ಬಂಧನ್ ಬ್ಯಾಂಕ್ ಎಂದರೇನು? ಯಾಕಾಗಿ?

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆಗಸ್ಟ್ 23 ರಂದು ಬಂಧನ್ ಬ್ಯಾಂಕ್ ಗೆ ಚಾಲನೆ ನೀಡಿದ್ದಾರೆ. ಇದು ಆರ್ ಬಿಐ ನಿಂದ ಅನುಮತಿ ಪಡೆದುಕೊಂಡ ಮೊದಲ ವಾಣಿಜ್ಯ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಪೂರ್ವ ಭಾರತದಲ್ಲಿ ಮಾತ್ರ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ದೇಶದ ಎಲ್ಲಡೆ ವಿಸ್ತರಿಸಲಾಗುತ್ತದೆ.

ಬಂಧನ್ ಬ್ಯಾಂಕ್ ನ ಸಂಸ್ಥಾಪಕರಾದ ಚಂದ್ರ ಶೇಖರ್ ಘೋಷ್ ಮ್ಯಾನೆಜಿಂಗ್ ಡೈರೆಕ್ಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ಉದ್ಯಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಬಗೆಯ ಬ್ಯಾಂಕೊಂದನ್ನು ತೆರೆಯಲಾಗಿದೆ.[ವಾಣಿಜ್ಯ ಬ್ಯಾಂಕ್ VS ಪೇಮೆಂಟ್ ಬ್ಯಾಂಕ್, ವ್ಯತ್ಯಾಸ ತಿಳ್ಕೊಳ್ಳಿ]

ಬಂಧನ್ ಬ್ಯಾಂಕ್ ಎಂದರೇನು? ಯಾಕಾಗಿ?

ಬಂಧನ್ ಬ್ಯಾಂಕ್ ಬಗ್ಗೆ ಮತ್ತಷ್ಟು...
1. ಬಂಧನ್ ಬ್ಯಾಂಕ್ 501 ಶಾಖೆಗಳನ್ನು ಹೊಂದಿದ್ದು 2022 ಸೇವಾ ಕೇಂದ್ರಗಳ ಮೂಲಕ ಕೆಲಸ ಮಾಡುತ್ತಿದೆ. 24 ರಾಜ್ಯಗಳಲ್ಲಿ ಎಟಿಎಂ ಕೇಂದ್ರಗಳನ್ನು ಹೊಂದಿದೆ. 2016 ರ ವೇಳೆಗೆ ದೇಶದ ಎಲ್ಲ ಭಾಗದಲ್ಲಿ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.

2. 1.43 ಕೋಟಿ ಖಾತೆಯನ್ನು ಹೊಂದಿಯೇ ಬ್ಯಾಂಕ್ ಆರಂಭವಾಗಿದೆ. 10,500ಕೋಟಿ ರು. ಸಾಲ ನೀಡಿಕೆಯನ್ನು ಬ್ಯಾಂಕ್ ಮಾಡುತ್ತಿದ್ದು, 19,500 ನೌಕರರನ್ನು ಹೊಂದಿದೆ.

3. ಬ್ಯಾಂಕ್ ನ ಶೇ. 71 ಕ್ಕೂ ಅಧಿಕ ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಬ್ಯಾಂಕಿಂಗ್ ಸೌಲಭ್ಯ ಹೊಂದಿರದ ನಾಗರಿಕರನ್ನು, ಉದ್ದಿಮೆಗಳನ್ನು ಗುರಿಯಾಗಿರಿಸಿಕೊಂಡು ಕೆಲಸ ಮಾಡುತ್ತಿದೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

4. ಕೋಲ್ಕತ್ತಾದಲ್ಲಿ ಬ್ಯಾಂಕ್ ನ ಕೇಂದ್ರ ಕಚೇರಿಯಿದೆ. ಎರಡು ಬಗೆಯ ಅಂದರೆ ಮೈಕ್ರೋ ಬ್ಯಾಂಕಿಂಗ್ ಮತ್ತು ಜನರಲ್ ಬ್ಯಾಂಕಿಂಗ್ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ರಿಟೈಲ್ ಉದ್ಯಮಕ್ಕೂ ಬ್ಯಾಂಕ್ ನೆರವು ನೀಡುತ್ತಿದೆ.

5. ಚಿಕ್ಕ ಉದ್ದಿಮೆಗಳನ್ನು ಹೊಂದಿದ್ದು, ಆದರೆ ಸಮರ್ಪಕ ಹಣಕಾಸು ಕೊರತೆ ಎದುರಿಸುತ್ತಿರುವವರಿಗೆ ಬ್ಯಾಂಕ್ ವರದಾನವಾಗಿದೆ. ಸುಮಾರು 75 ಲಕ್ಷಕ್ಕೂ ಅಧಿಕ ನಾಗರಿಕರು ಬ್ಯಾಂಕ್ ನಿಂದ್ ಈಗಾಗಲೇ ಹಣಕಾಸು ನೆರವು ಪಡೆದಿದ್ದಾರೆ.

ಕೊನೆ ಮಾತು:
ಕೇಂದ್ರ ಸರ್ಕಾರ ಜನಧನ ಖಾತೆಯನ್ನು ಸಾಮಾನ್ಯ ನಾಗರಿಕರಿಗೆ ನೀಡಿದರೆ, ಬಂಧನ್ ಬ್ಯಾಂಕ್ ಮೂಲಕ ಸಣ್ಣ ಉದ್ದಿಮೆಗಳ ನೆರವಿಗೆ ಗಮನ ಹರಿಸುತ್ತಿದೆ. ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ನೀಡಿಕೆ ಈ ಬ್ಯಾಂಕ್ ನ ಉದ್ದೇಶ ಎಂದು ಹಣಕಾಸು ಸಚಿವರೇ ತಿಳಿಸಿದ್ದಾರೆ(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+