
ಅಂಚೆ ಕಚೇರಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ವರ್ಗಾವಣೆ ಮಾಡುವ ಸುಲಭ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.ಇದೇ ವಿಧಾನವನ್ನು ಬಳಸಿ ಅಂಚೆ ಕಚೇರಿಯಿಂದ ಐಸಿಐಸಿಐ ಖಾತೆಗೂ ವರ್ಗಾವಣೆ ಮಾಡಲು ಸಾಧ್ಯವಿದೆ. ಬ್ಯಾಂಕ್ ನಲ್ಲಿ ಆನ್ ಲೈನ್ ವ್ಯವಹಾರ ಸಾಧ್ಯವಿರುವುದರಿಂದ ಉದ್ಯೋಗಿಗಳಿಗೆ, ಗ್ರಾಹಕರಿಗೆ ಅನುಕೂಲಕರವಾಗಲಿದೆ. ಪಿಪಿಎಫ್ ಖಾತೆ ಸೌಲಭ್ಯ ನೀಡುವ ಬ್ಯಾಂಕ್ ಗಳ ವಿವರ ಇಲ್ಲಿದೆ ನೋಡಿ
ವರ್ಗಾವಣೆಗೂ ಮುನ್ನ ಗಮನಿಸಿ:
* ಎಸ್ ಬಿಐ ನಲ್ಲಿ ಖಾತೆ ಹೊಂದಿದ್ದರೆ ಒಳ್ಳೆಯದು
* ನಿಮ್ಮ ಪಾಸ್ ಬುಕ್ ಅಪ್ಡೇಟ್ ಮಾಡಿಕೊಳ್ಳಿ (ನಕಲು ಪ್ರತಿಯನ್ನು ಪಡೆದುಕೊಳ್ಳಿ)
* ವರ್ಗಾವಣೆ ಮಾಡುವಾಗ ನಾಮಿನಿ(nominee)ಗಳನ್ನು ಬದಲಾಯಿಸಬಹುದಾಗಿದೆ.
ಎಸ್ ಬಿಐಗೆ ವರ್ಗಾವಣೆ ವಿಧಾನ ಹೀಗಿದೆ:
* ಅಂಚೆ ಕಚೇರಿಯಿಂದ ವರ್ಗಾವಣೆ ಮಾಡುತ್ತಿದ್ದರೆ ಎಸ್ ಬಿ 10 ಅರ್ಜಿ ಎಸ್ ಬಿಐ ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಿ. ಅಥವಾ ಬ್ಯಾಂಕಿನಿಂದ ಪಡೆದುಕೊಳ್ಳಿ.
* ಎಸ್ ಬಿಐ ಬ್ಯಾಂಕಿಗೆ ವರ್ಗಾವಣೆ ಕೋರಿ ಒಂದು ಮನವಿ ಪತ್ರ ಬರೆಯಿರಿ.
* ಮನವಿ ಪತ್ರದೊಂದಿಗೆ ಪಾಸ್ ಬುಕ್ ವಿವರಗಳನ್ನು ಲಗತ್ತಿಸಿ ಅರ್ಜಿ ಅಂಚೆ ಕಚೇರಿಯಲ್ಲಿ ಸಲ್ಲಿಸಿ.
* ಗುರುತಿನ ಚೀಟಿ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್, ಮತದಾರರ ಚೀಟಿ..ಇತ್ಯಾದಿ ವಿವರಗಳನ್ನು ಕೇಳಿದರೆ ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸಿದ ಮೇಲೆ ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆ ಸ್ಥಗಿತಗೊಳಿಸಲಾಗುತ್ತದೆ. ನೀವು ಕೇಳಿದ ಬ್ಯಾಂಕಿಗೆ ಮನವಿ ಸಲ್ಲಿಸಲಾಗುತ್ತದೆ. ಬಾಕಿ ಉಳಿದಿರುವ ಮೊತ್ತವನ್ನು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಮೂಲಕ ತಲುಪಿಸಲಾಗುತ್ತದೆ. ಈ ಪ್ರಕ್ರಿಯೆ ಯಶಸ್ವಿಯಾದ ಮೇಲೆ ಸಂಬಂಧಪಟ್ಟ ಬ್ಯಾಂಕಿನಿಂದ ನಿಮಗೆ ಕರೆ ಬರುತ್ತದೆ.
ನಂತರ ಎಸ್ ಬಿಐನಿಂದ ಹೊಸ ಪಾಸ್ ಬುಕ್ ವಿತರಿಸಲಾಗುತ್ತದೆ. ಎಸ್ ಬಿಐ ನೀಡುವ ಹೊಸ ಪಾಸ್ ಬುಕ್ ನಲ್ಲಿ ಹಳೆ ವ್ಯವಹಾರ ದಾಖಲೆಗಳು ಇರುವುದಿಲ್ಲ.
ಗುಡ್ ರಿಟರ್ನ್ಸ್.ಇನ್


Click it and Unblock the Notifications