
ಆದರೆ, ಬ್ಯಾಂಕ್ ನಿಮ್ಮ ಖಾತೆಯನ್ನು ಯಾವ ಕಾರಣಕ್ಕೆ ಮುಟ್ಟುಗೋಲು ಹಾಕಿಕೊಳ್ಳುತ್ತದೆ? ಮುಟ್ಟುಗೋಲು ಹಾಕಿದರೆ ಬ್ಯಾಂಕ್ ಜೊತೆ ವ್ಯವಹಾರ ಸಾಧ್ಯವಿಲ್ಲವೇ? ಖಾತೆಯಲ್ಲಿರುವ ಹಣದ ಗತಿಯೇನು? ಮುಂತಾದ ಪ್ರಶ್ನೆಗಳು ಗ್ರಾಹಕರನ್ನು ಕಾಡುತ್ತದೆ.
ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ನಿಷ್ಕ್ರಿಯತೆ ದೂಡಿದರೆ ಎಲ್ಲಾ ರೀತಿಯ ಪೇಮೆಂಟ್ ಹಾಗೂ ವ್ಯವಹಾರಗಳನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ. ಈ ಹಿಂದೆ ನೀಡಿದ ಚೆಕ್ ಕೂಡಾ ಕ್ಯಾಶ್ ಆಗುವುದಿಲ್ಲ.
ಬ್ಯಾಂಕ್ ವ್ಯವಹಾರ ನಿಯಂತ್ರಕ ಸಂಸ್ಥೆಗಳಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯುರಿಟಿಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ, ಆದಾಯ ತೆರಿಗೆ ಇಲಾಖೆ ಅಥವಾ ನ್ಯಾಯಾಲಯಗಳಿಗೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಅಧಿಕಾರವಿರುತ್ತದೆ.
ನಿಯಮಗಳ ಪ್ರಕಾರ ಈ ಕೆಳಗಿನ ಸಂದರ್ಭಗಳಲ್ಲಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗುತ್ತದೆ:
* ಬ್ಯಾಂಕ್ ಸಾಲ ಬಾಕಿ ಉಳಿಸಿಕೊಂಡಿದ್ದರೆ
* ವೈಯಕ್ತಿಕ ಸಾಲ ಬಾಕಿ
* ತೆರಿಗೆ ಬಾಕಿ
* ಸಂಸ್ಥೆ / ವೈಯಕ್ತಿಕವಾಗಿ ಹಣ ಪಾವತಿ ಸಾಧ್ಯವಾಗದಿದ್ದರೆ
* ಖಾತೆ ಹಣ ಸಂಶಯಾಸ್ಪದ ಚಟುವಟಿಕೆಗಳಿಗೆ ಬಳಕೆಯಾಗಿದ್ದರೆ
* ಅಕ್ರಮ ಚಟುವಟಿಕೆಗಳಿಗೆ ಖಾತೆ ಬಳಕೆ ಮಾಡಿದ್ದರೆ
* ಮನಿ ಲಾಂಡ್ರಿಂಗ್
* ಉಗ್ರರಿಗೆ ಹಣ ಸಂದಾಯವಾಗುತ್ತಿದ್ದರೆ ಖಾತೆ ಮುಟ್ಟುಗೋಲು ಹಾಕಿಕೊಂಡು ಸ್ಥಗಿತಗೊಳಿಸಲಾಗುತ್ತದೆ.
ಇತ್ತೀಚೆಗೆ ಅಪಾರ ಸಾಲ ಹೊತ್ತುಕೊಂಡಿರುವ ಕಿಂಗ್ ಫಿಷರ್ ಖಾತೆ ಸ್ಥಗಿತಗೊಳಿಸಲಾಗಿತ್ತು. ವಿಜಯ್ ಮಲ್ಯ ಅವರ ಏರ್ ಲೈನ್ಸ್ ತೆರಿಗೆ ಇಲಾಖೆಗೆ 40 ಕೋಟಿ ರು ಸಾಲ ಬಾಕಿ ಉಳಿಸಿಕೊಂಡಿತ್ತು. 8 ಸಾವಿರಕ್ಕೂ ಅಧಿಕ ಬ್ಯಾಂಕ್ ಸಾಲ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲು ತೆರಿಗೆ ಬಾಕಿ, ಸಾಲ ಪಾವತಿ ವಿಳಂಬ ಮುಂತಾದ ಕಾರಣಗಳಿದೆ.
ಇನ್ನೊಂದು ಪ್ರಕರಣದಲ್ಲಿ ಸಹರಾ ಗ್ರೂಪ್ ತನ್ನ ಷೇರುದಾರರಿಗೆ ಮಾಹಿತಿ ನೀಡದೆ ಕಾರ್ಯನಿರ್ವಹಿಸಿದ್ದಕ್ಕೆ ಸೆಬಿ ಯಿಂದ ದಂಡ ಹಾಗೂ ಸುಪ್ರೀಂಕೋರ್ಟ್ ಯಿಂದ ಬ್ಯಾಂಕ್ ಖಾತೆ ಸ್ಥಗಿತ ಆದೇಶ ಎದುರಿಸಬೇಕಾಯಿತು.
ಬ್ಯಾಂಕ್ ಗಳು ಗ್ರಾಹಕರ ಖಾತೆ ಸ್ಥಗಿತಗೊಳಿಸಬಹುದೆ?
ಗ್ರಾಹಕ ಹೊಂದಿರುವ ಯಾವುದೇ ಖಾತೆ ಸಂಶಯಾಸ್ಪದವಾಗಿದ್ದು, ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಸಂದೇಹ ಬಂದರೆ ಬ್ಯಾಂಕ್ ಕೂಡಾ ಖಾತೆ ಮುಟ್ಟುಗೋಲು ಹಾಕಿಕೊಂಡು ಸ್ಥಗಿತಗೊಳಿಸಬಹುದಾಗಿದೆ. ಗ್ರಾಹಕನಿಗೆ ನೋಟಿಸ್ ನೀಡಿ ನಂತರ ಕ್ರಮ ಜರುಗಿಸಲಾಗುತ್ತದೆ. ಆರ್ ಬಿಐ ನಿಯಮಗಳನ್ನು ಪಾಲಿಸದೆ ವ್ಯತಿರಿಕ್ತವಾಗಿ ವ್ಯವಹರಿಸಿದರೆ ಕಾನೂನು ಬಾಹಿರ ಎಂದು ಪರಿಗಣಿಸಿ ಉಳಿತಾಯ ಖಾತೆಯನ್ನು ಸ್ಥಗಿತಗೊಳಿಸಬಹುದಾಗಿದೆ.
ಗುಡ್ ರಿಟರ್ನ್ಸ್ .ಇನ್
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications