ಶಾಪಿಂಗ್ ಮಾಲ್ ಗಳಲ್ಲಿ ಅಥವಾ ಆನ್ಲೈನ್ ಮೂಲಕ ಹಣ ಪಾವತಿಸುವಾಗ ಡೆಬಿಟ್ ಕಾರ್ಡುಗಳ ವಂಚನೆ ಎದುರಾಗುವುದು ಸಾಮಾನ್ಯ. ಎಟಿಎಂ ಯಂತ್ರಗಳನ್ನು ಹಣ ವಿತ್ ಡ್ರಾ ಮಾಡಿಕೊಳ್ಳಲು ಬಳಸುವಾಗ ಇಲ್ಲವೆ ಹಣ ಪಾವತಿ ಸಂದರ್ಭಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತ
ದೇಶದಲ್ಲಿ ಡೆಬಿಟ್ ಕಾರ್ಡ್ ವಂಚನೆಯ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಿದ್ದು ಗ್ರಾಹಕರಿಗೆ ಅಭದ್ರತೆ, ಅಸುರಕ್ಷತೆ ಕಾಡುತ್ತಿದೆ. ಈಗಾಗಲೇ ಡೆಬಿಟ್ ಕಾರ್ಡುಗಳಿಗೆ ಭದ್ರತೆಯ ಅಪಾಯ ಎದುರಾಗಿದ್ದರಿಂದ ಎಸ್ಬಿಐ ಸೇರಿದಂತೆ ಹಲವು ಬ್ಯಾಂಕುಗಳು ಡೆಬಿಟ್ ಕಾರ್ಡುಗಳನ್ನು ಬ್ಲಾಕ್ ಮಾಡಿರುವ ಸಂಗತಿ ನಮಗೆಲ್ಲ ತಿಳಿದಿದೆ. ಜತೆಗೆ ಕೇಂದ್ರ ಸರ್ಕಾರ ಡೆಬಿಟ್ ಕಾರ್ಡ್ ವಂಚಕರ/ಸೈಬರ್ ದಾಳಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದೆ.
ಶಾಪಿಂಗ್ ಮಾಲ್ ಗಳಲ್ಲಿ ಅಥವಾ ಆನ್ಲೈನ್ ಮೂಲಕ ಹಣ ಪಾವತಿಸುವಾಗ ಡೆಬಿಟ್ ಕಾರ್ಡುಗಳ ವಂಚನೆ ಎದುರಾಗುವುದು ಸಾಮಾನ್ಯ. ಎಟಿಎಂ ಯಂತ್ರಗಳನ್ನು ಹಣ ವಿತ್ ಡ್ರಾ ಮಾಡಿಕೊಳ್ಳಲು ಬಳಸುವಾಗ ಇಲ್ಲವೆ ಹಣ ಪಾವತಿ ಸಂದರ್ಭಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಕ್ರೆಡಿಟ್ ಕಾರ್ಡ್ ಪಡೆಯುವಾಗ ಈ 7 ತಪ್ಪು ಮಾಡಬೇಡಿ
ಹೀಗಾಗಿ ಬ್ಯಾಂಕು ಗ್ರಾಹಕರು ಡೆಬಿಟ್ ಕಾರ್ಡುಗಳನ್ನು ಬಳಸುವಾಗ ಹೆಚ್ಚು ಹುಷಾರಾಗಿರಬೇಕಾಗುತ್ತದೆ. ಜತೆಗೆ ಡೆಬಿಟ್ ಕಾರ್ಡ್ ಫ್ರಾಡ್ ಗಳಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಸಂಗತಿಗಳನ್ನು ಪಾಲಿಸಲು ಮರೆಯದಿರಿ.
1. ಹೊಸ ಡೆಬಿಟ್ ಕಾರ್ಡ್ ಪಡೆಯುವಾಗ
ಹೊಸ ಡೆಬಿಟ್ ಕಾರ್ಡುಗಳನ್ನು ಪಡೆಯಲು ಅರ್ಜಿ ಸಲ್ಲಿಸುವಾಗ ಸರಿಯಾದ ಮನೆಯ ವಿಳಾಸವನ್ನು ತಪ್ಪದೆ ನಮೂದಿಸಿ ಬ್ಯಾಂಕಿನವರಿಗೆ ನೀಡಬೇಕು. ಇದರಿಂದಾಗಿ ಡೆಬಿಟ್ ಕಾರ್ಡ್ ನಿಮ್ಮ ವಿಳಾಸಕ್ಕೆ ತಲುಪಲು ಸಾಧ್ಯ ಆಗುವುದರಿಂದ ವಂಚಕರು ಇದರ ದುರುಪಯೋಗ ಪಡೆಯಲು ಆಗುವುದಿಲ್ಲ.
2. ಪಿನ್ ಬದಲಾವಣೆ
ನಿಮ್ಮ ಎಟಿಎಂ/ಡೆಬಿಟ್ ಕಾರ್ಡುಗಳ ಪಿನ್ ನಂಬರ್ ಗಳನ್ನು ನಿಯಮಿತವಾಗಿ ಬದಲಾಯಿಸುತ್ತಿರಬೇಕು. ಆದರೆ ಅದೇ ಪಿನ್ ನಂಬರ್ ಗಳನ್ನು ಪುನರಾವರ್ತಿಸಬಾರದು. ನಿಮ್ಮ ಒಂದಕ್ಕಿಂತ ಹೆಚ್ಚು ಡೆಬಿಟ್ ಕಾರ್ಡುಗಳಿದ್ದಲ್ಲಿ ಒಂದೇ ತರದ ಪಿನ್ ನಂಬರ್ ಗಳನ್ನು ಬಳಸಬೇಡಿ.
3. ಡೆಬಿಟ್ ಕಾರ್ಡ್ ಪಡೆದ ನಂತರ ಏನು ಮಾಡಬೇಕು?
ಬ್ಯಾಂಕಿನಿಂದ ಡೆಬಿಟ್ ಕಾರ್ಡ್ ಪಡೆದ ನಂತರ ಅದನ್ನು ಪರಿಶೀಲಿಸಿಕೊಳ್ಳಬೇಕು. ಅರ್ಜಿ ಸಲ್ಲಿಸುವಾಗ ನೀಡಿದ ಮಾಹಿತಿ ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ಗಮನಿಸಿ. ಅಲ್ಲದೇ ಡೆಬಿಟ್ ಕಾರ್ಡಿನ ಹಿಂಬದಿಯಲ್ಲಿ ಸಹಿಯನ್ನು ತಪ್ಪದೆ ಮಾಡಿ.
4. ವೈಯಕ್ತಿಕ ಮಾಹಿತಿ ನೀಡದಿರಿ
ಹೌದು. ಇದು ತುಂಬಾ ಮುಖ್ಯವಾದ ವಿಚಾರ. ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ವಿವರ, ಡೆಬಿಟ್ ಕಾರ್ಡ್ ಗಳಿಗೆ ಸಂಬಂಧಿತ ಮಾಹಿತಿ ವೆಬ್ಸೈಟ್ ದಾರರಿಗಾಗಲಿ ಅಥವಾ ನಿಮಗೆ ಬರುವ ಇ-ಮೇಲ್ ಗಳಿಗಾಗಲಿ ಮಾಹಿತಿ ನೀಡಲು ಹೋಗಬೇಡಿ. ಇಲ್ಲದಿದ್ದರೆ ಮೋಸ ಹೋಗಬೇಕಾಗುತ್ತದೆ.
5. ಸ್ಟೇಟ್ಮೆಂಟ್ ಪರಿಶೀಲಿಸಿ
ನಿಮ್ಮ ಖಾತೆಗೆ ಸಂಬಂಧಿಸಿದಂತೆ ಬರುವ ಸ್ಟೇಟ್ಮೆಂಟ್ ಗಳನ್ನು ನಿಯಮಿತವಾಗಿ ಪರಿಶೀಲಿಸಲು ಮರೆಯದಿರಿ. ಮೊಬೈಲ್ ಗೆ ಅಥವಾ ಇ-ಮೇಲ್ ಗೆ ಬರುವ ಸಂದೇಶಗಳನ್ನು ಪರಿಶೀಲಿಸುತ್ತಿರಿ. ಅನವಶ್ಯಕ ಹಾಗೂ ಅನಧಿಕೃತ ವ್ಯವಹಾರ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ.
6. ಕಾರ್ಡ್ ಕಳೆದುಕೊಂಡಲ್ಲಿ ಏನು ಮಾಡಬೇಕು?
ಒಂದು ವೇಳೆ ನೀವು ಡೆಬಿಟ್ ಕಾರ್ಡ್ ನ್ನು ಕಳೆದುಕೊಂಡಲ್ಲಿ ಅಥವಾ ಸ್ಥಳ ಬದಲಾವಣೆಯಾದಲ್ಲಿ ತಕ್ಷಣವೇ ಬ್ಯಾಂಕುಗಳಿಗೆ ಕಾರ್ಡು ಕಳೆದುಹೋದ ವಿಷಯವನ್ನು ವರದಿ ಮಾಡಿ. ಬ್ಯಾಂಕುಗಳು ನೆಟ್ ಬ್ಯಾಂಕಿಂಗ್ ಇಲ್ಲವೆ ಫೋನ್ ಬ್ಯಾಂಕಿಂಗ್ ಮೂಲಕ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡುತ್ತಾರೆ.
7. ಪಿನ್ ನಂಬರ್ ಬರೆಯಬೇಡಿ
ಪಿನ್ ನಂಬರ್ ನಿಮ್ಮ ಡೆಬಿಟ್ ಕಾರ್ಡ್ ಮೇಲೆ ಬರೆದಿಟ್ಟುಕೊಳ್ಳಬೇಡಿ. ಅಥವಾ ಡೆಬಿಟ್ ಕಾರ್ಡ್ ನೊಂದಿಗೆ ಇಟ್ಟುಕೊಳ್ಳುವ ಕಾಗದದ ಮೇಲೆ ಬರೆಯಬೇಡಿ. ಜತೆಗೆ ನಿಮ್ಮ ಡೆಬಿಟ್ ಕಾರ್ಡ್ ನಂಬರ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
8. ತಪ್ಪದೆ ಚಂದಾದಾರರಾಗಿ
ಎಸ್ಎಂಎಸ್ ಅಲರ್ಟ್ಸ್ ಮೂಲಕ ಸಂದೇಶಗಳನ್ನು ಪಡೆಯುವುದಕ್ಕಾಗಿ ನೋಂದಾಯಿಸಿಕೊಳ್ಳಲು ಮರೆಯಬೇಡಿ. ನಿಮ್ಮ ಪ್ರತಿಯೊಂದು ಬ್ಯಾಂಕಿಂಗ್ ವ್ಯವಹಾರಗಳ ಕುರಿತು ಸಂದೇಶಗಳನ್ನು ಪಡೆಯುವುದಕ್ಕಾಗಿ ತಪ್ಪದೆ ಚಂದಾದಾರರಾಗಿ.
9. ಜಾಗೂರಕರಾಗಿರಿ
ಎಟಿಎಂ ನಲ್ಲಿ ಪಿನ್ ನಂಬರ್ ಟೈಪ್ ಮಾಡುವಾಗ ಜಾಗೂರಕರಾಗಿರಿ. ಅಲ್ಲದೆ ಇನ್ನೊಂದು ಕೈಯಿಂದ ಪಿನ್ ನಂಬರ್ ಯಾರು ನೋಡದಂತೆ ಮುಚ್ಚಿಕೊಳ್ಳಬೇಕು.


Click it and Unblock the Notifications