ಬಂಗಾರವೆಂದರೆ ಭಾರತೀಯರಿಗೆ ಎಲ್ಲಿಲ್ಲದ ವ್ಯಾಮೋಹ. ಹೆಚ್ಚೆಚ್ಚು ಆಭರಣಗಳನ್ನು ಇಷ್ಟಪಡುವ ಹಾಗೂ ಧರಿಸುವ ಮಹಿಳೆಯರನ್ನು ಸಾಮಾನ್ಯವಾಗಿ ಆಭರಣ ಸುಂದರಿಯರು ಎಂದು ಕರೆಯುತ್ತಾರೆ. ಇದು ಅವರ ಪ್ರತಿಷ್ಠೆಯ ವಿಷಯವೂ ಕೂಡ. ಹೀಗಾಗಿ ಬಂಗಾರ ಪ್ರಿಯರಿಗೆ ಇಲ್ಲಿದೆ ಸಂತೋಷದ ಸುದ್ದಿ.
ಚಿನ್ನದ ಬಾಂಡ್ ಹೂಡಿಕೆಯ 5ನೇ ಕಂತಿನ ಯೋಜನೆ ಸೆಪ್ಟಂಬರ್ 1ರಿಂದ 9 ದಿನಗಳವರೆಗೆ ಮುಕ್ತವಾಗಿರುತ್ತದೆ. ನಮ್ಮ ಬಳಿಯಲ್ಲಿ ದೈಹಿಕವಾಗಿ ಚಿನ್ನ ಇಟ್ಟುಕೊಳ್ಳುವ ಬದಲಾಗಿ ಬಾಂಡ್ ಗಳ ರೂಪದಲ್ಲಿ ಚಿನ್ನ ಖರೀದಿ ಪ್ರವೃತ್ತಿ ಪ್ರೋತ್ಸಾಹಿಸಲು ಸರ್ಕಾರ ಈ ಬಾಂಡ್ ಯೋಜನೆ ಕಾರ್ಯರೂಪಕ್ಕೆ ತರುತ್ತಿದೆ.

ಈ ಬಾಂಡುಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯ ಲಿಮಿಟೆಡ್, ನಿಗದಿತ ಅಂಚೆ ಕಚೇರಿಗಳು, ಷೇರುಪೇಟೆ (ರಾಷ್ಟ್ರೀಯ ಸ್ಟಾಕ್ ವಿನಿಮಯ ಹಾಗೂ ಬಾಂಬೆ ಸ್ಟಾಕ್ ವಿನಿಮಯ ಕೆಂದ್ರ) ಮಾರಾಟ ಮಾಡಲಿವೆ.
ಬಾಂಡ್ ಖರೀದಿ ಅರ್ಜಿಗಳನ್ನು ಸೆಪ್ಟಂಬರ್ 1ರಿಂದ 9ರವರೆಗೆ ಸಲ್ಲಿಸಬಹುದು. ಸೆಪ್ಟಂಬರ್ 23ಕ್ಕೆ ಬಾಂಡ್ ಗಳನ್ನು ವಿತರಿಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ನೀಡಿಕೆ ದಿನವಾದ ಸೆಪ್ಟಂಬರ್ 23ರಿಂದ 15 ದಿನಗಳಲ್ಲಿ ಬಾಂಡುಗಳು ಷೇರುಪೇಟೆಗಳಲ್ಲಿ ವಹಿವಾಟು ನಡೆಸಲಿದೆ.
ಒಬ್ಬ ವ್ಯಕ್ತಿಗೆ ಆಯಾ ಹಣಕಾಸಿನ ವರ್ಷಕ್ಕೆ ಅನುಗುಣವಾಗಿ ಕನಿಷ್ಟ ಹೂಡಿಕೆಯ ಮೀತಿ ಒಂದು ಗ್ರಾಂ ಮತ್ತು ಗರಿಷ್ಠ ಮೀತಿ 500 ಗ್ರಾಂ ಇರುತ್ತದೆ. ಬಾಂಡ್ ಗಳಿಗೆ ವಾರ್ಷಿಕ ಶೆ.2.75 ಬಡ್ಡಿದರ ನಿಗದಿಪಡಿಸಲಾಗಿದ್ದು, ಆರಂಭಿಕ ಹೂಡಿಕೆಗೆ ಆರು ತಿಂಗಳಿಗೊಮ್ಮೆ ಪಾವತಿಸಲಾಗುವುದು.
ಬಾಂಡ್ ಗಳ ಮೇಲಿನ ಬಡ್ಡಿದರವು ತೆರಿಗೆಗೆ ಒಳಪಡಲಿದೆ. 1961ರ ಆದಾಯ ತೆರಿಗೆ ಕಾಯಿದೆಯ ಪ್ರಕಾರ ಗೋಲ್ಡ್ ಬಾಂಡ್ ಗಳ ಮೇಲೆ ಬಡ್ಡಿಯನ್ನು ಪಾವತಿಸಲು ಅವಕಾಶ ಮಾಡಲಾಗಿರುತ್ತದೆ. ಜೊತೆಗೆ ತೆರಿಗೆ ವಿನಾಯಿತಿಯೂ ಇರುತ್ತದೆ.


Click it and Unblock the Notifications