ಈಗಾಗಲೇ 2000 ಮುಖಬೆಲೆಯ ಹೊಸ ನೋಟು ಹೊಸ ವಿನ್ಯಾಸ.. ಹೊಸ ಬಣ್ಣ.. ಹೊಸ ತಂತ್ರಜ್ಞಾನ.. ಈ ಎಲ್ಲ ವಿಶೇಷಣಗಳೊಂದಿಗೆ ನಮ್ಮ ಮುಂದೆ ಬಂದಿದೆ. ಈಗ ರೂ. 500 ನೋಟಿನ ಸರದಿ...
ಈಗಾಗಲೇ 2000 ಮುಖಬೆಲೆಯ ಹೊಸ ನೋಟು ಹೊಸ ವಿನ್ಯಾಸ.. ಹೊಸ ಬಣ್ಣ.. ಹೊಸ ತಂತ್ರಜ್ಞಾನ.. ಈ ಎಲ್ಲ ವಿಶೇಷಣಗಳೊಂದಿಗೆ ನಮ್ಮ ಮುಂದೆ ಬಂದಿದೆ. ಈಗ ರೂ. 500 ನೋಟಿನ ಸರದಿ...
ಹಳೆ ರೂ. 500, 1000 ನೋಟುಗಳ ನಿಷೇಧದಿಂದ ಈಗಾಗಲೇ ದೇಶದಾದ್ಯಂತ ಸಂಚಲನವೇ ಸೃಷ್ಠಿಯಾಗಿದ್ದು, ಕಾಳಧನಿಕರಿಗೆ ಹಾಗೂ ಭ್ರಷ್ಟರಿಗೆ ಪ್ರಧಾನಿ ಮೋದಿ ನಡುಕ ಹುಟ್ಟಿಸಿದ್ದಾರೆ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?
ಕಪ್ಪುಹಣ, ಭ್ರಷ್ಟಾಚಾರ ಹಾಗೂ ಖೋಟಾ ನೋಟುಗಳಿಗೆ ಕಡಿವಾಣ ಹಾಕಲು ಹೊಸ ನೋಟುಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿದೆ.
ರೂ. 500 ಸಾವಿರ ನೋಟಿನಲ್ಲ್ಲಿ ಅಳವಡಿಸಿರುವ ತಂತ್ರಜ್ಞಾನ ಹಾಗೂ ಯುನಿಕ್ ಆಗಿರುವ ವೈಶಿಷ್ಟತೆಗಳೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೆ ಇರುತ್ತದೆ.
ಹೊಸ ರೂ. 500 ನೋಟಿನ ಪ್ರಮುಖ ವಿಶೇಷತೆಗಳ ಸಂಕ್ಷಿಪ್ತ ನೋಟ ಇಲ್ಲಿದೆ.
1. ದೆವನಾಗರಿ ಲಿಪಿಯಲ್ಲಿ 500
ದೆವನಾಗರಿ ನಮ್ಮ ದೇಶದ ಪ್ರಾಚೀನ ಲಿಪಿ. ಈ ನೋಟಿನ ಮೇಲೆ ಬಲಬದಿಗೆ 500 ಎಂಬ ಸಂಖ್ಯಾವಾಚಕ ಇದ್ದು, ಎಡಬದಿಗೆ ದೆವನಾಗರಿ ಲಿಪಿಯಲ್ಲಿ 500 ಸಂಖ್ಯಾವಾಚಕ ಇದೆ. ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿದೆ.
2. ಗವರ್ನರ್ ಸಹಿ
ಗವರ್ನರ್ ಸಹಿ, ಆರ್ಬಿಐ ಲಾಂಛನ, ಗ್ಯಾರಂಟಿ ಷರತ್ತು ನೋಟಿನಲ್ಲಿ ಮುದ್ರಿಸಲಾಗಿದೆ. ನೋಟಿನ ಎಡಭಾಗದಲ್ಲಿ ನೋಟಿನ ಸಂಖ್ಯೆ ಮತ್ತು ಆರ್ಬಿಐ ಅಕ್ಷರಗಳನ್ನು ಮೈಕ್ರೋ ಅಕ್ಷರಗಳಲ್ಲಿ ಬರೆದಿರಲಾಗುತ್ತದೆ. ಭಾರತ್(ಹಿಂದಿ) ಎಂಬ ಅಕ್ಷರ ಇದ್ದು ಭದ್ರತೆಗೆ ಸಹಕಾರಿಯಾಗಲಿದೆ.
3. ಭದ್ರತೆ ಎಳೆ(ತ್ರೆಡ್)
ನೋಟನ್ನು ಬಾಗಿಸಿ ನೋಡಿದಾಗ ಭದ್ರತೆ ಗೆರೆ(ತ್ರೆಡ್) ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುವುದನ್ನು ಗಮನಿಸಬಹುದು. ಭದ್ರತೆ ಗೆರೆ(ತ್ರೆಡ್) ಮೇಲೆ Bharat, RBI ಇದೆ. ನೋಟಿನ ಕೆಳಭಾಗದ ಬಲಗಡೆಗೆ ಇರುವ 500 ಸಿಂಬಲ್ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.
4. ನೋಟಿನ ಗಾತ್ರ
500 ಮುಖಬೆಲೆಯ ಹೊಸ ನೋಟಿನ ಅಳತೆ 66 ಮಿಲಿಮೀಟರ್ X 150 ಮಿಲಿಮೀಟರ್ ಆಗಿದೆ. ಹಿಂದಿ ಭಾಷೆಯಲ್ಲೂ ಐದು ನೂರು ಎಂದು ದೊಡ್ಡದಾಗಿ ಬರೆಯಲಾಗಿದೆ.
5. ಎಲೆಕ್ರ್ಟೋಟೈಪ್ ವಾಟರ್ ಮಾರ್ಕ್
ಎಲೆಕ್ರ್ಟೋಟೈಪ್ (500) ನೀರು ಗುರುತು ಮತ್ತು ಗಾಂಧಿ ಭಾವಚಿತ್ರ ನೋಟಿನ ಬಲಭಾಗದಲ್ಲಿ ಇರುತ್ತದೆ. ರಾಷ್ಟ್ರ ಲಾಂಛನ ಬಲಭಾಗದಲ್ಲಿದ್ದು, ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖವಿದ್ದು, ಬೆಳಕಿನಲ್ಲಿ ಇದು ನೀಲಿ ಬಣ್ಣಕ್ಕೆ ತಿರುಗುತ್ತದೆ.
6. ಬ್ರೈಲ್ ಲಿಪಿ
ಅಂಧರಿಗೆ ನೋಟಿನ ಮೌಲ್ಯ ಅರ್ಥವಾಗುವುದಕ್ಕಾಗಿ ಬ್ರೈಲ್ ಲಿಪಿ ತಂತ್ರಜ್ಞಾನ ಅಳವಡಿಸಲಾಗಿದೆ. ಗಾಂಧಿ ಭಾವಚಿತ್ರ, 5 Bleed ರೇಖೆ, ರಾಷ್ಟ್ರಲಾಂಛನ, ರೇಖೆಗಳ ಮೂಲಕ ಇದನ್ನು ಗುರುತಿಸಬಹುದಾಗಿದೆ.
7. ನೋಟಿನ ಹಿಂಬದಿ
ನೋಟಿನ ಹಿಂಬದಿಯಲ್ಲಿ ಭಾರತೀಯ ಹೆರಿಟೆಜ್ ಸ್ಥಳ ಆಗಿರುವ ಕೆಂಪುಕೋಟೆಯ ಚಿತ್ರವಿದೆ. ಕನ್ನಡ ಸೇರಿದಂತೆ 15 ಭಾಷೆಗಳಲ್ಲಿ ರೂಪಾಯಿಯ ಬರಹವಿರುತ್ತದೆ. ಸ್ವಚ್ಛಭಾರತ ಲಾಂಛನ, ನೋಟು ಮುದ್ರಿಸಲ್ಪಟ್ಟ ವರ್ಷ ಉಲ್ಲೇಖಿಸಲಾಗಿರುತ್ತದೆ.


Click it and Unblock the Notifications