ಚಿನ್ನದ ದರ ಏರಿಕೆ ಮತ್ತು ಇಳಿಕೆ ಮಾರುಕಟ್ಟೆಯ ಪ್ರತಿದಿನದ ಸ್ಥಿತಿ. ಕೇಂದ್ರ ಸರ್ಕಾರ ಗೋಲ್ಡ್ ಮಾನಿಟೈಸೇಶನ್ ಯೋಜನೆಯ ಬಗ್ಗೆಯೂ ಸವಿರವಾದ ಮಾಹಿತಿಯನ್ನು ನೀಡಿದೆ. ಅಗತ್ಯಕ್ಕಿಂತ ಹೆಚ್ಚಿನ ದರ ನೀಡಿ ಹೊರದೇಶಗಳಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವುದನ್ನು ತಡೆಯಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಚಿನ್ನದ ದರ ಸ್ಥಿರತೆ ಮತ್ತು ಬಂಡವಾಳದ ಹೂಡಿಕೆಯನ್ನು ಮತ್ತು ದೇಶದಲ್ಲಿ ಲಭ್ಯವಿರುವ ಎಲ್ಲ ಚಿನ್ನದ ಮೂಲಗಳನ್ನು ಬಳಸಿಕೊಳ್ಳುವ ಉದ್ದೇಶಗಳು ಯೋಜನೆಯ ಹಿಂದೆ ಅಡಗಿದೆ. ಬ್ಯಾಂಕ್ ಗಳು ಸಹ ಚಿನ್ನ ಉಳಿತಾಯ ಖಾತೆಯನ್ನು ತೆರೆದಿದ್ದು ಇದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಮುಖ್ಯ.[ಭಾರತದಲ್ಲಿ ಚಿನ್ನದ ದರ ಈ ಪರಿ ಇಳಿಯಲು 10 ಕಾರಣ]

ಚಿನ್ನ ಉಳಿತಾಯ ಖಾತೆ ಬಗ್ಗೆ ತಿಳಿದುಕೊಳ್ಳಬೇಕಾದ 5 ಅಂಶಗಳು
* ಚಿನ್ನ ಉಳಿತಾಯ ಖಾತೆ
ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಿದ ನಂತರ ಪ್ರಮಾಣ ಪತ್ರ ಮತ್ತು ಆಭರಣವನ್ನು ಬ್ಯಾಂಕಿಗೆ ಹಾಜರುಪಡಿಸಿದರೆ ಖಾತೆ ತೆರೆಯುವ ಪ್ರಾಥಮಿಕ ಹಂತ ಮುಗಿದಂತೆಯೆ. ಚಿನ್ನದ ಪ್ರಮಾಣದ ಆಧಾರದಲ್ಲಿ ಖಾತೆ ತೆರೆಯಲಾಗುವುದು. ಗ್ರಾಹಕನ ಖಾತೆಗೆ ಉಳಿತಾಯ ಖಾತೆಯಲ್ಲಿ ಹೇಗೆ ನಿರ್ದಿಷ್ಟ ಮೊತ್ತದ ಹಣ ಸಂದಾಯವಾಗಿರುತ್ತದೆಯೋ ಇಲ್ಲಿ ಆತ ನೀಡಿದ ಚಿನ್ನ ಸಂದಾಯವಾಗಿರುತ್ತದೆ.
* ಬ್ಯಾಂಕ್ ನೀಡುವ ಬಡ್ಡಿ
ಚಿನ್ನದ ಉಳಿತಾಯ ಖಾತೆ ತೆರೆದ ನಂತರ ತಿಂಗಳು ಅಥವಾ ಎರಡು ತಿಂಗಳು ಕಾಲ ಕಳಿದ ನಂತರ ಬ್ಯಾಂಕ್ ಬಡ್ಡಿ ನೀಡಲು ಆರಂಭಿಸುತ್ತದೆ. ಯಾವ ಪ್ರಮಾಣದ ಬಡ್ಡಿ ನೀಡಬೇಕು ಎಂಬುದನ್ನು ಬ್ಯಾಂಕೇ ನಿರ್ಧರಿಸುತ್ತದೆ. ಯಾವ ಪ್ರಮಾಣದ ಚಿನ್ನ ಇಡಲಾಗಿದೆ, ಚಿನ್ನದ ದರದಲ್ಲಿ ಆದ ಬದಲಾವಣೆಗಳೇನು? ಎಂಬುದನ್ನೆಲ್ಲ ಆಧರಿಸಿ ಬಡ್ಡಿ ನೀಡಲಾಗುವುದು.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
* ರಿಡೆಂಪ್ಶನ್(ಬದಲಾವಣೆ)
ಗ್ರಾಹಕ ಇಲ್ಲಿ ಇಟ್ಟ ಚಿನ್ನಕ್ಕೆ ಬದಲಾಗಿ ಹಣವನ್ನು ಪಡೆದುಕೊಳ್ಳಬಹುದು. ಆದರೆ ಈ ಬಗ್ಗೆ ಖಾತೆ ತೆರೆಯುವಾಗ ಕೆಲ ನಿಯಮಗಳನ್ನು ಒಪ್ಪಿಕೊಂಡಿರಬೇಕಾಗುತ್ತದೆ.
* ತೆರಿಗೆ ವಿನಾಯಿತಿ
1999ರ ಚಿನ್ನ ಉಳಿತಾಯ ಯೋಜನೆ ಅನ್ವಯ ಹೂಡಿದ್ದ ಬಂಡವಾಳ ಅಂದರೆ ಚಿನ್ನಕ್ಕೆ ದೊರೆಯುವ ಬಡ್ಡಿಗೆ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ ಹೆಚ್ಚಿನ ಬಡ್ಡಿಯನ್ನು ಆಕರಣೆ ಮಾಡಲಾಗುವುದಿಲ್ಲ.
ಕೊನೆ ಮಾತು
ಚಿನ್ನ ಉಳಿತಾಯ ಯೋಜನೆಯಲ್ಲಿ ಚಿನ್ನ ಹೂಡಿಕೆ ಮಾಡುವುದು ಅಥವಾ ಚಿನ್ನದ ಪತ್ರಗಳನ್ನು ಪಡೆದುಕೊಳ್ಳುವುದರಲ್ಲಿ ಕೆಲ ವ್ಯತ್ಯಾಸಗಳಿದೆ. ಇಲ್ಲಿ ಶುದ್ಧ ಚಿನ್ನವನ್ನೇ ಹೂಡಿಕೆಗೆ ಬಳಸಿದರೆ ಬ್ಯಾಂಕ್ ನಿಂದ ಚಿನ್ನದ ಪತ್ರಗಳನ್ನು ಪಡೆದುಕೊಳ್ಳುವುದು ಮತ್ತೊಂದು ವಿಧಾನ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications