IRCTC SBI ಪ್ಲಾಟಿನಮ್ ಕಾರ್ಡ್: ಇದರ 5 ಉಪಯೋಗಗಳು

SBI ರೇಲ್ವೆ ಕಾರ್ಡ ಒಂದು ಅದ್ವೀತಿಯ ಕ್ರೆಡಿಟ್ ಕಾರ್ಡ್ ಆಗಿದ್ದು, ಭಾರತೀಯ ರೇಲ್ವೆಯ IRCTC ಮುಖಾಂತರ ನಿಮಗಾಗಿ ಪರಿಚಯಿಸುತ್ತಿದೆ. SBI ಕಾರ್ಡ ನಿಮಗೆ ಉಚಿತ ರೇಲ್ವೆ ಟಿಕೇಟ್ ಗಳನ್ನು ಪಡೆಯುವ ಶಕ್ತಿಯನ್ನು ನೀಡುತ್ತದೆ ಹಾಗೂ ನಿಮ್ಮ ಹಣಕ್ಕೆ ಉತ್ತಮ ಮೌಲ್ಯ ಪಡೆಯಲು ಇದು ಸಹಕಾರಿಯಾಗಿದೆ.

SBI ಪ್ಲಾಟಿನಮ್ ಕಾರ್ಡಿನ ಕೆಲ ಮುಖ್ಯ ಲಾಭಗಳು:

ಕಾರ್ಡುದಾರರ ಈ ಸೌಲಭ್ಯವನ್ನು ಪಡೆಯಲು ನೀವು ಆ ಕಾರ್ಡಿನ ಸಹ ಪ್ರಯಾಣಿಕರಲ್ಲಿ ಒಬ್ಬರಾಗಬೇಕು. ಕಾರ್ಡುದಾರರು ವೈಯಕ್ತಿಕ ಪ್ರಯಾಣದ ಮೇಲೆ ಮಾತ್ರ ರಿವಾರ್ಡ(ಬಹುಮಾನ) ಪಾಯಿಂಟ್ ಗಳನ್ನು ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಬೇಕು.

ಕಾರ್ಡಿನ ವಾರ್ಷಿಕ ಶುಲ್ಕ 500 ರೂ. ಆಗಿದ್ದು, ಇದು ಒಂದು ಸಲದ ಶುಲ್ಕ ಆಗಿರುತ್ತದೆ. ಇದನ್ನು ನವೀಕರಿಸಲು 300 ರೂ. ಪ್ರತಿ ವರ್ಷ ಇರುತ್ತದೆ.

ಪ್ಲಾಟಿನಮ್ ಕಾರ್ಡಿನ ಕೆಲ ಮುಖ್ಯ ಲಾಭಗಳು:

1. ಕ್ಯಾಶ್ ಬ್ಯಾಕ್ (ನಗದು ವಾಪಸ್ಸು)

ಕಾರ್ಡುದಾರರು ವೈಯಕ್ತಿಕವಾಗಿ ಮೂಲ ಬೆಲೆಯ ಮೇಲೆ 10 ಶೇಕಡಾ ಸೌಲಭ್ಯ ಪಡೆಯುತ್ತಾರೆ. ನಿಮ್ಮ ಪೂರಕ ಸದಸ್ಯತ್ವ(complimentary membership) ಮುಖಾಂತರ ನಿಮಗೆ AC ದರ್ಜೆಯ (3 AC ಹೊರತುಪಡಿಸಿ) ರೇಲ್ವೆ ಟಿಕೇಟುಗಳ ಮೇಲೆ ಅನೆಕ ಸೌಲಭ್ಯಗಳನ್ನು ನೀಡಲಾಗುತ್ತದೆ.

2. ಇಂಧನ ವ್ಯವಹಾರದ ಮೇಲೆ ಯಾವುದೆ ಶುಲ್ಕ ಇಲ್ಲ

ಈ ಕಾರ್ಡು ನಿಮಗೆ ಅಗಣಿತ ಅನುಕೂಲಗಳ ಮಹಾಪೂರವನ್ನೆ ಒದಗಿಸುತ್ತದೆ. ಗೊತ್ತುಪಡಿಸಿದ ಇಂಡಿಯನ್ ಆಯಿಲ್ ಮತ್ತು ಐಬಿಪಿ ಪೇಟ್ರೋಲ್ ಪಂಪ್ ನಲ್ಲಿ ಪ್ರತಿ ಸಲ 400-2000 ರೂ.ಗಳವರೆಗಿನ ಇಂಧನ ಮತ್ತು ಇತರೆ ಲುಬ್ರಿಕೆಂಟ್ಸ್ ಗಳನ್ನು ಖರೀದಿಸಲು SBI ಕಾರ್ಡನ್ನು ಬಳಸಬಹುದಾಗಿದ್ದು, ಇದರ ಮೇಲೆ ವಿಧಿಸುವ ವ್ಯವಹಾರ ಶುಲ್ಕವನ್ನು ಉಳಿತಾಯ ಮಾಡಬಹುದಾಗಿದೆ.

3. ವ್ಯವಹಾರ ವೆಚ್ಚ 0%

www.services.irctc.co.in ನಲ್ಲಿ ವ್ಯವಹಾರ ಮಾಡುವುದರಿಂದ ಕ್ರೆಡಿಟ್ ಕಾರ್ಡಿನ ವ್ಯವಹಾರದ ಶುಲ್ಕದ ಮೇಲೆ 1.8% ವಿಶೇಷ ವಿನಾಯಿತಿ ಲಾಭಗಳು ಇರುತ್ತವೆ.

4. 10 ಲಕ್ಷ ರೂ.ಗಳ ಉಚಿತ ವಿಮೆ

ನಿಗದಿತ ರೇಲ್ವೆ ಪ್ರಯಾಣದ ಸಂದರ್ಭದಲ್ಲಿ ಅಪಘಾತವಾಗಿ ಪ್ರಾಣಕ್ಕೆ ಅಪಾಯವಾದಲ್ಲಿ/ಪ್ರಾಣ ಕಳೆದುಕೊಂಡಲ್ಲಿ ಕಾರ್ಡುದಾರರು 10 ಲಕ್ಷ ರೂ.ಗಳ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯುತ್ತಾರೆ.

5. ಉಚಿತ ಟಿಕೇಟುಗಳನ್ನು ಪಡೆಯಿರಿ
SBI ರೇಲ್ವೆ ಕಾರ್ಡು ಹೊಂದಿರುವವರು ವ್ಯಕ್ತಿಗತವಾಗಿ ಶಾಪಿಂಗ್, ಊಟ, ಪ್ರಯಾಣವನ್ನು ಮಾಡಬಹುದಾಗಿದೆ.

ಕೊನೆ ಮಾತು

ಕಾರ್ಡುದಾರರು www.services.irctc.co.in ನಲ್ಲಿ ಪ್ರಯಾಣದ ಟಿಕೇಟುಗಳನ್ನು ಖರೀದಿ ಮಾಡುವುದರ ಮೂಲಕ ನಿಖರ 500 ಪಾಯಿಂಟ್ಸ್ ಗಳನ್ನು ಪಡೆದರೆ ಅವರು ಹೆಚ್ಚೆಚ್ಚು ರಿವಾರ್ಡ ಪಾಯಿಂಟ್ ಗಳನ್ನು ಪಡೆಯುತ್ತಾರೆ. ಅಥವಾ ಇಂಧನವನ್ನು ಹೊರತುಪಡಿಸಿ ಇನ್ನಿತರೆ ಚಿಲ್ಲರೆ ವ್ಯವಹಾರದ ಮೇಲೆ 500 ಪಾಯಿಂಟ್ಸ್ ಗಳನ್ನು ಪಡೆದರೂ ಸಹ ರಿವಾರ್ಡ ಪಾಯಿಂಟ್ ಗಳನ್ನು ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+