ಬ್ಯಾಂಕುಗಳಲ್ಲಿ ಚಿನ್ನ ಉಳಿತಾಯ ಖಾತೆ ತೆರೆಯುವುದು ಹೇಗೆ?

ಚಿನ್ನದ ದರ ಸ್ಥಿರತೆ, ಬಂಡವಾಳ ಹೂಡಿಕೆ ಮತ್ತು ದೇಶದಲ್ಲಿ ಲಭ್ಯವಿರುವ ಎಲ್ಲ ಚಿನ್ನದ ಮೂಲಗಳನ್ನು ಬಳಸಿಕೊಳ್ಳುವ ಉದ್ದೇಶ ಈ ಯೋಜನೆಗಿದೆ. ಬ್ಯಾಂಕ್ ಗಳು ಸಹ ಚಿನ್ನ ಉಳಿತಾಯ ಖಾತೆಯನ್ನು ತೆರೆದಿದ್ದು ಇದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಮುಖ್ಯ.

ಚಿನ್ನದ ದರಗಳಲ್ಲಿ ಏರಿಕೆ ಮತ್ತು ಇಳಿಕೆ ಇದು ಚಿನಿವಾರ ಚೀನಿವಾರ ಪೇಟೆಯಲ್ಲಿ ಪ್ರತಿದಿನದ ಸ್ಥಿತಿ. ಕೇಂದ್ರ ಸರ್ಕಾರ ಗೋಲ್ಡ್ ಮಾನಿಟೈಸೇಶನ್ ಯೋಜನೆಯ ಬಗ್ಗೆಯೂ ಸವಿವರವಾದ ಮಾಹಿತಿಯನ್ನು ನೀಡಿದೆ. ಅಗತ್ಯಕ್ಕಿಂತ ಹೆಚ್ಚಿನ ದರ ನೀಡಿ ಹೊರ ದೇಶಗಳಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವುದನ್ನು ತಡೆಯಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ಚಿನ್ನದ ದರ ಸ್ಥಿರತೆ, ಬಂಡವಾಳ ಹೂಡಿಕೆ ಮತ್ತು ದೇಶದಲ್ಲಿ ಲಭ್ಯವಿರುವ ಎಲ್ಲ ಚಿನ್ನದ ಮೂಲಗಳನ್ನು ಬಳಸಿಕೊಳ್ಳುವ ಉದ್ದೇಶ ಈ ಯೋಜನೆಯ ಹಿಂದೆ ಅಡಗಿದೆ. ಬ್ಯಾಂಕ್ ಗಳು ಸಹ ಚಿನ್ನ ಉಳಿತಾಯ ಖಾತೆಯನ್ನು ತೆರೆದಿದ್ದು ಇದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಮುಖ್ಯ. ಭಾರತದಲ್ಲಿ ಚಿನ್ನದ ದರ

ಚಿನ್ನ ಉಳಿತಾಯ ಖಾತೆ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ...

1. ಚಿನ್ನ ಉಳಿತಾಯ ಖಾತೆ (Gold Savings Account)

1. ಚಿನ್ನ ಉಳಿತಾಯ ಖಾತೆ (Gold Savings Account)

ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಿದ ನಂತರ ಪ್ರಮಾಣ ಪತ್ರ ಮತ್ತು ಆಭರಣವನ್ನು ಬ್ಯಾಂಕಿಗೆ ಹಾಜರುಪಡಿಸಿದರೆ ಖಾತೆ ತೆರೆಯುವ ಪ್ರಾಥಮಿಕ ಹಂತ ಮುಗಿಯುತ್ತದೆ. ಚಿನ್ನದ ಪ್ರಮಾಣದ ಆಧಾರದಲ್ಲಿ ಖಾತೆ ತೆರೆಯಲಾಗುವುದು. ಗ್ರಾಹಕನ ಖಾತೆಗೆ ಉಳಿತಾಯ ಖಾತೆಯಲ್ಲಿ ಹೇಗೆ ನಿರ್ದಿಷ್ಟ ಮೊತ್ತದ ಹಣ ಸಂದಾಯವಾಗಿರುತ್ತದೆಯೋ ಇಲ್ಲಿ ಆತ ನೀಡಿದ ಚಿನ್ನ ಸಂದಾಯವಾಗಿರುತ್ತದೆ.

2. ಬ್ಯಾಂಕುಗಳು ನೀಡುವ ಬಡ್ಡಿ

2. ಬ್ಯಾಂಕುಗಳು ನೀಡುವ ಬಡ್ಡಿ

ಚಿನ್ನದ ಉಳಿತಾಯ ಖಾತೆ ತೆರೆದ ನಂತರ ತಿಂಗಳು ಅಥವಾ ಎರಡು ತಿಂಗಳು ಕಾಲ ಕಳೆದ ನಂತರ ಬ್ಯಾಂಕ್ ಬಡ್ಡಿ ನೀಡಲು ಆರಂಭಿಸುತ್ತದೆ. ಯಾವ ಪ್ರಮಾಣದ ಬಡ್ಡಿ ನೀಡಬೇಕು ಎಂಬುದನ್ನು ಬ್ಯಾಂಕುಗಳು ನಿರ್ಧರಿಸುತ್ತವೆ. ಯಾವ ಗುಣಮಟ್ಟದ ಚಿನ್ನ ಇಡಲಾಗಿದೆ, ಚಿನ್ನದ ದರದಲ್ಲಿ ಆದ ಬದಲಾವಣೆಗಳೇನು? ಎಂಬುದನ್ನೆಲ್ಲ ಆಧರಿಸಿ ಬಡ್ಡಿ ನೀಡಲಾಗುವುದು.

3. ರಿಡೆಂಪ್ಶನ್(ಬಿಡುಗಡೆ)

3. ರಿಡೆಂಪ್ಶನ್(ಬಿಡುಗಡೆ)

ಗ್ರಾಹಕರು ಖಾತೆಯಲ್ಲಿ ಇಡುವ ಚಿನ್ನಕ್ಕೆ ಬದಲಾಗಿ ಹಣವನ್ನು ಅಥವಾ ಚಿನ್ನವನ್ನು ಪಡೆದುಕೊಳ್ಳಬಹುದು. ಆದರೆ ಈ ಬಗ್ಗೆ ಖಾತೆ ತೆರೆಯುವಾಗ ಕೆಲ ನಿಯಮಗಳನ್ನು ಒಪ್ಪಿಕೊಂಡಿರಬೇಕಾಗುತ್ತದೆ. ಜತೆಗೆ ಖಾತೆಗೆ ತೆರೆಯುವಾಗಲೇ ಈ ವಿಷಯ ತಿಳಿಸಲಾಗುತ್ತದೆ.

4. ಅವಧಿ

4. ಅವಧಿ

ಚಿನ್ನ ಉಳಿತಾಯ ಖಾತೆಯ ಕನಿಷ್ಟ ಅವಧಿ ಒಂದು ವರ್ಷ ಆಗಿರುತ್ತದೆ. ಇದಕ್ಕೂ ಹೆಚ್ಚಿನ ಅವಧಿಗೆ ಇಡಬಹುದು. ಸ್ಥಿರ ಠೇವಣಿಯಂತೆ, ಖಾತೆ ಅವಧಿಯಲ್ಲಿ ಬ್ರೇಕಿಂಗ್ ಆಪ್ ಲಾಕ್ ಗೆ ಅವಕಾಶವಿರುತ್ತದೆ.

5. ತೆರಿಗೆ ವಿನಾಯಿತಿ

5. ತೆರಿಗೆ ವಿನಾಯಿತಿ

1999ರ ಚಿನ್ನ ಉಳಿತಾಯ ಯೋಜನೆ(Gold Deposit Scheme) ಅನ್ವಯ ಗ್ರಾಹಕರು ಬಂಡವಾಳ ಗಳಿಕೆ ತೆರಿಗೆ, ಸಂಪತ್ತು ತೆರಿಗೆ ಮತ್ತು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತಾರೆ. ಚಿನ್ನಕ್ಕೆ ದೊರೆಯುವ ಬಡ್ಡಿಗೆ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ ಹೆಚ್ಚಿನ ಬಡ್ಡಿ ವಿಧಿಸಲಾಗುವುದಿಲ್ಲ.

ಕೊನೆ ಮಾತು

ಕೊನೆ ಮಾತು

ಚಿನ್ನ ಉಳಿತಾಯ ಯೋಜನೆಯಲ್ಲಿ ಚಿನ್ನ ಹೂಡಿಕೆ ಮಾಡುವುದು ಅಥವಾ ಚಿನ್ನದ ಪತ್ರಗಳನ್ನು ಪಡೆದುಕೊಳ್ಳುವುದರಲ್ಲಿ ಕೆಲ ವ್ಯತ್ಯಾಸಗಳಿದೆ. ಇಲ್ಲಿ ಶುದ್ಧ ಚಿನ್ನವನ್ನೇ ಹೂಡಿಕೆಗೆ ಬಳಸಿದರೆ ಬ್ಯಾಂಕ್ ನಿಂದ ಚಿನ್ನದ ಪತ್ರಗಳನ್ನು ಪಡೆದುಕೊಳ್ಳುವುದು ಮತ್ತೊಂದು ವಿಧಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+