ಕಾರ್ಮಿಕರು ಕೇಂದ್ರ ಸರ್ಕಾರದ ಪಿಎಫ್ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರದ ಯಾವ ಬದಲಾವಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬುದು ಅಷ್ಟೆ ಮುಖ್ಯವಾಗುತ್ತದೆ.
ಕೇಂದ್ರ ಸರ್ಕಾರದ ಪ್ರಮುಖ ನಾಲ್ಕು ಬದಲಾವಣೆಗಳನ್ನು ಲೆಕ್ಕ ತಿಳಿದುಕೊಂಡರೆ ಕಾರ್ಮಿಕರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸಿದರು ಎಂಬುದು ತಿಳಿದು ಬರುತ್ತದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ಬದಲಾವಣೆಗಳ ಮೇಲೆ ಒಂದು ನೋಟ ಇಲ್ಲಿದೆ.[ಕೇಂದ್ರದ ಹೊಸ ಯೋಜನೆ: ಇಪಿಎಫ್‌ನ ಎಲ್ಲ ಮಾಹಿತಿ ಅಂಗೈನಲ್ಲೇ ಲಭ್ಯ]

* ನಿವೃತ್ತಿ ವಯಸ್ಸು
ಉದ್ಯೋಗಿ 54 ವರ್ಷ ತಲುಪಿದ ತಕ್ಷಣ ತನ್ನ ಪಿಎಫ್ ನಲ್ಲಿ ಶೇ. 90ನ್ನು ವಿತ್ ಡ್ರಾ ಮಾಡಬಹುದಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ವಯಸ್ಸನ್ನು 58 ವರ್ಷಕ್ಕೆ ಏರಿಕೆ ಮಾಡಿದೆ.
* ಪಿಎಫ್ ಸದಸ್ಯತ್ವ ಮುಂದುವರಿಕೆ
ಉದ್ಯೋಗಿ ಸಂಪೂರ್ಣ ಪಿಎಫ್ ಹಣವನ್ನು ವಿತ್ ಡ್ರಾ ಮಾಡಿದರೂ ಆತನ ಸದಸ್ಯತ್ ಯುನಿವರ್ಸಲ್ ಖಾತೆ ಸಂಖ್ಯೆ ಆಧಾರದಲ್ಲಿ ಮುಂದುವರಿಯುತ್ತಿತ್ತು. ಆದರೆ ಹೊಸ ಕಾನೂನು ಸದಸ್ವತ್ವ ಮುಂದುವರಿಕೆ ಬಗ್ಗೆ ಯಾವ ಸ್ಪಷ್ಟ ನಿಲುವನ್ನು ಹೇಳುವುದಿಲ್ಲ.[ಬೆಂಗಳೂರು ಗಾರ್ಮೆಂಟ್ಸ್ ಪ್ರತಿಭಟನೆ ಕ್ಷಣ ಕ್ಷಣದ ಮಾಹಿತಿ]
* ಹಣ ವಿತ್ ಡ್ರಾ
ಕಾರ್ಮಿಕರ ಅಥವಾ ಉದ್ಯೋಗಿಗಳ ಸಿಟ್ಟಿಗೆ ಕಾರಣವಾದ ಪ್ರಮುಖ ಸಂಗತಿಯೇ ಇದು. ಯಾವ ಒಬ್ಬ ಉದ್ಯೋಗಿ ತನ್ನ ಕೆಲಸವನ್ನು ತ್ಯಜಿಸಿ ಎರಡು ತಿಂಗಳು ಕಳೆದರೂ ಹೊಸ ಉದ್ಯೋಗ ಪಡೆಯಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಪಿಎಫ್ ಹಣ ವಿಥ್ ಡ್ರಾ ಗೆ ಮುಂದಾದರೆ ಹೊಸ ಕಾನೂನು ಅಡ್ಡಿಯಾಗುತ್ತದೆ. ವ್ಯಕ್ತಿ ಕೇವಲ ತನ್ನ ಕಾಂಟ್ರಿಬ್ಯೂಶನ್ ತೆಗೆದುಕೊಳ್ಳಬಹುದು. ಕಂಪನಿಯ ಕಾಂಟ್ರಿಬ್ಯೂಶನ್ ಗೆ ಕೈಹಾಕಲು ಸಾಧ್ಯವಿಲ್ಲ.
ಇತರ ಕಾನೂನುಗಳು
* ನಿವೃತ್ತಿ ವಯಸ್ಸು ಹಿಂದೆ 55 ವರ್ಷಕ್ಕೆ ಸೀಮಿತವಾಗಿದ್ದು, 54 ವರ್ಷಕ್ಕೆ ಎಲ್ಲ ಹಣ ಡ್ರಾ ಮಾಡಬಹುದಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ನೀತಿಯಲ್ಲಿ ಬದಲಾವಣೆ ತಂದಿತು.
* 58 ವರ್ಷಕ್ಕೆ ಮುನ್ನ ವ್ಯಕ್ತಿ ಸಾವಿಗೀಡಾದರೆ ಆತನ ಪಿಎಫ್ ಹಣ ಯಾರಿಗೆ ಸೇರಬೇಕು? ಈ ಬಗ್ಗೆಯೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿರಲಿಲ್ಲ.
* ಸರ್ಕಾರ ತಮ್ಮ ಹಣದ ಮೇಲೆ ಕಣ್ಣು ಹಾಕಿದೆ ಎಂಬ ಅನುಮಾನ ಕಾರ್ಮಿಕರಲ್ಲಿ ಉಂಟಾಗಿದ್ದು ಪ್ರತಿಭಟನೆಗೆ ಮೂಲ ಕಾರಣವಾಯಿತು.
* ಕೆಲಸ ಕಳೆದುಕೊಂಡ ವ್ಯಕ್ತಿ 58 ವರ್ಷದವರೆಗೆ ತನ್ನ ಹಣದ ಬಗೆಗಾಗಿ ಕಾಯಬೇಕು ಎಂಬುದನ್ನು ತಾಳದ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು.


Click it and Unblock the Notifications