ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಬಂಗಾರವೆಂದರೆ ಭಾರತೀಯರಿಗೆ ಎಲ್ಲಿಲ್ಲದ ವ್ಯಾಮೋಹ. ಚಿನ್ನಾಭರಣಗಳ ಬೆಲೆ ಎಷ್ಟೇ ಏರಿಕೆ ಕಂಡರೂ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಹೆಚ್ಚೆಚ್ಚು ಚಿನ್ನಾಭರಣಗಳನ್ನು ಖರೀದಿಸುವುದು ಹಾಗೂ ಧರಿಸುವುದು ಕೆಲವರಿಗೆ ಹೆಮ್ಮೆ ಹಾಗೂ ಪ್ರತಿಷ್ಠೆಯ ವಿಷಯವೂ ಹೌದು.

  ಹಬ್ಬ ಮತ್ತು ಮದುವೆ ಸೀಸನ್ ಗಳಲ್ಲಿ ಆಭರಣ ಮಳಿಗೆಗಳು ಗ್ರಾಕರಿಂದ ತುಂಬಿ ತುಳುಕುತ್ತಿರುತ್ತವೆ. ಆಭರಣಗಳನ್ನು ಖರೀದಿಸಲು ಸಾಕಷ್ಟು ಸಮಯ ಮತ್ತು ಶ್ರಮ ವ್ಯರ್ಥಮಾಡುತ್ತೇವೆ. ಸಾಕಷ್ಟು ಹುಡುಕಾಡಿ ತಡಕಾಡಿ ಇಷ್ಟದ ವಿನ್ಯಾಸ ಇರುವ ಆಭರಣ ಕೊಳ್ಳುತ್ತೇವೆ.
  ಹಾಗಿದ್ದರೆ ಚಿನ್ನಾಭರಣಗಳನ್ನು ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ಸಂಗತಿಗಳೇನು? ಅನುಸರಿಸಬೇಕಾದ ಸೂತ್ರಗಳೇನು? ಯಾವ ಯಾವ ಪರೀಕ್ಷೆಗಳನ್ನು ನಾವೇ ಮಾಡಲು ಸಾಧ್ಯ? ಪರಿಶುದ್ದ ಚಿನ್ನ ಅಳೆಯುವ ಮಾನದಂಡಗಳೇನು? ಹೀಗೆ ಹಲವು ಮೂಲಭೂತ ತಿಳುವಳಿಕೆ ನಮ್ಮಲ್ಲಿರಬೇಕಾದದ್ದು ಅಗತ್ಯ.

   

  ಚಿನ್ನಾಭರಣ ಖರೀದಿಗೂ ಮುನ್ನ ಚಿನ್ನದ ಪರಿಶುದ್ದತೆ ಅರಿಯಲು ಈ ಕೆಳಗಿನ ಪ್ರಮುಖ ಮಾನದಂಡಗಳನ್ನು ತಪ್ಪದೆ ಅರಿತುಕೊಳ್ಳುವುದು ಮುಖ್ಯ.

  1. BIS(ಬಿಐಎಸ್) ಸ್ಟ್ಯಾಂಡರ್ಡ್ ಗುರುತು

  ಚಿನ್ನದ ಗುಣಮಟ್ಟವನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಗದಿ ಮಾಡುತ್ತದೆ. ಬಿಐಎಸ್ ಹಾಲ್ ಮಾರ್ಕ್ ನೀಡುವುದರ ಮೂಲಕ ಚಿನ್ನದ ಪರಿಶುದ್ದತೆಯನ್ನು ತಿಳಿಸಿಕೊಡುತ್ತದೆ. ತ್ರಿಕೋನ ಆಕಾರದ ಗುರುತು ಹೊಂದಿರುವ ಲೋಗೋ ಚಿನ್ನದ ಪರಿಶುದ್ದತೆ ಪ್ರಮಾಣವನ್ನು ದೃಢೀಕರಿಸುತ್ತದೆ. ಬಿಐಎಸ್ ಒದಗಿಸುವ ತ್ರಿಕೋನಾಕಾರದ ಹಾಲ್ ಮಾರ್ಕ್ ಲೋಗೋ ಮೂಲಕ ಆಭರಣಗಳ ವಿಶ್ಲೇಷಣೆ ಹಾಗೂ ಪರೀಕ್ಷೆ ಮಾಡಲಾಗುತ್ತದೆ.

  2. ಪ್ಯೂರಿಟಿ ಗ್ರೇಡ್

   ಬಂಗಾರದ ಪ್ಯೂರಿಟಿ ಗ್ರೇಡ್ ಮೂಲಕ ಆಭರಣ ಎಷ್ಟೊಂದು ಪರಿಶುದ್ದವಾಗಿದೆ ಎಂಬುದನ್ನು ಅಳೆಯಲಾಗುತ್ತದೆ. ಆಭರಣಗಳ ಮೇಲೆ ದಾಖಲು ಮಾಡಿರುವ ಅಂಕೆಗಳು ಎಷ್ಟು ಕ್ಯಾರಟ್ ಎಂಬುದನ್ನು ಸೂಚಿಸುತ್ತದೆ.
  999 - 24 ಕ್ಯಾರಟ್ ಶುದ್ದ ಚಿನ್ನ
  958 - 23 ಕ್ಯಾರಟ್
  916 - 22 ಕ್ಯಾರಟ್
  875 - 21 ಕ್ಯಾರಟ್
  750 - 18 ಕ್ಯಾರಟ್
  708 - 17 ಕ್ಯಾರಟ್
  585 - 14 ಕ್ಯಾರಟ್
  417 - 10 ಕ್ಯಾರಟ್
  375 - 9 ಕ್ಯಾರಟ್
  333 - 8 ಕ್ಯಾರಟ್

  3. ಹಾಲ್ ಮಾರ್ಕ್ ಸೆಂಟರ್ ಲೋಗೋ

  ಈ ಮಾರ್ಕ್ ಚಿನ್ನಾಭರಣವನ್ನು ಎಲ್ಲಿ ತಯಾರು ಮಾಡಲಾಗಿದೆ? ಯಾವ ವರ್ಷ ತಯಾರಿಸಲಾಗಿದೆ ಎಂಬುದನ್ನು ತಿಳಿಸುತ್ತದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು http://www.bis.org.in/cert/hallmarkass.htm ಲಾಗ್ ಇನ್ ಆಗುವುದರ ಮುಖೇನ ಪಡೆದುಕೊಳ್ಳಬಹುದು. ಹಾಲ್ ಮಾರ್ಕ್ ಕೇಂದ್ರಗಳ ವಿವರ ಇಲ್ಲಿದೆ. ಕ್ಲಿಕ್ ಮಾಡಿ.

  4. ತಯಾರಿಕೆ ವರ್ಷ

  ಕೋಡ್ ಸಂಖ್ಯೆಗಳು ಚಿನ್ನಾಭರಣ ತಯಾರಾದ ವರ್ಷವನ್ನು ಪ್ರತಿನಿಧಿಸುತ್ತವೆ. ಇದನ್ನು ಬಿಐಎಸ್ ನಿರ್ಧಾರ ಮಾಡುತ್ತದೆ. ಉದಾಹರಣೆಗೆ A ಎಂದಿದ್ದರೆ 2000ನೇ ಇಸವಿ, J ಎಂದಿದ್ದರೆ 2008, N ಎಂದಿದ್ದರೆ 2010, M ಎಂದಿದ್ದರೆ 2012ನೇ ವರ್ಷ ಎಂದು ತಿಳಿದುಕೊಳ್ಳಬಹುದು.

  5. ಆಭರಣ ತಯಾರಕರ ದೃಢೀಕರಣ

  ಪ್ರಖ್ಯಾತ ಚಿನ್ನ ತಯಾರಿಕ ಸಂಸ್ಥೆಗಳು ಈ ಮಾರ್ಕ್ ಪಡೆದುಕೊಂಡಿರುತ್ತವೆ. ನೋಂದಣಿಯಾಗದ ಸಂಸ್ಥೆಗಳ ಚಿನ್ನಕ್ಕೆ ಚಿಹ್ನೆ ನೀಡಲಾಗುವುದಿಲ್ಲ. KDM ಹಾಲ್ ಮಾರ್ಕ್ ಆಭರಣ ಅಲ್ಲದೆ ಆಗಿರುವುದರಿಂದ ಇದು ಪರಿಶುದ್ದ ಚಿನ್ನ ಆಗಿರುವುದಿಲ್ಲ ಎಂಬುದನ್ನು ಗಮನಿಸಿ.
  ನೋಡಿ: ಚಿನ್ನಾಭರಣ ಮಳಿಗೆಯವರು ಬಿಐಎಸ್ ಹಾಲ್ ಮಾರ್ಕ್ ಹೊಂದದ ಆಭರಣ ಮಾರುತ್ತಿದೆಯೆ ನೋಡಿ.
  ಖರೀದಿಸಿ: ಹಾಲ್ ಮಾರ್ಕ್ ಆಭರಣ ಮಾತ್ರ. ಇದು ಪರಿಶುದ್ದತೆ/ಗುಂಮಟ್ಟದ ಮಾನದಂಡ
  ಕೇಳಿ: ನಗದು ಮೆಮೊ/ಸರಕುಪಟ್ಟಿ(Cash Memo /Invoice) ಇವುಗಳಲ್ಲಿ ಯಾವುದು ದೂರುಗಳನ್ನು ಪರಿಹರಿಸಲು ಸಹಾಯಕವಾಗುತ್ತದೆ.

  6. ಚಿನ್ನಾಭರಣ ಪರಿಶುದ್ದತೆ ಪರೀಕ್ಷಿಸುವ ಅಗತ್ಯ ಏನು?

  ಖರೀದಿಸಿದ ಆಭರಣಗಳನ್ನು ಮಾರಬೇಕಾದ ಸಂದರ್ಭ ಒದಗಿ ಬಂದರೆ ಮೇಲಿನ ಎಲ್ಲ ಅಂಶಗಳು ಪ್ರಮುಖವಾಗುತ್ತವೆ. ಒಂದುವೇಳೆ ಹಾಲ್ ಮಾರ್ಕ್ ಇಲ್ಲದ ಚಿನ್ನಾಭರಣ ನೀವು ಖರೀದಿಸದಲ್ಲಿ ಮಾರಬೇಕಾದ ಸಂದರ್ಭದಲ್ಲಿ ಅಥವಾ ಹೊಸ ಚಿನ್ನವನ್ನಾಗಿ ಪರಿವರ್ತಿಸ ಬಯಸಿದಲ್ಲಿ ಸಮಸ್ಯೆಗಲೂ ಎದುರಾಗುತ್ತವೆ. ಹೀಗಾಗಿ ಇತ್ತಿಚಿನ ದಿನಗಳಲ್ಲಿ ಎಲ್ಲ ಚಿನ್ನಾಭರಣ ಮಳಿಗೆಯವರು ಅತ್ಯಾಧುನಿಕ ಯಂತ್ರಗಳನ್ನು ಅಮದು ಮಾಡಿಕೊಂಡಿರುತ್ತಾರೆ.
  ಇತ್ತಿಚಿಗೆ ಹೈದ್ರಾಬಾದ್ ನಲ್ಲಿ X-Ray ಪ್ರತಿದೀಪ್ತಿ ಯಂತ್ರ ಅಳವಡಿಸಲಾಗಿದ್ದು, ಆ ಮೂಲಕ ಚಿನ್ನಾಭರಣ ಪರಿಶೀಲನೆ ಮಾಡಿ ಆಭರಣದ ಪರಿಶುದ್ದತೆ ನಿರ್ಧರಿಸಿ ನೀಡುತ್ತದೆ. ಕಳಪೆ ಚಿನ್ನವನ್ನು ಖರೀದಿಸಿದ್ದರೆ ನೀವು ನಷ್ಟ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ.

  English summary

  How to Check Purity of Gold in India?

  In India, jewellery is made from 22 Karat gold where as internationally it is 14 and 18 karat gold. Indians love to buy gold for most of the occasions be it wedding or any auspicious day.
  Story first published: Monday, November 21, 2016, 11:10 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more