ಆಧಾರ್ ಕಾರ್ಡ್ ಮನೆಗೆ ತಲುಪಿಲ್ಲ ಎಂದು ಈಗ ಚಿಂತೆ ಮಾಡಬೇಕಾಗಿಲ್ಲ. ನಿಮ್ಮ ಆಧಾರ್ ಕಾರ್ಡ್ ಅಪ್ಲಿಕೇಶನ್ ಊರ್ಜಿತವಾಗಿದ್ದರೆ ಆನ್ ಲೈನ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಲು ಏನೇನು ಬೇಕು?
ನೀವು ನೋಂದಣಿ ಮಾಡಿಸಿದ್ದ ವೇಳೆ ನೀಡಿದ್ದ ಸಂಖ್ಯೆ(ಆಧಾರ್ ನಂಬರ್)
ನಿಮ್ಮ ಸಂಪೂರ್ಣ ಹೆಸರು (ಅಕ್ ನಾಲೆಜ್ ಮೆಂಟ್ ನಲ್ಲಿ ಇರುವಂತೆ)
ಪಿನ್ ಕೋಡ್
ಮೊಬೈಲ್ ಸಂಖ್ಯೆ
ನಿಮ್ಮ ಆಧಾರ್ ಕಾರ್ಡ್ ಎನ್ ರೋಲ್ ಮೆಂಟ್ ಸಂಖ್ಯೆ ಬಹಳ ಪ್ರಮುಖವಾಗುತ್ತದೆ. ನೀವು ಆಧಾರ್ ಗೆ ನೋಂದಣಿ ಮಾಡಿದ ದಿನಾಂಕ ಮತ್ತು ಸಮಯವನ್ನು ನೆನಪಿಟ್ಟುಕೊಳ್ಳುವುದು ಉತ್ತಮ.[ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?]
ಇ-ಆಧಾರ್ ಕಾರ್ಡ್ ಸೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
ಹಂತ 1
ಆಧಾರ್ ಕಾರ್ಡ್ ವಿವರ ಪಡೆಯಲು ಸರ್ಕಾರ ತೆರೆದಿರುವ ಅಂತರ್ಜಾಲ ತಾಣಕ್ಕೆ(https://eaadhaar.uidai.gov.in/)ಮೊದಲು ಪ್ರವೇಶ ಪಡೆಯಿರಿ. ಅಲ್ಲಿ ತಿಳಿಸಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಳ್ಳಿ. ಆಧಾರ್ ಕಾರ್ಡ್ ನೋಂದಣಿ ವೇಳೆ ನೀಡಿರುವ ಎನ್ ರೋಲ್ ಮೆಂಟ್ ನಂಬರ್ ಹಾಕಿ. ಉಳಿದಂತೆ ಎಲ್ಲ ಸಂಗತಿಗಳು ಅಂದರೆ ದಿನಾಂಕ, ಸಮಯ, ಪಿನ್ ಕೋಡ್ ಎಲ್ಲವನ್ನು ನಮೂದಿಸಿ.
ಹಂತ 2
ಎಲ್ಲ ಅಂಶಗಳನ್ನು ಸರಿಯಾಗಿ ತುಂಬಿದ ನಂತರ ನಿಮ್ಮ ಮೊಬೈಲ್ ಗೆ ಒಟಿಪಿ ಅಂಕೆಯನ್ನು ಕಳುಹಿಸಿಕೊಡಲಾಗುತ್ತದೆ. ಮುಂದೆ ತಾಣ ಸೂಚಿಸಿದಂತೆ ಈ ಒಟಿಪಿ ಸಂಖ್ಯೆಯನ್ನು ನಮೂದಿಸಬೇಕು.[ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?]
ಹಂತ 3
ಒಟಿಪಿಯ ನೋಂದಣಿ ನಂತರ ನೀವು ಆಧಾರ್ ಕಾರ್ಡ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಪಿಡಿಎಫ್ ಅಥವಾ ಇತರೆ ಫಾರ್ಮೆಟ್ ಗಳ ರೀತಿಯಲ್ಲಿ ಆಧಾರ್ ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ. ಇದನ್ನು ಒರಿಜಿನಲ್ ಆಧಾರ್ ಕಾರ್ಡ್ ರೀತಿಯಲ್ಲಿಯೇ ಬಳಸಬಹುದು.(ಗುಡ್ ರಿಟರ್ನ್ಸ್.ಇನ್)


Click it and Unblock the Notifications