ಸಾಲ ಮತ್ತು ಓವರ್ ಡ್ರಾಫ್ಟ್ ನಡುವಿನ ವ್ಯತ್ಯಾಸಗಳೇನು?

ನೀವು ಬ್ಯಾಂಕಿನಿಂದ ಯಾವುದೇ ಬಗೆಯಲ್ಲಿ ಹಣ ಪಡೆದುಕೊಳ್ಳುವುದಕ್ಕಿಂತ ಮುನ್ನ ಸಾಲ ಮತ್ತು ಓವರ್ ಡ್ರಾಫ್ಟ್[ಓಡಿ] ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ.

ಲೋನ್ ಮತ್ತು ಓವರ್ ಡ್ರಾಫ್ಟ್ ಎರಡು ಶಬ್ದಗಳು ಎಲ್ಲರಿಗೂ ತಿಳಿದಿದ್ದೇ ಆದರೂ ಅವುಗಳ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ.[ದೇಶದ ಶೇ. 70 ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಇಲ್ಲ!]

ಸಾಲ ಮತ್ತು ಓವರ್ ಡ್ರಾಫ್ಟ್ ನಡುವಿನ ವ್ಯತ್ಯಾಸಗಳೇನು?

ಕರೆಂಟ್ ಖಾತೆ ಹೊಂದಿರುವ ಅನೇಕ ವಾಣಿಜ್ಯೋದ್ಯಮಿಗಳು ಓಡಿ ಅಥವಾ ಸಾಲವನ್ನು ಸದಾ ಪಡದುಕೊಳ್ಳುತ್ತಿರುತ್ತಾರೆ, ಹಾಗಾದರೆ ಇವೆರಡರ ನಡುವಿನ ವ್ಯತ್ಯಾಸ ನೋಡಿಕೊಂಡು ಬರೋಣ....

* ಓವರ್ ಡ್ರಾಫ್ಟ್ ಎಂದರೆ ವ್ಯಕ್ತಿ ಅಥವಾ ಕಂಪನಿ ಬ್ಯಾಂಕ್ ನಲ್ಲಿ ಹೊಂದಿರುವ ಫಿಕ್ಸೆಡ್ ಡಿಪಾಸಿಟ್ ನ ಮೇಲೆ ನೀಡುವ ಕ್ರೆಡಿಟ್ ಮೊತ್ತ. ಲೋನ್ ಅಥವಾ ಸಾಲ ಅಂದರೆ ಬ್ಯಾಂಕ್ ನೇರವಾಗಿ ನೀಡುವ ಹಣದ ಮೊತ್ತ.

* ನಿಮ್ಮ ಖಾತೆಯಲ್ಲಿರುವ ಹಣದ ಮೊತ್ತಕ್ಕೆ ಲೆಕ್ಕಹಾಕಿ ಓಡಿ ನೀಡಲಾಗುವುದು. ಇಲ್ಲಿ ನೀವು ಹೆಚ್ಚುವರಿ ಮೊತ್ತಕ್ಕೆ ಮಾತ್ರ ಬಡ್ಡಿ ನೀಡಿದರೆ ಸಾಕಾಗುತ್ತದೆ.

ಸಾಲ ಪಡೆದುಕೊಂಡರೆ ತೆಗೆದುಕೊಂಡ ಅಷ್ಟೂ ಹಣಕ್ಕೆ ಬಡ್ಡಿ ಕಟ್ಟಬೇಕಾಗುತ್ತದೆ. ಅಲ್ಲದೇ ಸಾಲ ಪಡೆಯಲು ಕೆಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.[ಸೇವಾ ತೆರಿಗೆ-ಸೇವಾ ಶುಲ್ಕದ ನಡುವಿನ ವ್ಯತ್ಯಾಸವೇನು?]

* ಸಾಮಾನ್ಯವಾಗಿ ಓಡಿಯನ್ನು ಕಡಿಮೆ ಅವಧಿಗೆ ತೆಗೆದುಕೊಳ್ಳಲಾಗುತ್ತದೆ. ಗ್ರಾಹಕ ಮತ್ತು ಸಂಬಂಧಿಸಿದ ಬ್ಯಾಂಕ್ ನ ನಡುವೆ ಮೌಖಿಕ ಒಪ್ಪಂದ ಇರುತ್ತದೆ.
ಸಾಲ ದೀರ್ಘಾವಧಿಗೆ ಸಂಬಂಧಿಸಿದ್ದಾಗಿದ್ದು 3 ರಿಂದ 25 ವರ್ಷ ಅವಧಿಗೂ ಇರಬಹುದು.

* ಓಡಿ ಪಡೆದುಕೊಳ್ಳುವುದು ಸುಲಭ, ಇದಕ್ಕೆ ಕಡಿಮೆ ದಾಖಲೆ ಪತ್ರಗಳು ಸಾಕಾಗುತ್ತವೆ.
ಆದರೆ ಸಾಲ ಪಡೆದುಕೊಳ್ಳುವುದಕ್ಕೆ ಸಾಕಷ್ಟು ದಾಖಲೆ ಹಾಜರು ಪಡಿಸಬೇಕು. ಅಲ್ಲದೇ ಜಾಮೀನನನ್ನು ಕೇಳಲಾಗುತ್ತದೆ.

* ಓಡಿಯ ಮರುಪಾವತಿ ಮೊತ್ತ ದೊಡ್ಡದಾಗಿರುತ್ತದೆ. ಅಲ್ಲದೇ ಯಾವುದೇ ಸಂದರ್ಭದಲ್ಲಿ ಅಷ್ಟೂ ಹಣ ನೀಡಿ ಎಂದು ಬ್ಯಾಂಕ್ ಕೇಳಬಹುದು. ಆದರೆ ಸಾಲ ಪಡೆದುಕೊಂಡಿದ್ದರೆ ಕಂತಿನ ಆಧಾರದಲ್ಲಿ ಸಾಲ ಮರುಪಾವತಿ ಮಾಡಲಾಗುವುದು. ನಿಗದಿತ ವೇಳೆಗೆ ನಿರ್ದಿಷ್ಟ ಮೊತ್ತ ತುಂಬಬೇಕಾಗುತ್ತದೆ.

ಕೊನೆ ಮಾತು: ತುರ್ತು ಸಂದರ್ಭದಲ್ಲಿ ಓಡಿ ಪಡೆದುಕೊಳ್ಳಬಹುದು. ಕಡಿಮೆ ಮೊತ್ತದ ಹಣವನ್ನು ಈ ಆಧಾರದಲ್ಲಿ ಪಡೆದುಕೊಳ್ಳಲು ಅಡ್ಡಿಯಿಲ್ಲ.(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+