ಹಲವಾರು ಕಾರಣಗಳಿಂದ ನಮ್ಮ ವಾಸ್ತವ್ಯ ಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡದೆ ಮನೆಯನ್ನು ಬದಲಾಯಿಸಿದರೆ ನೀವು ಪಾವತಿ ಮಾಡಿದ ತೆರಿಗೆಯ ಹೆಚ್ಚುವರಿ ಹಣದ ಚೆಕ್ ನಿಮ್ಮ ಹಳೆಯ ವಿಳಾಸಕ್ಕೆ ಹೋಗುವುದು.
ನೀವು ಆ ವಿಳಾಸದಲ್ಲಿ ಇಲ್ಲ ಎಂಬುದು ದೃಢಪಟ್ಟ ಮೇಲೆ ಚೆಕ್ ಮುಂಬೈನ ಕೇಂದ್ರ ಕಚೇರಿಗೆ ವಾಪಸಾಗುವುದು. ಹಾಗಾಗಿ ನೀವು ವಿಳಾಸ ಬದಲಾವಣೆ ತಿಳಿಸುವುದು ಮುಖ್ಯವಾಗುತ್ತದೆ. ಆದರೆ ಚೆಕ್ ವಾಪಸ್ ಹೋದ ಸಂದರ್ಭ ಏನು ಮಾಡಬೇಕು ಎಂಬುದನ್ನು ಅರಿತಿರಬೇಕಾಗುತ್ತದೆ.[ಕೈಗೆ ಸಿಗದ ಚೆಕ್ ನ ಮೊತ್ತ ವಾಪಸ್ ಪಡೆಯೋದು ಹೇಗೆ?]

ನಿಮ್ಮ ಹೊಸ ವಿಳಾಸಕ್ಕೆ ಚೆಕ್ ಬರುವಂತೆ ಮಾಡಲು ಏನು ಮಾಡಬೇಕು?
ನಿಮ್ಮ ವ್ಯಾಪ್ತಿಯ ಆದಾಯ ತೆರಿಗೆ ಇಲಾಖೆ ಅಧಿಕಾರಿಯನ್ನು ಮೊದಲು ಭೇಟಿ ಮಾಡಿ ವಿಳಾಸ ಬದಲಾವಣೆ ಬಗ್ಗೆ ಮಾಹಿತಿ ನೀಡಬೇಕು. ಒಮ್ಮೆ ವಿಳಾಸನ ದಾಖಲಾದ ನಂತರ ಆ ವಿಳಾಸದಿಂದ ಮರುಪಾವತಿಗೆ ಅರ್ಜಿ ದಾಖಲಿಸಬೇಕು. ಇದಾದ ನಂತರದಲ್ಲಿ ನಿಮ್ಮ ಹೊಸ ವಿಳಾಸಕ್ಕೆ ಚೆಕ್ ಬರುತ್ತದೆ.
ಇನ್ನು ಜಾರಿಗೆ ಬರದ ಇಸಿಎಸ್ ಪದ್ಧತಿ
ಇಸಿಎಸ್ ಮಾದರಿಯಲ್ಲಿ ಆದಾಯ ತೆರಿಗೆ ಮರುಪಾವತಿ ವಿಧಾನ ಇನ್ನು ಭಾರತದಲ್ಲಿ ಅನುಷ್ಠಾನಗೊಂಡಿಲ್ಲ. ಸಾಮಾನ್ಯವಾಗಿ ಆದಾಯ ತೆರಿಗೆ ರಿಫಂಡ್ ಚೆಕ್ ಸ್ಪೀಡ್ ಪೋಸ್ಟ್ ಮೂಲಕ ರವಾನೆಯಾಗುತ್ತದೆ.
ಬೆಂಗಳೂರು, ಮುಂಬೈನಂಥ ಮಹಾನಗರದಲ್ಲೂ ರಿಫಂಡ್ ನ್ನು ಚೆಕ್ ಮೂಲಕವೇ ಪಡೆದುಕೊಳ್ಳಲಾಗುತ್ತಿದೆ. ಇನ್ನು ಯಾಕೆ ಇಸಿಎಸ್, ಎನ್ ಇ ಎಫ್ ಟಿ ವಿಧಾನಗಳು ಜಾರಿಯಾಗಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವೂ ಇದೆ.[ಆನುವಂಶಿಕ ಆಸ್ತಿ ಪಡೆವ ಮುನ್ನ ಏಳು ಹೆಜ್ಜೆಗಳು]
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಬದಲಾವಣೆಯಾಗಿದ್ದರೆ ಅದರ ವಿವರವನ್ನು ನೀಡಬೇಕಾದ್ದು ಮುಖ್ಯವಾಗುತ್ತದೆ. ಟಿಡಿಎಸ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಇಲ್ಲವೇ ತಜ್ಞರಿಂದ ಮಾರ್ಗದರ್ಶನ ಪಡೆದುಕೊಂಡರೂ ತಪ್ಪಿಲ್ಲ.
ಕೊನೆ ಮಾತು
ವಿಳಾಸ ಬದಲಾವಣೆಯಾದ ಸಂದರ್ಭದಲ್ಲಿ ಆದಾಯ ತೆರಿಗೆ ರಿಫಂಡ್ ಚೆಕ್ ಪಡೆದುಕೊಳ್ಳುವುದು ಕಷ್ಟಕರವಾದ ಕೆಲಸ. ಆದರೆ ನಿಮಗೆ ಸೇರಬೇಕಾಗಿರುವುದು ದೊಡ್ಡ ಮೊತ್ತದ ಹಣವಾಗಿದ್ದರೆ ಈ ಕೆಲಸಕ್ಕೆ ಕೈ ಹಾಕಬಹುದು.
ನಿಮ್ಮ ಹಿತ ಕಾಯುವ ಅಧಿಕಾರಿ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಇಲಾಖೆಗೆ ಪೂರೈಸಿ, ಹೊಸ ವಿಳಾಸದ ನೋಂದಣಿ ಮಾಡಿಸಿದ ನಂತರ ಚೆಕ್ ಪಡೆದುಕೊಳ್ಳಬಹುದು.(ಗುಡ್ ರಿಟರ್ನ್ಸ್. ಇನ್)


Click it and Unblock the Notifications