For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಪಡೆಯುವಾಗ ಈ 7 ತಪ್ಪು ಮಾಡಬೇಡಿ

By Siddu
|

ಕ್ರೆಡಿಟ್ ಕಾರ್ಡ್ ಯಾರಿಗೆ ತಾನೆ ಬೇಡ? ಪ್ರತಿಯೊಬ್ಬರೂ ಇಟ್ಟುಕೊಳ್ಳಲು ಬಯಸುತ್ತಾರಲ್ಲವೇ? ಹೀಗಾಗಿ ಕ್ರೆಡಿಟ್ ಕಾರ್ಡ್ ಈಗ ಎಲ್ಲರ ಮೂಲಭೂತ ಅವಶ್ಯಕತೆಯಾಗಿ ಮಾರ್ಪಟ್ಟಿದೆ. ಕ್ರೆಡಿಟ್ ಕಾರ್ಡ್ ಪಡೆಯುವಾಗ, ಅರ್ಜಿ ಸಲ್ಲಿಸುವಾಗ ಯಾವ ಅಂಶಗಳನ್ನು ಗಮನಿಸಬೇಕು ಹಾಗೂ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ಅಷ್ಟೇ ಮುಖ್ಯವಾಗಿರುತ್ತದೆ.

ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವಾಗ ಅರ್ಜಿದಾರನ ಸಂಪೂರ್ಣ ಮಾಹಿತಿಯನ್ನು ಕ್ರೆಡಿಟ್ ಕಾರ್ಡ್ ಕಂಪನಿಗಳು ಬಯಸುತ್ತವೆ. ಕ್ರೆಡಿಟ್ ಕಾರ್ಡ್ ಅನುಮೋದನೆ ಮಾಡುವಾಗ ವ್ಯಕ್ತಿಯ ಆದಾಯ, ಖರ್ಚುವೆಚ್ಚದ ಸಾಮರ್ಥ್ಯ, ಕ್ರೆಡಿಟ್ ಹಿನ್ನೆಲೆ ಇತ್ಯಾದಿ ಅಂಶಗಳನ್ನು ಗಮನಿಸುತ್ತಾರೆ. (ಸ್ಮಾರ್ಟ್ ಬ್ಯಾಂಕಿಂಗ್ ವ್ಯವಹಾರ ಮಾಡಬೇಕೆ? ಇಲ್ಲಿವೆ 8 ಟಿಪ್ಸ್ )

ಕ್ರೆಡಿಟ್ ಕಾರ್ಡ್ ಕೊಡುವ ಕಂಪನಿಗೆ ಅರ್ಜಿದಾರನ ಮೇಲೆ ವಿಶ್ವಾಸ ಮೂಡಿದರೆ ಸಮ್ಮತಿ ನೀಡುತ್ತದೆ. ಕಾಲಕಾಲಕ್ಕೆ ಬಾಕಿ ಪಾವತಿ ಮಾಡಲು ಸಮರ್ಥರಾಗಿದ್ದಾರೆ ಎಂದು ಖಚಿತವಾದ ಮೇಲೆ ಅರ್ಜಿಯನ್ನು ಸ್ವೀಕರಿಸುತ್ತಾರೆ.

ಕೆಲವರು ತುಂಬಾ ಗಡಿಬಿಡಿಯಲ್ಲಿ ಕ್ರೆಡಿಟ್ ಕಾರ್ಡ್ ಪಡೆಯಲು ಹಪಹಪಿಸಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಕೆಲವು ಕಾರಣಗಳಿಂದ ಅವರ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.

ಹೀಗಾಗಿ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸುವಾಗ ಕೆಲವು ತಪ್ಪುಗಳುಂಟಾಗಬಹುದು. ಆ ತಪ್ಪುಗಳಿಂದ ತಪ್ಪಿಸಿಕೊಳ್ಳುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕ್ರೆಡಿಟ್ ಇತಿಹಾಸ ತಪಾಸಣೆ

ಕ್ರೆಡಿಟ್ ಇತಿಹಾಸ ತಪಾಸಣೆ

ಒಮ್ಮೆ ನೀವು ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ಕಂಪನಿಗೆ ಸಲ್ಲಿಸಿದರೆ ಅವರು ನಿಮ್ಮ ಎಲ್ಲ ಹಣಕಾಸು ವಿವರಗಳನ್ನು ಪರಿಶೀಲಿಸುತ್ತಾರೆ.ನಿಮ್ಮ CIBIL ಸ್ಕೋರ್ 720 ಮತ್ತು ಅದಕ್ಕಿಂತಲೂ ಹೆಚ್ಚಿದ್ದರೆ ಕ್ರೆಡಿಟ್ ಕಾರ್ಡ್ ಅನುಮೋದನೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ಅದಕ್ಕಿಂತಲೂ ಕಡಿಮೆ ಅಂಕಗಳನ್ನು ಹೊಂದಿದ್ದರೆ ಕ್ರೆಡಿಟ್ ಕಾರ್ಡ್ ಪಡೆಯುವುದು ಕಷ್ಟವಾಗುತ್ತದೆ.

ಕಡಿಮೆ ಆದಾಯ

ಕಡಿಮೆ ಆದಾಯ

ಕ್ರೆಡಿಟ್ ಕಾರ್ಡ್ ಅನುಮೋದನೆ ಮಾಡುವ ಮುನ್ನ ಅರ್ಜಿದಾರನ ಆದಾಯ ಮತ್ತು ಮರುಪಾವತಿಸುವ ಸಾಮರ್ಥವನ್ನು ನೋಡುತ್ತಾರೆ. ವಾರ್ಷಿಕವಾಗಿ ಸರಾಸರಿ ರೂ. 2.4 ಲಕ್ಷ ಆದಾಯ ಇರಬೇಕೆಂಬ ಖಚಿತವಾದ ಮಿತಿಯಿದೆ.

ಈ ಮಿತಿಯೊಳಗೆ ಆದಾಯ ಇದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ಆಧರಿಸಿ ವಿವಿಧ ಕ್ರೆಡಿಟ್ ಕಾರ್ಡ್ ಗಳನ್ನು ಪಡೆಯಬಹುದು.

ಅರ್ಜಿಯಲ್ಲಿ ತಪ್ಪುಗಳು
 

ಅರ್ಜಿಯಲ್ಲಿ ತಪ್ಪುಗಳು

ನೀವು ಸಲ್ಲಿಸುವ ಅರ್ಜಿಯಲ್ಲಿ ಏನಾದರೂ ತಪ್ಪುಗಳಾದಲ್ಲಿ ಇಲ್ಲವೇ ಅರ್ಜಿ ಅಪೂರ್ಣವಾಗಿದ್ದಲ್ಲಿ, ಕೊಟ್ಟಿರುವ ಸ್ಥಳದಲ್ಲಿ ಸರಿಯಾದ ಮಾಹಿತಿ ತುಂಬದಿದ್ದಲ್ಲಿ ಅಥವಾ ತುಂಬಿದ ಮಾಹಿತಿ ಸುಳ್ಳಾಗಿದಲ್ಲಿ ಅರ್ಜಿ ತಿರಸ್ಕರಿಸಲ್ಪಡುತ್ತದೆ. ಅದಕ್ಕಾಗಿ ನೀವು ತುಂಬುವ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು.

ವಿಳಾಸದಲ್ಲಿ ತಪ್ಪು

ವಿಳಾಸದಲ್ಲಿ ತಪ್ಪು

ಯಾವುದೇ ಸಾಲ ಪಡೆದು ಕರ್ತವ್ಯಲೋಪಕ್ಕೆ ಒಳಗಾಗಿದಲ್ಲಿ ಅಥವಾ ಹಿಂದಿರುಗಿಸದಿದಲ್ಲಿ ಮತ್ತು ವಿಳಾಸವನ್ನು ತಪ್ಪಾಗಿ ನಮೂದಿಸಿದ್ದು, ಬಾಕಿದಾರರ ಪಟ್ಟಿಯಲ್ಲಿ ಇದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸುವ ಸಂಭವ ಹೆಚ್ಚಿರುತ್ತದೆ.

ಬಹು ಬ್ಯಾಲೆನ್ಸ್ ವರ್ಗಾವಣೆ

ಬಹು ಬ್ಯಾಲೆನ್ಸ್ ವರ್ಗಾವಣೆ

ಈ ಹಿಂದೆ ನೀವು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೇಲೆ ಬಹು ಬ್ಯಾಲೆನ್ಸ್ ವರ್ಗಾವಣೆ ಮಾಡಿದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲ್ಪಡುತ್ತದೆ. ಈ ಪ್ರಕ್ರಿಯೆಯನ್ನು ಬ್ಯಾಂಕುಗಳು ಅಥವಾ ಸಂಸ್ಥೆಗಳು ಇಷ್ಟಪಡುವುದಿಲ್ಲ. ಹೀಗಾಗಿ ಬಹು ಬ್ಯಾಲೆನ್ಸ್ ವರ್ಗಾವಣೆಯನ್ನು ಕಡಿಮೆ ಮಾಡಬೇಕು.

ಕ್ರೆಡಿಟ್ ಹಿನ್ನೆಲೆ

ಕ್ರೆಡಿಟ್ ಹಿನ್ನೆಲೆ

ಯಾವುದೇ ರೀತಿಯ ಸಾಲ ಪಡೆಯದೆ ಇದ್ದಲ್ಲಿ ಮತ್ತು ಕ್ರೆಡಿಟ್ ಬಳಕೆಯ ಹಿನ್ನೆಲೆ ಶೂನ್ಯವಾಗಿದಲ್ಲಿ ಅಥವಾ ಬಳಕೆ ಮಾಡದೆ ಇದ್ದಲ್ಲಿಯೂ ಸಹ ಕ್ರೆಡಿಟ್ ಕಾರ್ಡ್ ಪಡೆಯುವುವಾಗ ಸಮಸ್ಯೆಯಾಗಬಹುದು. ಏಕೆಂದರೆ ನೀವು ಅನೇಕ ಸಾಲ ವ್ಯವಹಾರ ಅಥವಾ ಕ್ರೆಡಿಟ್ ವ್ಯವಹಾರವನ್ನು ಈಗಾಗಲೇ ಮಾಡಿರಬೇಕಾಗುತ್ತದೆ. ಇದರಿಂದ ಕೂಡ ನಿಮ್ಮ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಇಲ್ಲದಿದ್ದರೆ ಸಂಸ್ಥೆಗಳಿಗೆ ನಿಮ್ಮ ಮರುಪಾವತಿಯ ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆ ಮಾಡುವುದು ಕಷ್ಟವಾಗುತ್ತದೆ.

ವಯಸ್ಸಿನ ಮಿತಿ

ವಯಸ್ಸಿನ ಮಿತಿ

ನಿಮ್ಮ ವಯಸ್ಸು 18ಕ್ಕಿಂತಲೂ ಕಡಿಮೆ ಇದ್ದಲ್ಲಿ ಅಥವಾ ಸಣ್ಣ ವಯಸ್ಸಿನವರಾಗಿದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು. ಕೆಲ ಹಿರಿಯ ನಾಗರಿಕರಿಗೂ ಈ ಸಮಸ್ಯೆ ಉಂಟಾಗುತ್ತಿದ್ದು, ಅವರು ಆದಾಯದ ಮೂಲಗಳನ್ನು ತೋರಿಸಲು ಅಸಾಧ್ಯವಾಗುತ್ತದೆ.

English summary

7 Mistakes To Avoid When Applying For Credit Card

Credit card companies will be looking for complete information regarding the credit card applicant. When approving a credit card, they look into various factors such as income, spending, credit history etc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X