ಪ್ರತಿ ತಿಂಗಳು ನೀವು ಪಾವತಿ ಮಾಡುವ ಬ್ಯಾಂಕ್ ಮರುಪಾವತಿ ಡಿಪಾಸಿಟ್ ಗಳು (ಆರ್ ಡಿ) ನಿಮ್ಮ ಆರ್ಥಿಕ ಸ್ಥಿತಿಗತಿಯ ಸಮತೋಲನಕ್ಕೆ ಕಾರಣವಾಗಬಲ್ಲದು. ಇದು ಉಳಿತಾಯದ ಮನೋಭಾವ ಬೆಳೆಸಿ ಉಳಿಸಲು ನೆರವಾಗುತ್ತದೆ.
ಸುರಕ್ಷಿತ ಮತ್ತು ಅತ್ಯುತ್ತಮ ರಿಟರ್ನ್ಸ್ ಗಳಿಗೆ ಆರ್ ಡಿ ಉತ್ತಮ ಉಪಾಯ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣ ಉಳಿತಾಯ ಮಾಡಿ ಮೊತ್ತಕ್ಕೆ ಅತಿ ಹೆಚ್ಚಿನ ಬಡ್ಡಿ ಪಡೆಯಲು ಆರ್ ಡಿ ಅವಕಾಶ ಮಾಡಿಕೊಡುತ್ತದೆ.[ಭಾರತದಲ್ಲಿರುವ ಬ್ಯಾಂಕ್ ಖಾತೆ ವಿಧಗಳು ಯಾವವು?]

ಬಡ್ಡಿ ದರ ಹೇಗೆ?
ಇಟ್ಟ ಹಣಕ್ಕೆ ಬಡ್ಡಿ ತ್ರೈಮಾಸಿಕ ಲೆಕ್ಕದಲ್ಲಿ ದೊರೆಯುತ್ತದೆ. ತಿಂಗಳಿಗೆ ನೀವು 2 ಸಾವಿರ ರೂ. ಇಡುತ್ತೀರಿ ಎಂದಾದರೆ ಎರಡು ವರ್ಷ ಅಂದರೆ 24 ತಿಂಗಳ ನಂತರ ಶೇ. 8.75ರ ಆಧಾರಲ್ಲಿ ಬಡ್ಡಿ ದೊರೆಯುತ್ತದೆ.
ಮೊದಲ ತಿಂಗಳ ಎರಡು ಸಾವಿರ ರೂ, ಗೆ 24 ತಿಂಗಳ ಲೆಕ್ಕದಲ್ಲಿ ಬಡ್ಡಿ ನೀಡಲಾಗುತ್ತದೆ. ನಂತರ ಅಂದರೆ ಎರಡನೇ ತಿಂಗಳ ಮೊತ್ತ ನಾಲ್ಕು ಸಾವಿರ ರೂ.ಗೆ 23 ತಿಂಗಳ ಲೆಕ್ಕಕ್ಕೆ ಬಡ್ಡಿ ನೀಡಲಾಗುತ್ತದೆ. ಮೊತ್ತ ಹೆಚ್ಚಿದಂತೆ ಅವಧಿಯೂ ಕಡಿಮೆಯಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳಬೇಕಾಗುತ್ತದೆ.
ತೆರಿಗೆ ಸಂಬಂಧ
ಆರ್ ಡಿ ಮೂಲಕ ದೊರೆಯುವ ಬಡ್ಡಿ ತೆರಿಗೆ ಮುಕ್ತವಾಗಿಲ್ಲ. ಅತಿ ಕಡಿಮೆ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಪಾಲಿಸಿ ಅತ್ಯುತ್ತಮ. ಅತಿಹೆಚ್ಚು ಅಂದರೆ ಶೇ. 20 ರಿಂದ 30ರಷ್ಟು ಅತಿ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುವವರಿಗೆ ಇದು ಯೋಗ್ಯವಾಗಲ್ಲ. ಹಣದ ಉಳಿತಾಯ ಮಾಡಬಹುದೇ ವಿನಃ ತೆರಿಗೆಯಿಂದ ಮುಕ್ತವಾಗಲು ಸಾಧ್ಯಯವಿಲ್ಲ. ಆದರೆ ತೆರಿಗೆ ಕಟ್ಟುವ ಪ್ರಮಾಣ ಕಡಿಮೆಯಾಗುತ್ತದೆ ಅಷ್ಟೆ.[ನಿಮಗೆ ಗೊತ್ತಿರದ ತೆರಿಗೆ ವಿನಾಯಿತಿ ತಂತ್ರಗಳು]
ಖಾಸಗಿ ಬ್ಯಾಂಕ್ ಗಳು ನೀಡುವ ಅತಿ ಹೆಚ್ಚಿನ ಬಡ್ಡಿ ದರ
ಸಿಟಿ ಯುನಿಯನ್ ಬ್ಯಾಂಕ್, ಲಕ್ಷ್ಮೀ ವಿಲಾಸ್ ಬ್ಯಾಂಕ್ ಗಳು ಶೇ.9 ಬಡ್ಡಿ ನೀಡುತ್ತವೆ. 1-5 ವರ್ಷದ ಅವಧಿಯ ಆರ್ ಡಿ ಖಾತೆಗೆ ಈ ಪ್ರಮಾಣದಲ್ಲಿ ಬಡ್ಡಿ ನೀಡುತ್ತವೆ.
ಡೆವಲಪ್ ಮೆಂಟ್ ಕ್ರೆಡಿಟ್ ಬ್ಯಾಂಕ್
ಒಂದು ವರ್ಷದ ಅವಧಿಗೆ ಬ್ಯಾಂಕ್ ಶೇ. 9 ಬಡ್ಡಿ ದರ ನೀಡುತ್ತದೆ. ಎರಡು ಮತ್ತು ಮೂರನೇ ವರ್ಷದ ಅವಧಿಗೆ ಮುಂದುವರಿಸಿದರೆ ಶೇ. 9.20 ಬಡ್ಡಿ ನೀಡಲು ಹಿಂಜರಿಯುವುದಿಲ್ಲ. 4-5 ವರ್ಷದ ಅವಧಿಗೆ ಶೇ. 9.10 ಬಡ್ಡಿ ದರ ನೀಡುತ್ತದೆ.
ಎಚ್ ಡಿಎಫ್ ಸಿ ಬ್ಯಾಂಕ್
ಖಾಸಗಿ ವಲಯದ ಮುಖ್ಯ ಬ್ಯಾಂಕ್ ಶೇ. 8.75 ಬಡ್ಡಿ ದರ ನೀಡುತ್ತಿದೆ. ಆರ್ ಡಿ ಯೋಜನೆ ಅಡಿಯಲ್ಲಿ 12 ತಿಂಗಳುಗಳಿಂದ 60 ತಿಂಗಳವರೆಗೆ ತೊಡಗಿಸುವ ಹಣಕ್ಕೆ ಬಡ್ಡಿ ನೀಡುತ್ತದೆ.
ಐಸಿಐಸಿಐ ಬ್ಯಾಂಕ್
ಈ ಬ್ಯಾಂಕ್ ಸಹ ಒಂದು ಜನರ ಅಗತ್ಯಕ್ಕೆ ತಕ್ಕಂತೆ ಆರ್ ಡಿ ಯೋಜನೆಯನ್ನು ಒದಗಿಸಿದೆ. 15 ತಿಂಗಳುಗಳಿಂದ 60 ತಿಂಗಳವರೆಗೆ ತೊಡಗಿಸುವ ಹಣಕ್ಕೆ ಬಡ್ಡಿ ನೀಡುತ್ತದೆ.
ಏಕ್ಸಿಸ್ ಬ್ಯಾಂಕ್
ಏಕ್ಸಿಸ್ ಬ್ಯಾಂಕ್ ಶೇ, 8.90 ದರದಲ್ಲಿ ಬಡ್ಡಿ ನೀಡುತ್ತಿದೆ. ಇದು 18 ರಿಂದ 36 ತಿಂಗಳುಗಳ ಅವಧಿಯ ಆರ್ ಡಿ ಯೋಜನೆಗಳಿಗೆ ಉತ್ತಮ ದರ ನಿಗದಿಪಡಿಸಿದೆ. ಆರಂಭದಲ್ಲಿ ಕನಿಷ್ಠ 1 ಸಾವಿರ ರೂ. ಇಡಬೇಕಾಗಿದ್ದು ನಂತರ ಅದರಂತೆ ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. (ಗುಡ್ ರಿಟರ್ನ್ಸ್.ಇನ್)


Click it and Unblock the Notifications