ನಿಮ್ಮ ಶಾಶ್ವತ ಖಾತೆ ನಂಬರ್ ಅಂದರೆ ಪಾನ್ ಕಾರ್ಡ್ ಕಳೆದುಕೊಂಡರೆ ಡುಪ್ಲಿಕೆಟ್ ಕಾರ್ಡ್ ಪಡೆಯುವುದು ಹೇಗೆ ಎಂಬ ಪ್ರಶ್ನೆ ಎದುರಾಗಬಹುದು. ಇದಕ್ಕೆ ಹಲವಾರು ಅಂತರ್ಜಾಲ ತಾಣಗಳು ಉತ್ತರ ನೀಡುತ್ತವೆ.
ಅಂತರ್ಜಾಲ ತಾಣದ ಮೂಲಕ ಅರ್ಜಿಯೊಂದನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ನೆರವಿನಿಂದ ಹಣ ತುಂಬಿ ನಕಲಿ ಪಾನ್ ಕಾರ್ಡ್ ಪಡೆದುಕೊಳ್ಳಬಹುದು.[ಅಕೌಂಟ್ ಕ್ಲೋಸ್ ಮಾಡುವ ಮುನ್ನ 6 ಅಂಶ ತಲೆಯಲ್ಲಿರಲಿ]

ನಕಲಿ ಪಾನ್ ಕಾರ್ಡ್ ಪಡೆದುಕೊಳ್ಳಲು ಸ್ಟಾಂಪ್ ಸೈಜ್ ಫೋಟೋ ಅಗತ್ಯ, ಜತೆಗೆ ಕಳೆದುಕೊಂಡ ಪಾನ್ ಕಾರ್ಡ್ ಜೆರಾಕ್ಸ್ ಇದ್ದರೆ ಉತ್ತಮ. ನಿಮ್ಮ ಹಿಂದಿನ ಪಾನ್ ಕಾರ್ಡ್ ನಂಬರ್ ಜೆರಾಕ್ಸ್ ಪ್ರತಿಯಲ್ಲಿ ಕಾಣುವಂತಿರಬೇಕಾದ್ದು ಬಹಳ ಮುಖ್ಯ.
ಇದಲ್ಲದೇ ಗುರುತಿನ ಪ್ರಮಾಣಕ್ಕಾಗಿ, ಮತದಾನದ ಗುರುತಿನ ಚೀಟಿ, ಚಾಲನಾ ಪರವಾನಗಿ, ಶಾಲಾ ಪ್ರಮಾಣ ಪತ್ರ, ಪದವಿ ಪ್ರಮಾಣ ಪತ್ರ, ಪಾಸ್ ಪೋರ್ಟ್, ನೀರಿನ ಬಿಲ್ ನಂಥ ದಾಖಲೆಗಳನ್ನು ನೀಡಬೇಕಾಗುತ್ತದೆ. ಗುರುತಿಗೆ ಸಂಬಂಧಿಸಿದ ಚೀಟಿ ಮತ್ತು ವಿಳಾಸ ದೃಢೀಕರಣ ಕ್ಕೆ ಒಂದು ಆಧಾರ ಎರಡನ್ನೂ ನೀಡಬೇಕಾದ್ದು ಕಡ್ಡಾಯವಾಗುತ್ತದೆ.[ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು]
ಯಾವ ದಾಖಲಾತಿಗಳನ್ನು ನೀಡಬಹುದು?
ಮತದಾರರ ಗುರುತಿನ ಚೀಟಿ
ಪಾಸ್ ಪೋರ್ಟ್
ಬ್ಯಾಂಕ್ ಖಾತೆಯ ಟ್ರಾನ್ಸಾಕ್ಷನ್ ವರದಿ
ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್
ರೇಶನ್ ಕಾರ್ಡ್
ದೂರವಾಣಿ ಬಿಲ್
ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಅಧಿಕೃತ ಲೆಟರ್ ಹೆಡ್ ಇರುವ ಪ್ರಮಾಣ ಪತ್ರ
ಆಸ್ತಿ ತೆರಿಗೆಗೆ ಸಂಬಂಧಿಸಿದ ದಾಖಲೆಗಳು
ಅರ್ಜಿದಾರರ ಹೆಸರಿನಲ್ಲಿರುವ ವಿದ್ಯುತ್ ಬಿಲ್
ಒಮ್ಮೆ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಅದನ್ನು ಪಾನ್ ಸರ್ವಿಸ್ ಸೆಂಟರ್ ಗೆ ಕಳುಹಿಸಿಕೊಡಬೇಕಾಗುತ್ತದೆ.


Click it and Unblock the Notifications