ಪ್ರತಿ ತಿಂಗಳ ಕೊನೆಯೊಳಗೆ ಟಿಡಿಎಸ್ ತೆರಿಗೆ ಮುರಿದುಕೊಳ್ಳುವ ಉದ್ಯೋಗದಾತರು ಅದನ್ನು ಒಂದೇ ವಾರದ ಅವಧಿಯಲ್ಲಿ ಠೇವಣಿ ಇಡಬೇಕು. ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಳ್ಳುವ ಎಲ್ಲಾ ಉದ್ಯೋಗದಾತರು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಕಡ್ಡಾಯವಾಗಿ ಸಲ್ಲಿಸಬೇಕು. ಪ್ರತಿ ವರ್ಷದ ಜುಲೈ 15, ಅಕ್ಟೋಬರ್ 15, ಜನವರಿ 15 ಮತ್ತು ಮೇ 15 ರೊಳಗೆ ಉದ್ಯೋಗದಾತರು ಅಥವಾ ತೆರಿಗೆ ಮುರಿದುಕೊಳ್ಳುವಾತ ವಿವರ ಸಲ್ಲಿಸುವುದು ಕಡ್ಡಾಯ.
ಆದಾಯ ಅಥವಾ ವರಮಾನ ನೀಡುವ(ಪಾವತಿಸುವ) ವ್ಯಕ್ತಿಯು(ಉದಾಹರಣೆಗೆ ಉದ್ಯೋಗದಾತ) ತೆರಿಗೆಯನ್ನು ಮುರಿದುಕೊಂಡು ಉಳಿದ ಮೊತ್ತವನ್ನು ಆದಾಯದಾರನಿಗೆ ನೀಡುತ್ತಾನೆ. ಮೂಲದಲ್ಲಿ ತೆರಿಗೆ ಕಡಿತ ಮಾಡಿರುವುದಕ್ಕೆ ಉದ್ಯೋಗದಾತರು ಉದ್ಯೋಗಿಗೆ ಟಿಡಿಎಸ್ ಪ್ರಮಾಣಪತ್ರ ಒದಗಿಸುತ್ತಾರೆ. ಮೂಲದಲ್ಲಿ ತೆರಿಗೆ ಕಡಿತ ಪ್ರಮಾಣ ಪತ್ರದಲ್ಲಿ ಎರಡು ಬಗೆ ಇದೆ
ಸಂಬಳದಾರರು: ಅರ್ಜಿ 16: ಈ ಅರ್ಜಿ ಮೂಲಕ ಸಂಬಳದಾರರ ತೆರಿಗೆ ಪಾವತಿ ಹಾಗೂ ಕಡಿತದ ಸಂಪೂರ್ಣ ಮಾಹಿತಿ ಸಿಗಲಿದೆ.
ಸಂಬಳದಾರರಲ್ಲದವರು: ಅರ್ಜಿ 16 A: ಇದು ಕೂಡಾ ಪ್ರತ್ಯೇಕವಾಗಿ ಪ್ರತಿ ತೆರಿಗೆ ಕಡಿತ ಹಾಗೂ ಪಾವತಿ ವಿವರಗಳನ್ನು ಹೊಂದಿರುತ್ತದೆ. ಪ್ರತ್ಯೇಕ ವಿಭಾಗಕ್ಕೆ ಪ್ರತ್ಯೇಕವಾಗಿ ಅರ್ಜಿ ತುಂಬಬೇಕಾಗುತ್ತದೆ.
ಉದ್ಯೋಗಿಗಳಿಗೆ ಪಾವತಿಸುವ ವೇತನದಂತಹ ಆದಾಯಗಳಿಗೆ ಟಿಡಿಎಸ್ ಅನ್ವಯವಾಗುತ್ತದೆ. ಅದೇ ರೀತಿ, ಬ್ಯಾಂಕ್ ಮತ್ತು ಬಾಂಡ್ ಠೇವಣಿಗಳಿಗೆ ಸಿಗುವ ಬಡ್ಡಿಹಣ, ಲಾಟರಿ ಮತ್ತು ಕುದುರೆ ಸ್ಪರ್ಧೆಗಳಲ್ಲಿ ಗೆಲ್ಲುವ ಹಣ ಇತ್ಯಾದಿಗಳಿಗೆ ಟಿಡಿಎಸ್ ತೆರಿಗೆ ಕಟ್ಟಲೇಬೇಕು.
ಜೂಜಾಟದಲ್ಲಿ ಗೆದ್ದ ಬಹುಮಾನದ ಮೇಲೆ ಶೇ 30 ರಷ್ಟು TDS ಕಡಿತವಾಗಲಿದೆ. ಆದರೆ, ಲಾಟರಿ, ಮುಂತಾದ ಸ್ಪರ್ಧೆಗಳಲ್ಲಿ ಗೆದ್ದ ಮೊತ್ತಕ್ಕೆ ಟಿಡಿಎಸ್ ಕಡಿತ ಮೂಲಧನ ಮಿತಿ 5000 ರು ನಷ್ಟಿರುತ್ತದೆ. ಇದೇ ಮೊತ್ತ ಕುದುರೆ ಜೂಜಿಗೆ 2500 ರು ನಷ್ಟಿದೆ.
ಟಿಡಿಎಸ್ ಮರು ಪಾವತಿ? : ಟಿಡಿಎಸ್ ರೀಫಂಡ್ ಸಾಧ್ಯವಿದೆ. ಕೆಲವು ಸಂದರ್ಭದಲ್ಲಿ ಮೂಲ ತೆರಿಗೆಗಿಂತ ಹೆಚ್ಚಿನ ಟಿಡಿಎಸ್ ಕಡಿತವಾಗಿದ್ದರೆ ರೀಫಂಡ್ ಗೆ ಬೇಡಿಕೆ ಇಡಬಹುದು.
ಟಿಡಿಎಸ್ ದರಗಳು:
ವಾರ್ಷಿಕವಾಗಿ ಸಂಬಳದಿಂದ ಬರುವ ಆದಾಯ ಲೆಕ್ಕ ಹಾಕಲಾಗುವುದು ನಂತರ ವಾರ್ಷಿಕವಾಗಿ ಕಟ್ಟಬೇಕಾಗಿರುವ ತೆರಿಗೆಯ ವಿವರ ಸಂಗ್ರಹಿಸಲಾಗುವುದು. ಸರಾಸರಿ ದರದ ಮೇಲೆ ತೆರಿಗೆ ಕಡಿತ ಮಾಡಲಾಗುತ್ತದೆ. ಉದಾಹರಣೆಗೆ : ವಾರ್ಷಿಕವಾಗಿ 24,000 ರು ತೆರಿಗೆ ಕಟ್ಟಬೇಕಾದರೆ 2000 ರು ಟಿಡಿಎಸ್ ರೂಪದಲ್ಲಿ ಪ್ರತಿ ತಿಂಗಳು ಕಡಿತ ಮಾಡಲಾಗುತ್ತದೆ.
ಆರ್ಥಿಕ ಸುರಕ್ಷತೆ / ಡಿವಿಡೆಂಟ್/ ಬಡ್ಡಿ:
ಬ್ಯಾಂಕಿಂಗ್ ಸಂಸ್ಥೆ, ಕೋ ಆಪರೇಟಿವ್ ಸೊಸೈಟಿ, ಪೈನಾನ್ಸಿಂಗ್ ಅಥವಾ ವಸತಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಬಡ್ಡಿ ದರ ಮಿತಿ 10,000 ರು ತನಕ ಇದಕ್ಕೆ ಟಿಡಿಎಸ್ ಶೇ10 ರಷ್ಟು ಪಾವತಿ ಮಾಡಬೇಕಾಗುತ್ತದೆ.


Click it and Unblock the Notifications




