ಬೆಂಗಳೂರು, ಆಗಸ್ಟ್ 07: ಚಿನ್ನಾ,, ಚಿನ್ನದ ದರ ಕುಸಿಯುತ್ತಿದೆ. ಈಗಲೇ ಆಭರಣ ಅಂಗಡಿಗೆ ಲಗ್ಗೆ ಇಡೋಣ, ಅಯ್ಯೋ ಇನ್ನೊಂದು ಸ್ವಲ್ಪ ದಿನ ಕಾಯಿರಿ, ಮತ್ತೂ ಕೆಳಕ್ಕೆ ಬರುತ್ತದೆ. ಒಂದಷ್ಟು ಹಣ ಬಂಗಾರದ ಮೇಲೆ ಹೂಡಿಕೆ ಮಾಡೋದೆ... ಈ ಬಗೆಯ ಮಾತುಗಳೇ ಸದ್ಯ ಚಾಲ್ತಿಯಲ್ಲಿರುವುದು.
ಹೌದು... ಚಿನ್ನದ ದರ ನಾಲ್ಕು ವರ್ಷ ಹಿಂದಿನ ಬೆಲೆಗೆ ಕುಸಿದಿದೆ. ಚಿನ್ನ ಏರಿಕೆಯಾಗಲು ಹೇಗೆ ಕಾರಣಗಳಿರುತ್ತವೆಯೋ ಹಾಗೆ ಇಳಿಕೆಗೂ ಕೂಡ. ಅಷ್ಟಕ್ಕೂ ದಿನೇ ದಿನೇ ಚಿನ್ನ ತನ್ನ ಬೆಲೆ ಕಳೆದುಕೊಳ್ಳುತ್ತಿರುವುದು ಏಕೆ? ಇಲ್ಲಿದೆ ಕಾರಣಗಳ ಪಟ್ಟಿ....
ಇಂದಿನ ನಿಮ್ಮ ನಗರದ ಚಿನ್ನದ ದರ ನೋಡಿ
ಚಿನ್ನ ಆಮದಿಗೆ ಬಿತ್ತು ಬ್ರೇಕ್
ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡ ಕಠಿಣ ಕ್ರಮಗಳು ಹೊರದೇಶಗಳಿಂದ ಚಿನ್ನ ಆಮದಾಗುತ್ತಿದ್ದುದನ್ನು ಸಂಪೂರ್ಣವಾಗಿ ತಡೆದವು.
ದೇಶಿಯ ಮಾರುಕಟ್ಟೆ
ವರ್ಷದ ಆರಂಭದಲ್ಲಿ ಚಿನ್ನದ ಮೇಲೆ ಬಹುದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುತ್ತಿತ್ತು. ಚೀನಾ ನಂತರದ ಸ್ಥಾನ ಭಾರತಕ್ಕೆ ಇತ್ತು. ಆದರೆ ಏಕಾಏಕಿ ದೇಶಿಯ ಬಂಡವಾಳದಾರರು ಶುದ್ಧ ಚಿನ್ನವನ್ನು ಬಿಟ್ಟು ಬೇರೆಡೆ ಮುಖ ಮಾಡಿದರು.
ಮಾನ್ಸೂನ್ ಮಾರುತಗಳು
ಮಾನ್ಸೂನ್ ಮಾರುತಗಳು ಸರಿಯಾದ ಮಳೆ ಸುರಿಸಲಿಲ್ಲ. ಬೆಳೆಯನ್ನು ನಂಬಿಕೊಂಡಿದ್ದ ರೈತರು ಚಿನ್ನ ಖರೀದಿಯತ್ತ ಮುಖ ಹಾಕಿಯೂ ಬರಲಿಲ್ಲ. ಗ್ರಾಮೀಣ ಭಾಗದ ಜನರು ಚಿನ್ನದ ಮೋಹದಿಂದ ದೂರವೇ ಉಳಿದರು.
ಚಿನ್ನ ಹೊರಹಾಕಿದ ಚೀನಾ
ಇದ್ದಕ್ಕಿದ್ದಂತೆ ಚೀನಾ ಬಹಳ ದೊಡ್ಡ್ ಪ್ರಮಾಣದಲ್ಲಿ ಚಿನ್ನವನ್ನು ಮಾರುಕಟ್ಟೆಗೆ ಬಬಿಡುಗಡೆ ಮಾಡಿತು. ಶಾಂಘೈ ಮಾರುಕಟ್ಟೆಯಲ್ಲಿ ಆಗಸ್ಟ್ 3 ರಂದು ಒಂದೇ ದಿನ 33 ಟನ್ ಚಿನ್ನ ಮಾರಾಟವಾಗಿತ್ತು.
ಶಕ್ತಿಶಾಲಿಯಾದ ಡಾಲರ್
ಡಾಲರ್ ತನ್ನ ಮೌಲ್ಯ ವೃದ್ಧಿ ಮಾಡಿಕೊಂಡ ಪರಿಣಾಮ ಇತರೇ ಕರೆನ್ಸಿ ಇರುವವರು ಹೂಡಿಕೆ ಮಾಡಲು ಹಿಂದೆ ಸರಿದರು. ಡಾಲರ್ ಗೆ ಹೊಂದಾಣಿಕೆ ಮಾಡಿಕೊಂಡು ಚಿನ್ನ ಖರೀದಿ ದುಬಾರಿಯಾಗಿ ಪರಿಣಮಿಸಿತು.
ಅಮೆರಿಕ ಫೆಡರಲ್ ಬ್ಯಾಂಕ್ ನೀತಿ
ಅಮೆರಿಕದ ಫೆಡರಲ್ ಬ್ಯಾಂಕ್ ನೀತಿಗಳು, ಬಡ್ಡಿ ದರ ಏರಿಕೆ ಮತ್ತು ಇಳಿಕೆ ಜನರಲ್ಲಿ ಆತಂಕ, ದುಗುಡ ಹುಟ್ಟುಹಾಕಿತ್ತು. ಇಡೀ ಪ್ರಪಂಚದ ಮಾರುಕಟ್ಟೆ ಮೇಲೆಯೇ ಫೆಡರಲ್ ಬ್ಯಾಂಕ್ ಪರಿಣಾಮ ಉಂಟುಮಾಡಿತು.
ಅಸ್ಥಿರ ಅಂತಾರಾಷ್ಟ್ರೀಯ ಕಮಾಡಿಟಿ ಮಾರುಕಟ್ಟೆ
ಗ್ರೀಸ್ ದಿವಾಳಿತನ, ಯುದ್ಧ, ತೈಲ ದರ ಇರಿಕೆ, ಒಪ್ಪಂದಗಳು ಮುಂದಾದ ಬದಲಾವಣೆ ಚಿನ್ನದ ದರದ ಮೇಲೆ ಪರಿಣಾಮ ಬೀರಿದವು.
ಹಿಂದೆ ಸರಿದ ಬ್ಯಾಂಕ್ ಗಳು
ಚಿನ್ನದ ದರದ ಮೇಲಿನ ವ್ಯತ್ಯಾಸ ಗಮನಿಸಿದ ಪ್ರಮುಖ ಬ್ಯಾಂಕ್ ಗಳು ಖರೀದಿಯಿಂದ ಹಿಂದೆ ಸರಿದವು. ಚಿನ್ನದ ಮೇಲಿನ ಸಾಲ ನೀಡಿಕೆ ಮೌಲ್ಯವೂ ಕುಸಿಯಿತು.
ಹಿಂದೆ ಸರಿದ ಬ್ಯಾಂಕ್ ಗಳು
ಚಿನ್ನದ ದರದ ಮೇಲಿನ ವ್ಯತ್ಯಾಸ ಗಮನಿಸಿದ ಪ್ರಮುಖ ಬ್ಯಾಂಕ್ ಗಳು ಖರೀದಿಯಿಂದ ಹಿಂದೆ ಸರಿದವು. ಚಿನ್ನದ ಮೇಲಿನ ಸಾಲ ನೀಡಿಕೆ ಮೌಲ್ಯವೂ ಕುಸಿಯಿತು.
ಹೂಡಿಕೆ ಕ್ಷೇತ್ರ ಬದಲಾವಣೆ
ಶುದ್ಧ ಚಿನ್ನದ ಮೇಲೆ ಹೂಡಿಕೆ ಮಾಡುವವರು ಚಿನ್ನದ ಪತ್ರದ ಮೇಲೆ ಹೂಡಿಕೆಗೆ ಮುಂದಾದರು. ಅಲ್ಲದೇ ಷೇರು ಮಾರುಕಟ್ಟೆ ಮತ್ತು ಇತರೆ ಬಂಡವಾಳ ಹೂಡಿಕೆ ತಾಣದತ್ತ ಜನರು ಒಲವು ತೋರಿಸಿದ್ದು ಚಿನ್ನದ ದರ ಇಳಿಕೆ ಮೇಲೆ ಪರಿಣಾಮ ಬೀರಿತು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications