ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಾವಿಡೆಂಟ್ ಫಂಡ್ ಆರ್ಗನೈಜೇಶನ್ ಪಿಎಫ್ ಸಂಬಂಧ ಹೊರಡಿಸಿದ್ದ ಆದೇಶಕ್ಕೆ ಕಾರ್ಮಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಆದೇಶವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದುಕೊಂಡಿದ್ದು ಕಾರ್ಮಿಕ ವಿರೋಧಿ ಧೋರಣೆ ತಾಳುವುದಿಲ್ಲ ಎಂದು ತಿಳಿಸಿದೆ.
ಹೊಸ ನೀತಿಯಲ್ಲಿದ್ದ ಎಲ್ಲ ಅಂಶಗಳನ್ನು ಅಂದರೆ ಸಂಪೂರ್ಣ ಪಿಎಫ್ ಹಣ ಪಡೆಯುವ ವಯಸ್ಸನ್ನು 58ಕ್ಕೆ ಏರಿಕೆ ಮಾಡಿದ್ದು, ಪಿಎಫ್ ವಿಥ್ ಡ್ರಾ ನಿಯಮದಲ್ಲೂ ಕೆಲ ಬದಲಾವಣೆ ಮಾಡಿದ್ದನ್ನು ಹಿಂದಕ್ಕೆ ಪಡೆಯಲಾಗಿದೆ.[ ಈ 8 ಕಾರಣ ನೀಡಿ ನಿಮ್ಮ ಪಿಎಫ್ ಹಣ ಪಡೆಯಬಹುದು]

ಈ ಎಲ್ಲ ಗೊಂದಲಗಳು ಚಾಲ್ತಿಯಲ್ಲಿದ್ದರೂ ಯಾವ ಸಮಯದಲ್ಲಿ ಪಿಎಫ್ ಹಣವನ್ನು ಪೂರ್ತಿಯಾಗಿ ಪಡೆದುಕೊಳ್ಳಬಹುದು ಎಂದು ನೋಡಿಕೊಂಡು ಬರೋಣ..
* ಮನೆ ಖರೀದಿ
* ಮಾರಕ ಕಾಯಿಲೆ, ಟಿಬಿ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮನೆಯ ಸದಸ್ಯರಿಗೆ ಅಥವಾ ಖಾತೆದಾರ ವ್ಯಕ್ತಿಗೆ ಕಾಣಿಸಿಕೊಂಡರೆ ಪೂರ್ತಿ ಹಣ ಪಡೆಯಬಹುದು.[ಕಾರ್ಮಿಕರನ್ನು ಕೆರಳಿಸಿದ ಕೇಂದ್ರದ ನೀತಿ ಯಾವುದು?]
* ಮಕ್ಕಳ ಉನ್ನತ ಶಿಕ್ಷಣದ ವೇಳೆಯೂ ಪೂರ್ತಿ ಹಣ ಕೈಗೆ ಸಿಗುತ್ತದೆ
* ಮಕ್ಕಳ ಮದುವೆ ವೇಳೆಯೂ ಸಂಪೂರ್ಣ ಹಣ ಪಡೆದುಕೊಳ್ಳಲು ಸಾಧ್ಯವಿದೆ.
* ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಂಸ್ಥೆಯೊಂದಕ್ಕೆ ಜಾಯಿನ್ ಆಗುವ ವೇಳೆಯೂ ಪೂರ್ತಿ ಹಣ ಪಡೆದುಕೊಳ್ಳಬಹುದು.
ನೆನಪಿರಲಿ ಈ ಎಲ್ಲ ಹೊಸ ಕಂಡಿಶನ್ ಗಳು ಆಗಸ್ಟ್ 1, 2016 ರಿಂದ ಚಾಲನೆ ಬರಲಿದೆ. (ಗುಡ್ ರಿಟರ್ನ್ಸ್.ಇನ್)


Click it and Unblock the Notifications