ನಿಮಗೆ ಸೇರಿದ ಚೆಕ್ ಬುಕ್ ಕಾಣೆಯಾಗಿರರುತ್ತದೆ. ಈ ಸಂದರ್ಭ ಅದನ್ನು ಬಳಸಿಕೊಂಡೆ ನಿಮಗೆ ವಂಚನೆ ನಡೆಯಬಹುದು ಅಥವಾ ಪೊರ್ಜರಿ ನಡೆಯುವ ಸಾಧ್ಯತೆಯೂ ಇರುತ್ತದೆ. ಇಂಥ ವೇಳೆಯಲ್ಲಿ ಬ್ಯಾಂಕ್ ಕೊಡಮಾಡುವ ಹಣ ಪಾವತಿ ತಡೆ ಸೌಲಭ್ಯ ನಿಮ್ಮ ನೆರವಿಗೆ ಬರುತ್ತದೆ.
ಹಣ ಪಾವತಿ ತಡೆಯುವ ಮೊದಲು ಅಂಥ ಚೆಕ್ ಬ್ಯಾಂಕ್ ಕ್ಲಿಯರೆನ್ಸ್ ಗೆ ಬಂದಿದೆಯೋ? ಇಲ್ಲವೋ? ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ. ಕೆಲ ಪರಿಸ್ಥಿತಿಯಲ್ಲಿ ಹಣ ಪಾವತಿ ತಡೆಯಲು ಬ್ಯಾಂಕ್ ಗೆ ಸಾಧ್ಯವಿರುವುದಿಲ್ಲ.[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]
ಈ ಹಣ ಪಾವತಿ ವಿಧಾನ ತಡೆ ಸೌಲಭ್ಯವನ್ನು ನಿಮಗೆ ನೀಡಲು ಬ್ಯಾಂಕ್ ಕೆಲವೊಂದು ಶುಲ್ಕಗಳನ್ನು ವಿಧಿಸಬಹುದು. ಅದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಮತ್ತು ಎಷ್ಟು ಚೆಕ್ ಗಳಿಗೆ ಹಣ ಪಾವತಿ ತಡೆಯಬೇಕಿದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ಆನ್ ಲೈನ್ ಮೂಲಕ ಹಣ ಪಾವತಿ ತಡೆಯುವ ವಿಧಾನ ಎಸ್ ಬಿಐ ಬ್ಯಾಂಕ್ ನ ಉದಾಹರಣೆಯೊಂದಿಗೆ ಇದನ್ನುನೋಡೊಣ(ಈ ಸೌಲಭ್ಯ ಪಡೆಯಬೇಕಾದರೆ ಮೊದಲು ಬ್ಯಾಂಕ್ ದಾಖಲಾತಿಯಲ್ಲಿ ರಜಿಸ್ಟರ್ ಆಗಿರಬೇಕು)
1. ಮೊದಲು onlinesbi.com ಗೆ ಭೇಟಿ ನೀಡಿ 2. ನಿಮ್ಮ ಪರ್ಸ್ ನಲ್ ಬ್ಯಾಂಕ್ ಖಾತೆಯ ಯೂಸರ್ ನೇಮ್ ಮೂಲಕ ಲಾಗ್ ಇನ್ ಆಗಿ 3. ನಂತರ ಹೋಮ್ ಪೇಜ್ ನಲ್ಲಿ ಇ ಸರ್ವೀಸಸ್ ಟ್ಯಾಬರ್ ಕ್ಲಿಕ್ ಮಾಡಿ 4. ಕೆಳಕ್ಕೆ ಬಂದು ಸ್ಟಾಪ್ ಪೇಮೆಂಟ್ ಐಕಾನ್ ಕ್ಲಿಕ್ ಮಾಡಿ[ಷೇರಲ್ಲಿ ಹಣ ಹೂಡುವ ಮುನ್ನ ಈ 5 ಸಂಗತಿ ತಲೆಯಲ್ಲಿರಲಿ] 5 .ಚೆಕ್ ನಂಬರ್, ದಿನಾಂಕ ಮತ್ತಿತರ ಮಾಹಿತಿಯನ್ನು ಭರ್ತಿ ಮಾಡಿ 6. ಎಚ್ಚರಿಕೆ ಸಂದೇಶಗಳನ್ನು ಓದಿಕೊಳ್ಳಿ 7. ಮಾಹಿತಿಯನ್ನು ಇನ್ನೊಮ್ಮೆ ಪರಿಶೀಲಿಸಿ ಸಬ್ ಮಿಟ್ ಮಾಡಿ(ಗುಡ್ ರಿಟರ್ನ್ಸ್.ಇನ್)