೆ ಸಿಗುವ ಮುಂಚಿತವಾಗೇ ಮಾರಾಟ ಕುದುರಿಸಿಬಿಡುತ್ತಿದ್ದರಂತೆ Don't sell something you don't have ಅನ್ವಯವಾಗುವಂಥ ಸ್ಥಿತಿ ತಂದುಕೊಳ್ಳುತ್ತಿದ್ದ ಈ ಮಾರಾಟಗಾರರಿಗೆ ಮಾರಾಟ ಹಾಗೂ ಖರೀದಿ ವೆಚ್ಚದ ಸರಿದೂಗಿಸುವ ಬದಲು ನಷ್ಟ ಸರಿದೂಗಿಸುವುದೇ ಕಾಯಕವಾಗಿತ್ತು
ಹೀಗಾಗಿ ಮಾರುಕಟ್ಟೆ ಕುಸಿತ ಸೂಚಕವಾಗಿ ಕರಡಿ ಪದ ಅಂದಿನಿಂದ ಜಾರಿ ಬಂದಿದೆ ಎಂಬ ಮತ್ತೊಂದು ಕತೆ ಇದೆ. ಹೀಗೆ bull ಹಾಗೂ bear ಗಟ್ಟಿಯಾಗಿ ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ಮನೆ ಮಾಡಿಬಿಟ್ಟಿದೆ.


Click it and Unblock the Notifications