ಚಾಲ್ತಿಯಲ್ಲಿ ಇಲ್ಲದ ಷೇರುಗಳನ್ನು ಮಾರಾಟ ಮಾಡಬಹುದೆ?

90 ರ ದಶಕದ ಮಧ್ಯಭಾಗದಲ್ಲಿ ಚಾಲ್ತಿಯಲ್ಲಿದ್ದ ಬಹುತೇಕ ಷೇರುಗಳನ್ನು ಇಂದು ಕೇಳುವವರೇ ಇಲ್ಲವಾಗಿದ್ದಾರೆ. ಕೆಲವುಗಳ ಜೀವಿತಾವಧಿಯೂ ಮುಕ್ತಾಯದ ಹಂತಕ್ಕೆ ಬಂದಿದೆ.

ಇದರಲ್ಲಿ ಕೆಲವೊಂದನ್ನು ಪೆನ್ನಿ ಸ್ಟಾಕ್ ಎಂಬ ಹೆಸರಿನಲ್ಲಿಯೂ ಕರೆಯಲಾಗುತ್ತಿದೆ. ಹಲವು ಷೇರುಗಳ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ. ಉದಾಹರಣೆಗೆ ಒಂದು ಕಾಲ ಹೂಡಿಕೆದಾರರ ಪ್ರೀತಿಗೆ ಪಾತ್ರವಾಗಿದ್ದ ಪೆಂಟ್ರಾ ಮೀಡಿಯಾ ಗ್ರಾಫಿಕ್ಸ್ ಇಂದು 0.71 ಕ್ಕೆ ಮಾರಾಟವಾಗುತ್ತಿದೆ.[ಹೊಸ ಹೂಡಿಕೆದಾರ ಮಾಡುವ ತಪ್ಪುಗಳು ಯಾವವು?]

ಚಾಲ್ತಿಯಲ್ಲಿ ಇಲ್ಲದ ಷೇರುಗಳನ್ನು ಮಾರಾಟ ಮಾಡಬಹುದೆ?

ಹಾಗಾದರೆ ನಿಮ್ಮ ಬಳಿ ಇಂಥ ಷೇರುಗಳಿದ್ದರೆ ಹೇಗೆ ಮಾರಾಟ ಮಾಡಬೇಕು? ಅಥವಾ ವ್ಯವಹಾರ ನಡೆಸಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ.

* ನಿಮ್ಮ ಷೇರುಗಳನ್ನು ಕೊಂಡುಕೊಳ್ಳಲು ಮಾರುಕಟ್ಟೆಯಲ್ಲಿ ಯಾರಾದರೂ ಸಿಗುತ್ತಾರೆಯೇ ಎಂದು ಕಾಯುವುದು ಒಂದು ವಿಧಾನ. ನಿಮ್ಮ ಬಳಿ ಇರುವ ಷೇರುಗಳು ವ್ಯಾಪಾರ ಪಟ್ಟಿಯಲ್ಲಿ ಬರುವ ಸಂಭವವಿದೆಯೇ ಅಥವಾ ಬಂದಿದೆಯೇ ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕಿ ಇಟ್ಟುಕೊಳ್ಳಬೇಕು.[ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಷೇರುಗಳ ಬಗ್ಗೆ ತಿಳಿದುಕೊಳ್ಳಿ]

* ಮಾರುಕಟ್ಟೆಯ ಹೊರಗೆ ನಿಂತೂ ಯೋಚನೆ ಮಾಡಬೇಕಾಗುತ್ತದೆ. ಯಾರಾದರೂ ಈ ಬಗೆಯ ಷೇರುಗಳ ಹುಡುಕಾಟದಲ್ಲಿ ಇದ್ದಾರೆಯೇ ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ.
* ಸಾಮಾನ್ಯವಾಗಿ ಮಾರುಕಟ್ಟೆಯ ಪಟ್ಟಿಯಿಂದ ಹೊರಕ್ಕೆ ಬಿದ್ದಿರುವ ಷೇರುಗಳನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಈ ಸಂದರ್ಭ ನೀವು ಷೇರು ಹೊಂದಿರುವ ಕಂಪನಿಗೆ ಪತ್ರವೊಂದನ್ನು ಬರೆದು ಯಾಕೆ ಹೀಗೆ ಆಗುತ್ತಿದೆ? ಎಂದು ಪ್ರಶ್ನೆ ಮಾಡಿ ಉತ್ತರ ಕೇಳಬಹುದು.* ಇವೆಲ್ಲ ಕೇವಲ ಒಂದು ತಾತ್ಕಾಲಿಕ ಪರಿಹಾರವಾಗಬಲ್ಲದು. ಶಾಶ್ವತ ಪರಿಹಾರದ ನಿಟ್ಟಿನಲ್ಲೂ ಯೋಚಿಸಬೇಕಾಗುತ್ತದೆ.
* ನೀವು ಹೂಡಿಕೆ ಮಾಡಿದ ಹಣ ಯಾವ ಪ್ರಮಾಣದ್ದು ಎಂಬುದರ ಮೇಲೆ ಷೇರುಗಳಲ್ಲಿ ನಿಮಗಾಗುವ ನಷ್ಟ ಲೆಕ್ಕ ಹಾಕಿಕೊಳ್ಳಬಹುದು.
* ನಿಮ್ಮ ಬಳಿ ಇರುವ ಹಳೆಯ ಷೇರುಗಳು ಪಟ್ಟಿಯಲ್ಲಿ ಯಾವಾಗ ಬರುತ್ತವೆ ಎಂದು ಸದಾ ಮಾರುಕಟ್ಟೆ ಅಪ್ ಡೇಟ್ ಮಾಡಿಕೊಳ್ಳುತ್ತಿರುವುದು. ಇಲ್ಲವೇ ಹೊರತಗಿನಿಂದ ಖರೀದಿದಾರರನ್ನು ಸ್ವತಃ ನೀವೆ ಹುಡುಕುವುದು ಇಂಥ ಕ್ರಮಗಳ ಮೂಲಕ ಅಪಾರ ನಷ್ಟವಾಗುವುದನ್ನು ತಪ್ಪಿಸಿಕೊಳ್ಳಬಹುದು.

ಕೊನೆ ಮಾತು:
ನೀವು ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡುವುದು ಇದೆ ಕಾರಣಕ್ಕೆ. ಚಾಲ್ತಿಯಲ್ಲಿ ಇಲ್ಲದ ಇಂಥ ಷೇರುಗಳನ್ನು ಖರೀದಿ ಮಾಡಿ ಕಾಲ ಮಿಂಚಿ ಹೋಗಿದ್ದರೆ ಪರ್ಯಾಯ ಕ್ರಮ ಅನುಸರಿಸುವುದು ಸೂಕ್ತ. (ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+