ಭಾರತದ ಚಿನ್ನದ ದರ ಬದಲಾವಣೆ ಹಿಂದಿನ ರಹಸ್ಯವೇನು?

ಇದಕ್ಕಿದ್ದಂತೆ 30 ಸಾವಿರ ಇದ್ದ ಚಿನ್ನದ ದೆರ ದಿಢೀರ್ ಎಂದು 27 ಸಾವಿರಕ್ಕೆ ಕುಸಿದು ಬಿಡುತ್ತದೆ. ಇಲ್ಲವೇ 25 ಸಾವಿರ ಇದ್ದದ್ದು 27 ಸಾವಿರಕ್ಕೆ ನೆಗೆಯುತ್ತದೆ. ಇದಕ್ಕೆ ಕಾರಣ ಏನು? ಎಂಬುದು ಮೇಲ್ನೋಟಕ್ಕೆ ನಮಗೆ ಗೊತ್ತಾಗುವುದಿಲ್ಲ. ಭಾರತದಲ್ಲಿ ಚಿನ್ನದ ದರ ಬದಲಾವಣೆ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ.

ಪ್ರಮುಖವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಮತ್ತು ಇಳಿಕೆ ಹಾಗೂ ಭಾರತದ ರೂಪಾಯಿ ಮೌಲ್ಯ ಚಿನ್ನದ ದರ ನಿರ್ಧರಿಸಲು ಕಾರಣವಾಗುತ್ತದೆ. ಇವೆಲ್ಲ ಅಂಶಗಳನ್ನು ಒಮ್ಮೆ ನೋಡುವುದು ಉತ್ತಮ.(ಗುಡ್ ರಿಟರ್ನ್ಸ್.ಇನ್)[ಬಂಗಾರ ಖರೀದಿ ಬೇಡ ಎನ್ನಲೂ ಇದೆ ಕಾರಣ]

ಅಂತಾರಾಷ್ಟ್ರೀಯ ಮಾರುಕಟ್ಟೆ

ಅಂತಾರಾಷ್ಟ್ರೀಯ ಮಾರುಕಟ್ಟೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾದರೆ ಭಾರತದಲ್ಲೂ ಏರಿಕೆಯಾಗುತ್ತದೆ. ಭಾರತ ತನಗೆ ಬೇಕಾದ ಬಹುತೇಕ ಚಿನ್ನವನ್ನು ಆಮದು ಮಾಡಿಕೊಳ್ಳುವುದೇ ಇದಕ್ಕೆ ಮುಖ್ಯ ಕಾರಣ[ಚಿನ್ನದ ಮೇಲಿನ ಹೂಡಿಕೆ ನಿಜಕ್ಕೂ ಲಾಭದಾಯಕವೇ?]

ಡಾಲರ್ ನೊಂದಿಗೆ ಚಿನ್ನದ ಸಂಬಂಧ

ಡಾಲರ್ ನೊಂದಿಗೆ ಚಿನ್ನದ ಸಂಬಂಧ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿದರೆ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಇವು ಒಂದಕ್ಕೊಂದು ಪೂರಕ ರೀತಿಯಲ್ಲಿ ಕೆಲಸ ಮಾಡುತ್ತವೆ.[ನಾಲ್ಕು ಅತ್ಯುತ್ತಮ ಚಿನ್ನ ಉಳಿತಾಯ ಯೋಜನೆಗಳು]

ಆಭರಣ ಚಿನ್ನಕ್ಕೂ, ಶುದ್ಧ ಚಿನ್ನಕ್ಕೂ ಏನು ಸಂಬಂಧ?

ಆಭರಣ ಚಿನ್ನಕ್ಕೂ, ಶುದ್ಧ ಚಿನ್ನಕ್ಕೂ ಏನು ಸಂಬಂಧ?

ಆಭರಣ ಚಿನ್ನದ ಬೆಲೆಗೂ, ಶುದ್ಧ ಚಿನ್ನದ ಮೇಲಿನ ಹೂಡಿಕೆಗೂ ವ್ಯತ್ಯಾಸಗಳಾಗುತ್ತವೆ. ಚಿನ್ನದ ವಹಿವಾಟು ದರ ನಿರ್ಧರಿಸುವಲ್ಲಿ ಶುದ್ಧ ಚಿನ್ನ ಪ್ರಮುಖ ಪಾತ್ರ ನಿರ್ವಹಿಸುತ್ತದೆ.[ಎಸ್ ಬಿಐ ಗೋಲ್ಡ್ ಡಿಪಾಸಿಟ್ ಯೋಜನೆಯ 6 ಲಾಭ]

ಚಿನ್ನ ಆಮದು ಮೇಲಿನ ತೆರಿಗೆ ನೀತಿ

ಚಿನ್ನ ಆಮದು ಮೇಲಿನ ತೆರಿಗೆ ನೀತಿ

ಚೀನಾ ಮತ್ತು ಭಾರತ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತವೆ. ಸರ್ಕಾರ ಆಮದು ಸುಂಕ ಹೆಚ್ಚು ಮಾಡಿದರೆ ದರದಲ್ಲೂ ಏರಿಕೆ ಕಂಡುಬರುವುದು ಸಾಮಾನ್ಯ.[ಭಾರತದಲ್ಲಿ ಚಿನ್ನಾಭರಣ ಪರಿಶುದ್ಧತೆ ಅಳೆಯುವುದು ಹೇಗೆ?]

ರೂಪಾಯಿ ಮತ್ತು ಚಿನ್ನ

ರೂಪಾಯಿ ಮತ್ತು ಚಿನ್ನ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ ಚಿನ್ನದ ದರದಲ್ಲಿ ಏರಿಕೆ ಕಂಡುಬರುತ್ತದೆ. ಈ ಬಗೆಯ ಬೆಳವಣಿಗೆ ಪ್ರತಿದಿನ ಕಂಡುಬರುತ್ತಿದೆ. ರೂಪಾಯಿ ಕೊಂಚ ಇಳಿಕೆ ಕಂಡರೂ ಚಿನ್ನದ ಬೆಲೆಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬರಬಹುದು.

ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೂ ಕಣ್ಣಿಡಿ

ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೂ ಕಣ್ಣಿಡಿ

ಡಾಲರ್ ಎದುರು ರೂಪಾಯಿ ಮೌಲ್ಯ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ ಮೇಲೆ ಒಂದು ಚಿಕ್ಕ ಸಂಶೋಧನೆಯನ್ನು ಸದಾ ನಡೆಸುತ್ತಿರಬೇಕು. ಇದಕ್ಕೆ ಪೂರಕವಾದ ಅಂಶಗಳತ್ತನೂ ಗಮನ ಹರಿಸಬೇಕು.

ಚಿನ್ನ ಖರೀದಿಗೆ ಮುನ್ನ

ಚಿನ್ನ ಖರೀದಿಗೆ ಮುನ್ನ

ನೀವು ಆಭರಣ ಖರೀದಿ ಮಾಡುತ್ತಿರೋ ಅಥವಾ ಶುದ್ಧ ಚಿನ್ನ ಖರೀದಿಸಿಸುತ್ತಿರೋ, ಒಟ್ಟಿನಲ್ಲಿ ಮೇಲಿನ ಎಲ್ಲ ಸಂಗತಿಗಳನ್ನು ಒಮ್ಮೆ ಅವಲೋಕಿಸಿ ಹೆಜ್ಜೆ ಇಡುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+