ಸೇವಿಂಗ್ ಅಕೌಂಟ್ ಗಿಂತ ಕರೆಂಟ್ ಅಕೌಂಟ್ ಹೇಗೆ ಭಿನ್ನ?

ಬ್ಯಾಂಕ್ ಖಾತೆಗಳ ವಿಧಗಳಲ್ಲಿ ಕರೆಂಟ್ ಅಕೌಂಟ್ ಬಗ್ಗೆ ಕೇಳಿಯೇ ಇರುತ್ತೀರಿ. ನಮ್ಮ ಪ್ರತಿದಿನದ ವ್ಯವಹಾರ ನೋಡಿಕೊಂಡು ಹೋಗಲು ಈ ಕರೆಂಟ್ ಅಕೌಂಟ್ ಸದಾ ನೆರವಾಗುತ್ತದೆ. ಸಾರ್ವಜನಿಕ ವಲಯದ ಅಥವಾ ಖಾಸಗಿ ಬ್ಯಾಂಕ್ ಗಳಲ್ಲಿ ಈ ಬಗೆಯ ಖಾತೆಯನ್ನು ಸುಲಭವಾಗಿ ತೆರೆದು ಪ್ರತಿದಿನದ ಟ್ರಾನ್ಸಾಕ್ಷನ್ ನಿರ್ವಹಿಸಬಹುದು.

ಈ ಅಕೌಂಟ್ ನ ಮುಖ್ಯ ಉದ್ದೇಶವೇ ನಿಮ್ಮ ಬಿಸಿನಸ್ ನ್ನು ಸಮತೋಲಿತವಾಗಿ ನೋಡಿಕೊಳ್ಳುವುದು. ಇಲ್ಲಿ ಹಣಕಾಸು ವಹಿವಾಟು ಮತ್ತು ಹಣ ಪಡೆದುಕೊಳ್ಳುವುದಕ್ಕೆ ಯಾವುದೇ ಇತಿ ಮಿತಿ ಇರುವುದಿಲ್ಲ.[ಅಕೌಂಟ್ ಕ್ಲೋಸ್ ಮಾಡುವ ಮುನ್ನ 6 ಅಂಶ ತಲೆಯಲ್ಲಿರಲಿ]

ಸೇವಿಂಗ್ ಅಕೌಂಟ್ ಗಿಂತ ಕರೆಂಟ್ ಅಕೌಂಟ್ ಹೇಗೆ ಭಿನ್ನ?
Indices

ಕರೆಂಟ್ ಅಕೌಂಟ್ ನ ಮುಖ್ಯ ಲಕ್ಷಣಗಳು
1. ಸಾಮಾನ್ಯವಾಗಿ ಪ್ರತಿದಿನದ ವ್ಯವಹಾರ ಅಥವಾ ಬಿಸಿನಸ್ ನಿರ್ವಹಣೆಗೆ ಈ ಖಾತೆ ತೆರೆಯಲಾಗುತ್ತದೆ.
2. ಮೊದಲು ಕರೆಂಟ್ ಅಕೌಂಟ್ ಗೆ ಬಡ್ಡಿ ನೀಡಲಾಗುತ್ತಿರಲಿಲ್ಲ. ಆದರೆ ಈಗ ಕೆಲ ಬ್ಯಾಂಕ್ ಗಳು ಬಡ್ಡಿ ನೀಡುವಂಥ ಖಾತೆಯನ್ನು ಆರಂಭಿಸಿವೆ.
3. ಗ್ರಾಹಕರಿಂದ ಪಡೆಯು ಅಷ್ಟೂ ಹಣವನ್ನು ಬ್ಯಾಂಕ್ ಕರೆಂಟ್ ಅಕೌಂಟ್ ಖಾತೆದಾರನಿಗೆ ನೇರವಾಗಿ ಪಾವತಿ ಮಾಡುತ್ತದೆ.
4. ಕರೆಂಟ್ ಅಕೌಂಟ್ ಖಾತೆದಾರನಿಗೆ ಓವರ್ ಡ್ರಾಫ್ಟ್ ಸೌಲಭ್ಯವಿರುತ್ತದೆ.
5. ಚೆಕ್ ಪೆಮೆಂಟ್ ಗಳ ವಿಧಾನವು ಸುಲಭವಾಗಿದ್ದು. ಭಾರತದ ಯಾವ ಮೂಲೆಯಲ್ಲಿಯಾದರೂ ಹಣ ಡ್ರಾ ಮಾಡಿಕೊಳ್ಳಬಹುದು.
6.ಸೇವಿಂಗ್ಸ್ ಅಕೌಂಟ್ ಗೆ ಹೋಲಿಕೆ ಮಾಡಿದರೆ ಮಿನಿಮಮ್ ಬ್ಯಾಲೆನ್ಸ್ ನ್ನು ಇಲ್ಲಿ ಜಾಸ್ತಿ ಇಡಬೇಕಾಗುತ್ತದೆ.
7. ಮಿನಿಮಮ್ ಬ್ಯಾಲೆನ್ಸ್ ಇಡುವುದಕ್ಕೆ ಕೆಲ ಶುಲ್ಕಗಳನ್ನು ಭರಿಸಬೇಕಾಗುತ್ತದೆ.[ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?]
8. ನಿಮ್ಮ ಖಾತೆಯ ಮೇಲೆ ಇರುವ ಹಣಕ್ಕೆ ಬ್ಯಾಂಕ್ ವಿಶೇಷ ರೀತಿಯ ಬಡ್ಡಿ ನೀಡುವುದಿಲ್ಲ.
9. ಈಖಾತೆ ಹೊಂದಿರುವವರಿಗೆ ಬ್ಯಾಂಕ್ ಗಳು ನಿಗದಿಗಿಂತ ಹೆಚ್ಚಿನ ಚೆಕ್ ಬುಕ್ ನೀಡುತ್ತವೆ.
10. ಇದು ಯಾವುದೇ ರೀತಿಯ ಉಳಿತಾಯ ಖಾತೆ ಅಲ್ಲ ಎಂಬುದನ್ನು ಗಮನಿಸಿ ವ್ಯವಹಾರ ನಡೆಸಬೇಕಾಗುತ್ತದೆ.

ಉಳಿತಾಯ ಖಾತೆಯ ಮೂಲಕ ನೀವು ವಾಣಿಜ್ಯ ವ್ಯಹಾರ ನಡೆಸುತ್ತಿದ್ದೀರಿ ಎಂಬ ಅನುಮಾನ ಬ್ಯಾಂಕ್ ಗೆ ಉಂಟಾದರೆ ಕರೆಂಟ್ ಅಕೌಂಟ್ ತರೆಯುವಂತೆ ಒತ್ತಾಯ ಮಾಡಬಹುದು.(ಗುಡ್ ರಿಟರ್ನ್ಸ್. ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+