For Quick Alerts
ALLOW NOTIFICATIONS  
For Daily Alerts

ಪೋಸ್ಟ್ ಆಫೀಸ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪಡೆಯುವುದು ಹೇಗೆ?

ಈ ಹಿಂದೆ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದೇ ಅಂಚೆ ಕಚೇರಿ ವ್ಯವಹಾರ ನಿರ್ವಹಿಸುವುದು ಕಷ್ಟವಾಗಿತ್ತು. ಪೋಸ್ಟ್ ಆಫೀಸ್ ಇತ್ತೀಚಿಗೆ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ.

By Siddu
|

ಭಾರತ ಸರ್ಕಾರ ಅತ್ಯುನ್ನತ ಸುರಕ್ಷತೆ ಹಾಗೂ ಭದ್ರತೆಯೊಂದಿಗೆ ಪೋಸ್ಟ್ ಆಫೀಸ್ ಖಾತೆಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ಹಲವು ಬಗೆಯ ಹಲವಾರು ಪ್ರಯೋಜನಗಳ ಅನೇಕ ವಿಧದ ಅಂಚೆ ಕಚೇರಿ ಯೋಜನೆಗಳಿವೆ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

 

ಈ ಹಿಂದೆ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದೇ ಅಂಚೆ ಕಚೇರಿ ವ್ಯವಹಾರ ನಿರ್ವಹಿಸುವುದು ಕಷ್ಟವಾಗಿತ್ತು. ಪೋಸ್ಟ್ ಆಫೀಸ್ ಇತ್ತೀಚಿಗೆ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ್ದು, ಅಂಚೆ ಕಚೇರಿ ಗ್ರಾಹಕರು ಮೊಬೈಲ್ ಬ್ಯಾಂಕಿಂಗ್ ಮೂಲಕ ಎಲ್ಲಿ ಮತ್ತು ಯಾವಾಗಲಾದರೂ ವ್ಯವಹಾರ ನಡೆಸಬಹುದು.

 

MPIN, ವ್ಯವಹಾರ ಪಾಸ್ವರ್ಡ್, ಐಡಿ ಮತ್ತು OTP(ಒನ್ ಟೈಮ್ ಪಾಸ್ವರ್ಡ್) ಇವುಗಳನ್ನು ಒದಗಿಸುವಂತೆ ಅಂಚೆ ಇಲಾಖೆ ನಿಮ್ಮನ್ನು ಕೇಳುವುದಿಲ್ಲ.

ಪೋಸ್ಟ್ ಆಫೀಸ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪಡೆಯುವುದು ಹೇಗೆ?

ಪೋಸ್ಟ್ ಆಫೀಸ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಸಕ್ರಿಯಗೊಳಿಸುವುದು ಹೇಗೆ?

1. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿ. ಆಪ್ ತೆರೆದ ನಂತರ ಮೊಬೈಲ್ ಬ್ಯಾಂಕಿಂಗ್ ಬಟನ್ ಮೇಲೆ ಕ್ಲಿಕ್ ಮಾಡಿ.

2. ಅಂಚೆ ಕಚೇರಿಗೆ ಒದಗಿಸಿದ ಭದ್ರತಾ ರುಜುವಾತುಗಳನ್ನು ನಮೂದಿಸಿ. OTP ಸಂದೇಶಕ್ಕೆ ಯಾವುದೇ ಶುಲ್ಕ ಇಲ್ಲ. ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ನಂಬರ್ ನಮೂದಿಸಿ.

3. ಒಂದು ಬಾರಿ ಆಕ್ಟಿವೇಶನ್ ಯಶಸ್ವಿಯಾದ ನಂತರ ನಾಲ್ಕು ಸಂಖ್ಯೆಯ MPIN ನಮೂದಿಸಬೇಕು.

4. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಲಾಗಿನ್ ಆಗುವುದಕ್ಕೆ ಬಳಕೆದಾರರ ಐಡಿ ಮತ್ತು ಹೊಸ MPIN ನಮೂದಿಸಿ.

ಮುಕ್ತಾಯ:
ಅಂಚೆ ಕಚೇರಿ ಗ್ರಾಹಕರು ಯಾವುದೇ ತೊಂದರೆ ಅನುಭವಿಸುತ್ತಿದ್ದರೆ ಅಥವಾ ಅಡಚಣೆಗಳಿದ್ದರೆ ಅಂಚೆ ಕಚೇರಿ ಕಸ್ಟಮರ್ ಕೇರ್ 18004252440 ನಂಬರ್ ಗೆ ಕರೆ ಮಾಡಿ.

ಪೋಸ್ಟ್ ಆಫೀಸ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪಡೆಯುವುದು ಹೇಗೆ?

English summary

How to Activate Post Office Mobile Banking Application?

Department of Posts recently launched the mobile banking application. Now you can undertake office transaction on the go. Post office customers can do banking from anywhere and anytime using your mobile device.
Story first published: Monday, December 26, 2016, 13:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X